ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾಲಯಮಾಂ ಪರಮೇಶಚಿತಕಾಲಿ ಸಂತತಮಂಬಿಕೇಶಭೂರಿಲೀಲ ಶಂಕರವಿಯತ್ಕೇಶಕರುಣಾಲಯಹೃತಪಶುಪಾಶಧೃತಶೂಲ ವಿಶಾಲ ಕಪಾಲ ಕರಾಲಕಂ-ಕಾಲಿಕಾಕೂಲ (?) ವಿಲೋಲಾಸ್ಥಿಮಾಲಾ ಪ ವಾರಣಾಸುರ ಚರ್ಮಚೇಲಸುರವಾರಸೇವಿತ ಗಾನಲೋಲಭಕ್ತಾಧಾರ ಸಕಲ ಜಗನ್ಮೂಲನಿರ್ವಿಕಾರ ಮೃಕಂಡು ಕಸಾಲಹಾರ ಹೀರ ಮಂದಾರ ಪಟೀರ ನೀಹಾರಗೋಕ್ಷೀರ ಕರ್ಪೂರ ಸುಧಾರಸಗೌರ1 ವ್ಯೋಮತರಂಗಿಣೀಜೂಟಜಿತಕಾಮಪಾಲಿತ ಸರ್ವಖೇಟವಿತತಾಮಲಾಂಬರ ಪುಷ್ಪವಾಟರಘುರಾಮಪೂಜಿತ ಪಾದಪೀಠಪೂರ್ಣಕಾಮಾತಿಧಾಮಾಭಿರಾಮ ನಿಸ್ಸೀಮಸುತ್ರಾಮ ಮುಖ್ಯಾಮರಸ್ತೋಮಲಲಾಮ 2 ಗೋಪತಿರಾಜಿತುರಂಗಘೋರಪಾಪಾಂಧಕಾರಪತಂಗದಿವ್ಯತಾಪಸಹೃದಯಾಬ್ಜಭೃಂಗವಿಶ್ವವ್ಯಾಪಕನಿಗಮಾಂತರಂಗಯಾಮಿನಿಪಕಲಾಪಾದ್ರಿಚಾಪರಮಾಪತಿರೂಪನಿರ್ಲೇಪ ಕೆಳದಿ ರಾಮೇಶ ಚಿದ್ರೂಪ 3
--------------
ಕೆಳದಿ ವೆಂಕಣ್ಣ ಕವಿ
ಸಾರಿದ ಭಕ್ತಸಂಸಾರಿ ಮಾಲಿಂಗ ಕ್ಷೀರ ಗ್ರಾಮದಿ ನಿಂತ ಧೀರ ಮಾಲಿಂಗ ಪ ಹರ ಹರ ಮಹಾದೇವ ಶಿವಮಾಲಿಂಗ ವರ ಶಂಭೊ ಗಿರಿವಾಸ ಶಂಕರ ಮಾಲಿಂಗ ಉರಗ ಭೂಷಣ ಗಂಗಾಧರನೆ ಮಾಲಿಂಗ ಪರದೈವ ಶಶಿಮೌಳಿ ಗರುವ ಮಾಲಿಂಗ 1 ಖಂಡಲಪತಿಯೆ ದೋರ್ದಂಡ ಮಾಲಿಂಗ ತಂಡದ ಸುರರೊಳ್ ನಂಜುಂಡ ಮಾಲಿಂಗ ರುಂಡಮಾಲೆಯ ಧರಿಸಿಕೊಂಡ ಮಾಲಿಂಗ ಕೆಂಡಾಕ್ಷತೇಜ ಮಾರ್ತಾಂಡ ಮಾಲಿಂಗ 2 ಮಾರಹರನೆ ಶ್ರುತಿಸಾರ ಮಾಲಿಂಗ ಧೀರ ಬಾಣನ ದ್ವಾರ ಸಾರಿ ಮಾಲಿಂಗ ಮೂರುಪುರ ವೀರ ಸಂಹಾರಿ ಮಾಲಿಂಗ ಘೋರ ಸಂಸಾರ ಭವದೂರ ಮಾಲಿಂಗ 3 ಬ್ರಹ್ಮಾದಿ ಸುರವಂದ್ಯ ಹರ್ಮಿ ಮಾಲಿಂಗ ನಿರ್ಮಲ ರೂಪಕ ಧರ್ಮಿ ಮಾಲಿಂಗ ಕರ್ಮಬಂಧದ ನರವರ್ಮಿ ಮಾಲಿಂಗ ಉರ್ವಿಯೊಳು ನೀ ಬಹಳ ಪೆರ್ಮಿ ಮಾಲಿಂಗ 4 ನೀಲಕಂಠನೆ ನಿಗಮಶೀಲ ಮಾಲಿಂಗ ಪಾಲ ಕರಶೂಲ ಕಪಾಲಿ ಮಾಲಿಂಗ ಕಾಲ ಕಲ್ಪಾಂತಕ ಜಾಲ ಮಾಲಿಂಗ ಲೋಲಾಸ್ಥಿಮಾಲ ಸುರಮೂಲ ಮಾಲಿಂಗ 5 ಪ್ರಣವ ರೂಪಕ ಪಾರ್ವತಿ ಮಾಲಿಂಗ ತ್ರಿಣಯ ಗಣಸೇವಪರ ಧಣುರೆ ಮಾಲಿಂಗ ಮಣಿ ಕರ್ಣಾಭರಣ ಮಾಲಿಂಗ ಅಣುಮಹಾರೂಪ ಗುಣನಿಧಿಯೆ ಮಾಲಿಂಗ 6 ಪಂಥ ಬೇಡೆನ್ನೊಳು ನಿಶ್ಚಿಂತ ಮಾಲಿಂಗ ಸಂತತ ಸಲಹೆನ್ನ ಕಾಂತ ಮಾಲಿಂಗ ಅಂತರಾತ್ಮಕನಾದ ಶಾಂತ ಮಾಲಿಂಗ ಚಿಂತಿತಾರ್ಥವ ತೋರುವಂಥ ಮಾಲಿಂಗ 7 ಬೇಡಿದ ವರಗಳ ನೀಡೊ ಮಾಲಿಂಗ ಮಾಡಿದ ಸೇವೆಯ ನೋಡೊ ಮಾಲಿಂಗ ಜೋಡಾಗಿ ನಿನ್ನೊಳು ಕೂಡೊ ಮಾಲಿಂಗ 8 ಭೂಮಿಗೆ ವರಾಹತಿಮ್ಮಪ್ಪನಂತೆ ಗ್ರಾಮ ಮಂದಿರದೊಳು ನೆಲಸಿಹನಂತೆ ಪ್ರೇಮದಿ ಅದನೆಲ್ಲ ಕಡಿದುಕೊಡುವಂತೆ ಈ ಮಹಾ ಮಾಲಿಂಗ ಸ್ವಾಮಿ ದಯವಂತೆ 9
--------------
ವರಹತಿಮ್ಮಪ್ಪ