ಯಾರಿಗೆ ಯಾರಿಹರೋ ಜಗದಲಿ
ನಾರಾಯಣ ನೀನಲ್ಲದೆ ಬಾಂಧವ ಪ
ಜನನಿ ಜನಕ ಸತಿಸುತ ಸಹಜರುಗಳು
ಮನೆ ಮಠ ಧನಕನಕಾಧಿಗಳೆಲ್ಲವು
ಅನಿಮಿತ್ತ ಬಾಂಧವ ನೀನಲ್ಲದೆ ಹೊಣೆ 1
ದೇಹಬಿಟ್ಟು ಪರದೇಹವ ಸೇರಲು
ಬಾಹರೇ ಲೋಕದ ಬಂಧುಗಳು
ದೇಹ ದೇಹದಲೂ ಕ್ಷಣವಗಲದೆ ಎಂದು
ಸಾಹಚರ್ಯ ಜಗಮೋಹನಗಲ್ಲದೆ 2
ಸಂತೆಗೆ ಸೇರುವ ಗಂಟುಕಳ್ಳರುಗಳ
ತಂಟೆಯು ಬೇಡೆಂದು ಲೌಕಿಕಕೆ
ಅಂಟದಿದ್ದರೆ ದೊಡ್ಡ ಗಂಟನು ಹೊರಿಸುವ
ನಂಟನು ಭಕ್ತ ಪ್ರಸನ್ನ ತಾನಲ್ಲದೆ 3