ಖಗವರಧ್ವಜ ವಿಠಲ ಪೊರೆಯ ಬೇಕಿವನ ಪ
ಭಾಗವತ ಸುಶ್ಲೋಕ್ಯ ಬಗೆಬಗೆಯಲಿಂದಿವನಮಿಗಿಲಾಗಿ ಪೊರೆಯಲ್ಕೆ | ಪ್ರಾರ್ಥಿಸುವೆ ಹರಿಯೇ ಅ.ಪ.
ವಿತ್ತಪತಿಯೊಲಿಮೆಗಳು | ಕತ್ತರಿಸಿ ಪೋಗಿ ಕೃತಕೃತ್ಯತಾನೆಂಬ ಉ | ತ್ಕøಷ್ಟಮತಿಯೊದಗೇಕೃತಿವಾಸನ ತಾತ | ಇತ್ತುದಕೆ ಸಂತೃಪ್ತಿಪೊತ್ತು ತವದಾಸ್ಯವನು | ಅರ್ಥಿಸುವ ಹರಿಯೇ 1
ಪೋರನಾ ಮಯಕಳೆದು | ತಾರತಮ್ಯ ಜ್ಞಾನ ಮೂರೆರಡು ಭೇದಗಳ | ಸಾರವನೆ ಅರುಹೀಕಾರಣಿಕ ನೀನೆ ಉ | ದ್ದಾರವನೆ ಮಾಡೊ ಹರಿಬೇಕೊಂದ ಪ್ರಾರ್ಥಿಪೆನೊ | ಕಾರುಣ್ಯ ಮೂರ್ತೇ 2
ಅನೇಕ ಜನ್ಮದಲಿ | ಹೀನಯೋನಿಲಿ ನೊಂದುಜ್ಞಾನ ಸಾಧನ ವಿರದೆ | ದೀನ ನಾದವಗೇಮಾನ ನಿಧಿ ಶಾಸ್ತ್ರ ಸಂ | ಧಾನ ವೀಯುತ ತ್ವರ್ಯಧ್ಯಾನ ಸಾಧನ ವೀಯೊ | ಪ್ರಾಣಾಂತರಾತ್ಮಾ 3
ಲೌಕಿಕವನೆಲ್ಲ ವೈ | ದೀಕ ವೆಂದೆನಿಸೊ ಹರಿಕಾಕು ಸಂಗವ ಕೊಡದೆ | ನೀ ಕೊಡೊ ಸತ್ಸಂಗಏಕಮೇವನೆ ಸ್ವಾಮಿ | ಮಾಕಳತ್ರನೆ ನಿನ್ನ_ನೇಕ ಬಗೆಯಲಿ ತುತಿಪ | ವಾಕ್ಸಿದ್ಧಿ ಈಯೋ 4
ಪದ್ಮನಾಭನೇ ಹೃ | ತ್ಪದ್ಮದಲಿ ತವರೂಪಸಿದ್ಧಿಸುತ ಸಂಚಿತವ | ಪ್ರಧ್ವಂಸ ಗೈದೂಅದ್ವೈತ ತ್ರಯದರಿವು | ಬುದ್ದಿಗೆ ನಿಲುಕಿಸೆನೆಹೃದ್ಯ ಗುರು ಗೋವಿಂದ ವಿಠಲ ಬಿನ್ನವಿಪೇ 5