ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಾಸನಾಗು ಹರಿಯ ದಾಸನಾಗು ಮೋಸಹೋಗದೆ ಭವಕೆ ಬ್ಯಾಸರಾಗು ಪ ಭಾನುಮಂಡಲ ಕಂಡು ಶ್ವಾನನುಬ್ಬರಿಪಂತೆ ಭೂನಾಥನಡಿವಿಡಿದು ಬಾಳ್ವೆ ನಿನಗೆ ಹೀನಮಾನವ ಕಂಡಣಕೆ ನುಡಿದರು ಸರಿಯೆ ಜ್ಞಾನನಿಧಿ ಹರಿಭಕುತಿಯ ಲೆಕ್ಕಿಸದೆ ಮಾಡು1 ಕಾಳುವೆಗ್ಗಳವಾಗೆ ಸುಮತಿ ಸಂಗ್ರಹಿಪಂತೆ ಬಾಳುವೆಯೊಳ್ಹರಿಸೇವೆ ಬಲು ಅಗ್ಗವಂತೆ ಕೀಳು ಜನರಲ್ಲಿ ಲೌಕಿಕತೆ ಮರುಳಾಗಿ ಸಂತೆ ಕೇಳುವವರಾರು ಹರಿಭಕುತಿ ಮಾಡುವವರು2 ಮಾರಿಗಾಹುತಿಯಾಗ್ವ ಕುರಿಮೇಕೆ ತೆರನಂತೆ ಘೊರ ಜವನನು ಮರೆತು ಕೊಬ್ಬುವವರಂತೆ ಶೇರು ನರಸಿಂಹವಿಠ್ಠಲನಂಘ್ರಿಕಮಲವಾ ಆರಾರು ಬಾಧೆಯಿಲ್ಲದೆ ಗತಿಯ ಕೊಡುವಾ 3
--------------
ನರಸಿಂಹವಿಠಲರು