ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂದಿಗೀಪದ ಕರುಣಮಾಡುವೆಯೋ ನಿಮ್ಮ ಧ್ಯಾನಾ ನಂದ ಅಮೃತಪಾರ ನವಿನುಡಿಯ ಪ ಎಂದಿಗೀಪದ ಕರುಣಮಾಡಿ ಕರವ ಪಿಡಿದು ಮಂದಮತಿಯ ತರಿದು ಪೊರೆಯುವೆ ಸಿಂಧುಶಯನ ತಂದೆ ಶ್ರೀಹರಿ ಅ.ಪ ವಿಷಮಸಂಸಾರ ಮೋಹವನು ಬಿಡಿಸಿ ನಿಮ್ಮ ಭಜನ ಅಸಮ ಸುಖದೆನ್ನ ಮನವ ನಿಲ್ಲಿಸಿ ವ್ಯಸನ ಏಳರ ಕಾಟ ತಪ್ಪಿಸಿ ಬಿಡದೆ ಎನ್ನ ರಸನೆಮೇಲ್ನಿಮ್ಮ ನಾಮ ಸ್ಥಾಪಿಸಿ ವಸುಧೆ ಜನರ ಸುದ್ದಿ ಮರೆಸಿ ನಶಿಪ ಲೌಕಿಕದಾಸೆ ಕೆಡಿಸಿ ಕುಶಲಮತಿಯಿತ್ತು ಪಾಲಿಸುವ ಮಹ ಅಸಮಶುಭದಿನ ಕುಸುಮನಾಭ 1 ಹತ್ತು ಇಂದ್ರಿಯ ಮೂರು ಬಾಧೆ ತೊಲಗಿಸಿಬಿಡದೆ ಎನ್ನ ನೇತ್ರದೊಳು ತವಮೂರ್ತಿ ನಿಲ್ಲಿಸಿ ಸುತ್ತಿ ಕೊಲುವ ಮಾಯ ಮುಸುಕು ಹಾರಿಸಿ ನಿತ್ಯದೆನ್ನ ಚಿತ್ತದೊಳು ನಿಜಜ್ಞಾನ ಸ್ಥಿರಪಡಿಸಿ ಸತ್ಯ ಸನ್ಮಾನ್ಯಕ್ತನೆನಿಸಿ ನಿತ್ಯ ನಿರ್ಮಲ ನಿಮ್ಮ ಭಕ್ತರ ಉತ್ತಮ ಸಂದರುಶನವಿತ್ತು ತವ ಭೃತ್ಯನೆನಿಸೆನ್ನ ಸಲಹುವಂಥ 2 ಕ್ಲೇಶ ಪಂಚಕದುರುಲು ಪರಿಹರಿಸಿ ಅನುಮೇಷ ನಿಮ್ಮ ದಾಸಜನರಾವಾಸದೆನ್ನಿರಿಸಿ ಮೋಸಮರವೆಯ ಜಾಲ ಛೇದಿಸಿ ನಿಶಿದಿವದಿ ನಿಮ್ಮ ಧ್ಯಾನದೊಳೆನ್ನ ಮನವಐಕ್ಯೆನಿಸಿ ಮೋಸ ಪಾಶಗಳೆಲ್ಲನಾಶಿಸಿ ದೋಷರಾಶಿಯಿಂ ಮುಕ್ತನೆನಿಸಿ ಶ್ರೀಶ ಶ್ರೀರಾಮ ನಿಮ್ಮ ಚರಣ ದಾಸನೆನಿಸಿ ಪೋಷಿಸುವಂಥ 3
--------------
ರಾಮದಾಸರು