ಮನವು ಕರಗದೇನೋ ಸಿರಿಹರಿ ಮುನಿಸದೇಕೆ ಪೇಳೋ ಪ
ತನು ಮನ ಧನಗಳ ನಿನಗೊಪ್ಪಿಸುತ್ತಲಿ
ಮುನಿವರರೊಲು ನಿನ್ನ ನೆನೆಯಲಿಲ್ಲವುಯೆಂದು ಅ.ಪ
ಬಾಲತನದೆ ನಿನ್ನ ನೆನೆಯದೆ ಕಾಲಕಳೆದೆ ಯೌವನದೊಳು
ಲೋಲುಪನಾದೆನ್ನ ಕಾಲದೂತರು ಬಂದು ನೂಲಿಂದಚಿಳೆದರೂ 1
ಜಗವು ಚಿರವೆಂದು ಸತತವು ಬಗೆದು ಭ್ರಾಂತನಾದೆನ
ಅಗಣಿತ ನೀಲಮಣಿ | ಖಗಪತಿವಾಹನ [ಪೊರೆಯಲಿನ್ನು] 2
ಗಂಗಾಧರ ರಂಗಾ ನೀನೆನ್ನಂತರಂಗದೆ ನಿಲಲಿನ್ನು3