ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿಲಯ ಐಕೂರು ಗ್ರಾಮಾಲಯ | ಸ್ತಂಭೋಧ್ವವ ದೇವ ನಾಮಧೇಯ ಧ್ವಯಭಾರ್ಯ ಸುಮನಸಪ್ರಿಯ ಸದ್ಭಕ್ತಾರ್ತಿವಿದೂರ ವಿಮಲ ಹೃದಯ ಅತ್ಯಂತ ಕರುಣಾಮಯ | ಅಸ್ಮದ್ ಸದ್ಗುರುವರ್ಯ ನಿತ್ಯ ಸನ್ಮಂಗಳ 1 ಸಾರೋದ್ಧಾರ ಸಂಗೀತ ಭಾರತಿಯುತ ವೇದಾರ್ಥ ಸಂಪೂರಿತ | ಸಹ್ಲಾವಂಶಜ ದಾಸವರ್ಯ ವಿರಚಿತ ಶ್ರೀಶೌರಿ ಸುಕಥಾಮೃತ ಸಾರಜ್ಞಂ ಸುಶೀಲೇಂದ್ರತಿರ್ಥರ ಮಮತ ಸಂಪೂರ್ಣ ಸಂಪಾದಿತ ಅಸ್ಮದಗ ಸದ್ಗುರುವರ್ಯ ನಿತ್ಯ ಸನ್ಮಂಗಳ 2 ಅಷ್ಟಪದಲೋಷ್ಟ ಭಾವಸಮತ | ಕರತಧೀರ ಸನ್ಮಾನಿತ ಅಷ್ಟ್ಯೆಕಾಮಲ ಭಕ್ತಿ ಜ್ಞಾನ ಭರಿತ ವೈರಾಗ್ಯ ಸಂಶೋಭಿತ | ಸೃಷ್ಟ್ಯಂತರ್ಗತ ಮೂರ್ತಿ ಸತತ | ಸಂದರ್ಶನಾನಂದಿತ ನಿತ್ಯ ಸನ್ಮಂಗಳ 3 ಶೃಂಗಾರಾಂಗ ಸುನಾಮದ್ವಾದಶಧೃತ ಮುದ್ರಾಕ್ಷತಾಲಾಂಕೃತ ಕಮಲ ಜಪಿತ ಪದ್ಮಾಕ್ಷಮಾಲಾಂದ್ರಿತೆ ಇಂಗಿತಜ್ಞ ಸುಸಾಧು ಸಂಗ ಸಹಿತ ಮುಕ್ತ್ಯಂಗನಾಲಿಂಗಿತ ನಿತ್ಯ ಸನ್ಮಂಗಳ4 ತಾಪತ್ರಯದೂರ ಪಾಪರಹಿತ | ಕೋಪಾದಿಗುಣವರ್ಜಿತ | ಶಾಪಾನುಗ್ರಹಶಕ್ತ ಸುಜನಪ್ರೀತ ಸಂಸಾರ‌ಘನ ಮಾರುತ ಗೂಡಾರ್ಥ ಸಂಬೋಧಿತ ಅಸ್ಮದ್ ಸದ್ಗುರುವರ್ಯ ಈಯೋ ನೀ ನಿತ್ಯಸನ್ಮಂಗಳ 5 ಆಧ್ಯಾತ್ಮ ಸುವಿಚಾರ ಸತತ ಶೃತ್ಯರ್ಥಬಹು ಗರ್ಭಿತ | ಸತ್ಯವಲ್ಲಭ ಸತ್ಯದೇವ ಚರಿತ ವಕ್ತಾರ ಬುಧ ಸಮ್ಮತ | ನಾಡ್ಯಾಂತರ್ಗತ ಸರ್ವತೀರ್ಥ ಸ್ನಾತ | ತನ್ಮೂರ್ತಿ ಪ್ರತ್ಯಕ್ಷತ ನಿತ್ಯ ಸನ್ಮಂಗಳ 6 ಧರ್ಮಾಚಾರ ವಿಚಾರಶೀಲ ನಿರತ | ಷಟ್ಕರ್ಮ ಸಂಭೂಷಿತ | ನಿರ್ಮತ್ಸರ ಮೋಹ ದೇಹ ಮಮತ ಸುಶರ್ಮಕುಲರಾಜಿತ | ಧಮೋದರವಾತಜಾತ ಪೋತ ಜಾತಾರಿಖತಿವರ್ಜಿತ | ಅಸ್ಮಾದ್ ಸದ್ಗುರುವರ್ಯ ಈಯೋ ನಮಗೆ ಸತತ ನೀ ಸನ್ಮಂಗಳ 7
--------------
ಶಾಮಸುಂದರ ವಿಠಲ
ರಂಗಾ ನಿನ್ನ ಕೊಂಡಾಡುವ ಮಂಗಳಾತ್ಮರ ಸಂಗಸುಖವಿತ್ತು ಕಾಯೋ ಕರುಣಾ ಸಾಗರ ಪ ಅರಿಯರೋ ನೀನಲ್ಲದೆ ಮತ್ತನ್ಯದೈವರ ಮರೆಯರೋ ನೀ ಮಾಡಿದ ಅನಿಮಿತ್ತೋಪಕಾರ ತೊರೆಯರೋ ನಿನ್ನಂಘ್ರಿ ಸೇವಾ ಪ್ರತಿವಾಸರಾ ಒರೆಯರೋ ಪರತತ್ವವಲ್ಲದೆ ಇತರ ವಿಚಾರಾ 1 ಮೂಕ ಬಧಿರರಂತಿಪ್ಪರೋ ನೋಳ್ಪಜನಕೆ ಕಾಕುಯುಕುತಿಗಳನ್ನು ತಾರರೋ ಮನಕೆ ಸ್ವೀಕರಿಸರನರ್ಪಿತ ಒಂದು ಕಾಲಕ್ಕೆ ಆ ಕೈವಲ್ಯಭೋಗ ಸುಖ ಅವರಿಗೆ ಬೇಕೆ 2 ಕಂಡಕಂಡಲ್ಲಿ ವಿಶ್ವರೂಪ ಕಾಂಬೋರೋ ಉಂಡು ಉಣಿಸಿದ್ದೆಲ್ಲ ನಿನ್ನ ಯಜ್ಞವೆಂಬರೋ ಬಂಡುಣಿಯಂದದಿ ನಾಮಾಮೃತವ ಸವಿವರೋ ಹೆಂಡಿರು ಮಕ್ಕಳು ನಿನ್ನ ತೊಂಡರೆಂಬೋರೋ 3 ಬಿಡರು ತಮ್ಮ ಸ್ವಧರ್ಮಗಳೇನು ಬಂದರೂ ಬಡರು ದೈನ್ಯ ಒಬ್ಬರಿಗೂ ಲೋಕ ವಂದ್ಯರೊ ಪಿಡಿಯರೋ ನಿನ್ನ ದ್ವೇಷಿಗಳಿಂದೇನು ಬಂದರು ಕೊಡುವರೋ ಬೇಡಿದಿಷ್ಟಾರ್ಥ ನಿತ್ಯಾನಂದರೂ 4 ಜಯಾಜಯ ಲಾಭಾಲಾಭ ಮಾನಾಪಮಾನಾ ಭಯಾಭಯ ಸುಖದುಃಖ ಲೋಷ್ಟ ಕಾಂಚನಾ ಪ್ರಿಯಾಪ್ರಿಯ ನಿಂದಾಸ್ತುತಿಗಳನುದಿನಾ ಶ್ರೀಯರಸ ಚಿಂತಿಸುವರೋ ನಿನ್ನ ಅಧೀನ 5 ಈಶಿತವ್ಯರೆಂಬರೋ ಏಕಾಂತ ಭಕ್ತರೋ ದೇಶಕಾಲೋಚಿತ ಧರ್ಮ ಕರ್ಮಾಸಕ್ತರು ಆಶಾ ಕ್ರೋಧ ಲೋಭ ಮೋಹ ಪಾಶ ಮುಕ್ತರು ಈ ಸುಜನರೇವೆ ಶಾಪಾನುಗ್ರಹ ಶಕ್ತರು 6 ನಗುವರೋ ರೋದಿಸುವರೊ ನಾಟ್ಯವಾಡೋರೊ ಬಗೆಯರೋ ಬಡತನ ಭಾಗ್ಯ ಭಾಗವತರು ತೆಗೆಯರೋ ನಿನ್ನಲ್ಲಿ ಮನ ಒಮ್ಮೆಗಾದರೂ ಜಗನ್ನಾಥವಿಠಲ ನಿನ್ನವರೇನು ಧನ್ಯರೋ 7
--------------
ಜಗನ್ನಾಥದಾಸರು