ವಿನುತ ಸಿರಿ | ರಾಮ ವಿಠಲ ಕಾಯೋ ಪ
ಈ ಸತೀ ಮಣಿಯ ನೀ | ಸಲಹಬೇಕೆಂದುಶೇಷ ಸಂಜ್ಞಿತ ಹರಿಯೆ | ಪ್ರಾರ್ಥಿಸುವೆ ಧೊರೆಯೇ ಅ.ಪ.
ಅಮೃತ ಕೂರ್ಮ | ರೂಪದಿಂದರುಹೀಉಪದೇಶ ನೀಡ್ವಗುರು | ರೂಪವನೆ ತೋರಿಸುತಅಪರಿಮಿತ ಕಾರುಣ್ಯ | ರೂಪನಾಗಿರುವೆ 1
ಪರಮ ಗುರು ನಿಜ ರೂಪ | ಎರಡು ಬಾರಿಯು ತೋರಿಸರಸನಾಬ್ಯಾದಿ ಹರುಷ | ಬೀರ್ದೆ ಭಯಹಾರೀಕರುಣವೆಂತುಟೊ ನಿನಗೆ | ಸುರಸಿದ್ಧ ಸಂಸೇವ್ಯಶಿರಿ ರಮಣ ಶ್ರೀರಾಮ | ಪರಮ ಪುರುಷನೆ 2
ಈ ಸತೀಮಣಿ ಬಯಕೆ | ನೀ ಸಲಿಸಿ ಲೌಕಿಕದಿಲೇಸು ಹೊಲ್ಲೆಗಳೆಂಬ | ಪಾಶಗಳ ಬಿಡಿಸೀದೋಷ ದೂರನೆ ಹರಿಯೆ | ನೀ ಸಲಹೆ ಪ್ರಾರ್ಥಿಸುವೆದಾಶರಥೆ ಪೊರೆ ಇವಳ | ಮೇಶ ಮಧ್ವೇಶಾ 3
ಮಧ್ವಮಾರ್ಗದಿ ಇಹಳು | ಶುದ್ಧ ಭಕ್ತಿಜ್ಞಾನಸಿದ್ಧಿಸುತ ಇವಳಲ್ಲಿ | ಉದ್ಧರಿಸೊ ಹರಿಯೇ |ಕೃದ್ಧ ಖಳ ಸಂಹಾರಿ | ಸದ್ಧರ್ಮ ಪಥತೋರಿಅಧ್ವಯನೆ ತವ ನಾಮ | ಶುದ್ಧ ಸುಧೆ ಉಣಿಸೋ 4
ಸರ್ವವ್ಯಾಪ್ತನೆ ದೇವ | ಪವನಾಂತರಾತ್ಮಕನೆದರ್ವಿ ಜೀವಿಯ ಕಾಯೊ | ಶರ್ವವಂದ್ಯಾ |ಸರ್ವ ಸುಂದರ ಗುರು | ಗೋವಿಂದ ವಿಠ್ಠಲನೆಈ ವಿಧದ ಬಿನ್ನಪವ | ನೀವೊಲಿದು ಸಲಿಸೋ 5