ಋಗ್ವೇದ ಪ್ರಿಯ ವಿಠಲ | ಸದ್ಗುಣಾರ್ಣವನೇ ಪ
ಋಗ್ವಿನುತ ನೀನಾಗಿ | ಈಕೆಯನು ಪೊರೆಯೋ ಅ.ಪ.
ವೇದಾಧಿಕಾರವನು | ನೀ ದಯದಿ ತ್ಯಜಿಸದೆಮೋದದಿಂ ತೋರಿ | ಋಗ್ವೇದ ವಾಚಿಸಿದೇ |ಮೋದ ಮುನಿ ಮತದಲ್ಲಿ | ಸಾಧಿಸಿವಳಲಿ ದೀಕ್ಷೆಭೇದ ಪಂಚಕ ತಿಳಿಸಿ | ಉದ್ಧರಿಸೊ ಇವಳಾ 1
ಹರಿದಾಸ್ಯ ಕಷ್ಟವೆನೆ | ಹಿರಿಯರ ಮತವಿಹುದುತರಳೆ ಆದ ಕಾಂಕ್ಷಿಪಳು | ಪೂರ್ವ ಪುಣ್ಯದಲೀಮುರವೈರಿ ನೀನಾಗಿ ಕರುಣಿಸುತ ತವದಾಸ್ಯಪರಿಹರಿಸು ಭವನೋವ | ಕಾರುಣ್ಯಮೂರ್ತೇ 2
ಭವ | ಮೋಚನವ ಗೈಯ್ಯೋ 3
ಲೌಕಿಕವು ವೈದಿಕವು | ಸಕಲವರ್ಣಾತ್ಮಕನೆವಾಕು ಸಕಲವು ತವ ಆ | ಲೌಕಿಕದ ಮಹಿಮಾವಾಕಾಗಿ ವರ್ತಿಸುತ | ಬೇಕಾದ ವರ ನೀಡಿನೋಕ ನೀಯನೆ ಕಾಯೊ | ಈಕೆಯನು ಹರಿಯೇ 4
ಭಾವಿ ಮರುತರ ಪ್ರೀಯ | ಆವಾವ ಕಾಲಕ್ಕುದೇವ ತವ ಸ್ಮøತಿಯಿತ್ತು | ಕಾವುದೀಕೆಯನೂನೋವು ಸುಖಗಳ ಸಮತೆ | ಭಾವದಲಿ ಅನುಭವಿಪಭಾವ ಕೊಡುವುದು ಗುರೂ | ಗೋವಿಂದ ವಿಠಲಾ 5