ಮುರಳಿ ವಿನೋದ ವಿಠಲ | ಪೊರೆಯ ಬೇಕಿವನಾ ಪ
ದುರಿತ ದುಷ್ಕøತವೆಲ್ಲ | ದೂರ ಸಾಗಿಸುತಾ ಅ.ಪ.
ಚಾರು ಯೌವನದಲ್ಲಿ | ಪರಿಪರಿಯ ಲೌಕಿಕದಿಮಾರಮಣ ಸ್ಮøತಿ ರಹಿತ | ಕರ್ಮವೆಸಗೀಜಾರಿ ಪೋಗಲು ಆಯು | ಆರಾಧ್ಯ ದೇವತೆಯಚಾರುತರ ಪೂಜಿಸಲು | ಸಾರಿ ಬಂದಿಹನಾ 1
ಹಿಂದೆ ಮಾಡಿರುವ ಬಹು | ಮಂದಿ ಜನಗಳ ಸೇವೆಇಂದಿರೇಶನೆ ನಿನ್ನ | ಸೇವೆ ಎಂದೆನಿಸೀಇಂದಿರಾರಾಧ್ಯ ಪದ | ಚೆಂದದಿಂ ಪೊರೆ ಇವನಮಂದರೋದ್ಧಾರಿ ಹರಿ | ಕಂದರ್ಪಪಿತನೇ2
ಧ್ಯಾನ ಯೋಗದಿ ಮನವ | ಸಾನುಕೂಲಿಸು ಇವಗೆಮಾನನಿಧಿ ಮಧ್ವಪದ | ರೇಣುನಾಶ್ರಯಿಸೀಗಾನದಲಿ ತವ ಮಹಿಮೆ | ಪೊಗಳಿಕೆಯನೆ ಇತ್ತು ಪ್ರಾಣಾಂತರಾತ್ಮಕನೆ | ಪಾಲಿಸೈ ಹರಿಯೆ 3
ದೇವಧನ್ವಂತರಿಯೆ | ಪಾವನಾತ್ಮಕ ನಿನ್ನಸೇವೆ ಗಯ್ಯುವವಗಿ | ನ್ನಾವ ದುರಿತಗಳೋಭಾವದಲಿ ಮೈದೋರಿ | ನೀವೊಲಿದು ತೋದರಂತೆದೇವ ತವ ದಾಸ್ಯವನು | ಇತ್ತಿಹೆನು ಹರಿಯೇ 4
ನಾರಸಿಂಹಾತ್ಮಕನೆ | ಕಾರುಣ್ಯದಲಿ ಹೃದಯವಾರಿರುಹ ಮಧ್ಯದಲಿ | ತೋರಿ ತವ ರೂಪ |ಪಾರುಗೈ ಭವವ ಗುರು | ಗೋವಿಂದ ವಿಠಲನೆಸಾರಿ ತವ ಪಾದವನು | ಪ್ರಾರ್ಥಿಸುವೆ ಹರಿಯೇ5