ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವ ಜನ್ಮದ ಪುಣ್ಯ ಫಲಿಸಿತೆನಗೆ | ಈ ಉಡುಪಿ ಕೃಷ್ಣನ ಪ್ರಸಾದ ಭುಂಜಿಸಿದೆ ಪ ಭವರಾಸಿಗಳು ಹಾರಿ ಬಯಲಾದವು| ನವವಿಧ ಭಕುತಿಯಾ ಮಾರ್ಗವನೆ ತಿಳಿದು ಮಾ | ಪರಿ ಶುದ್ಧನಾದೆ ಗುರು ಕರುಣದಲೀ1 ಶಾಖಫಲ ಕೈಕೊಳಲು ಅರಿಷಡ್ವರ್ಗಗಳಿಂದ | ಕಾಕೆಟ್ಟು ಪೋಗುವವು ಏನೆಂಬೆ ಸೋಜಿಗವು | ಲೋಕದೊಳಗೆ ನಮ್ಮ ಕುಲಗೋತ್ರಜರೆ ಧನ್ಯ 2 ಸೂಪವನು ಉಂಡರೆ ಮುಂದಟ್ಟಿ ಬರುತ್ತಿಪ್ಪ | ಸೋಜಿಗವು ಬಲು ತೀವ್ರದಲಿ 3 ಭಕ್ಷ್ಯಗಳು ಮೆಲಲಾಗಿ ಭಕ್ತಿ ಪುಟ್ಟುವದಯ್ಯಾ | ಅಕ್ಷಯವಾಗುವದು ಇದ್ದ ಪುಣ್ಯ | ಮಾಳ್ಪ ಮನಸು ಪುಟ್ಟಿತು ನೋಡಾ4 ಓದನವು ಉದರದಲಿ ತುಂಬಲಾಕ್ಷಣದಲ್ಲಿ | ಜ್ಞಾನ ಬಂದೊದಗುವದು ಗುರು ಪೂರ್ಣ | ಬೋಧರಾ ಮತದಲ್ಲಿ ಲೋಲಾಡುವಾನಂದಾ 5 ದಧಿ ತಕ್ರ ಮೊದಲಾದ ವ್ಯಂಜನ ಉಣಲು | ಸತತ ದುರ್ವಿಷಯಕ್ಕೆ ಪೋಗದಲೆ ಆವಾಗ | ರತಿಪತಿಪಿತನ ಪದಸೇವೆಯೊಳಗಿಪ್ಪವೊ 6 ಕೃಷ್ಣ ಸಂದರುಶನ ಮೃಷ್ಟಾನ ಭೋಜನ | ಇಷ್ಟ ಸುಖ ಸೌಖ್ಯಕರ ಮತ್ತಾವÀಲ್ಲಿ ಕಾಣೆ | ಸೃಷ್ಟಿಗೊಡೆಯ ವಿಜಯವಿಠ್ಠಲನು ದಯವಾಗೆ 7
--------------
ವಿಜಯದಾಸ
ಎತ್ತಿಕೊಂಡ್ಹೋಗುವೆನೆ ಈ ಕೂಸಿನ್ನ ಎತ್ತಿಕೊಂಡ್ಹೋಗುವೆನೆ ಪ ಎತ್ತಿಕೊಂಡ್ಹೋಗುವೆ ಮುತ್ತಿನಂಥಾ ಕೂಸುಹತ್ತಲಿ ಬರುವುದು ಚಿತ್ತಬಿಟ್ಟಗಲದು ಅ.ಪ. ಗುಂಡು ಬಿಂದಲಿ ಕೈಯೊಳು ಮುತ್ತಿನ ದಿವ್ಯ ಚೆಂಡುಪಿಡಿದ ಬಿಡನುಹಿಂಡು ಬಾಲರ ಕೂಡಿಕೊಂಡು ಆಡುವ ಕೂಸುಇಂಥ ಕಂದನ್ನ ಪಡೆದಿಯೇನೇ ಗೋಪಮ್ಮ ನೀ 1 ನೀಲ ಮಾಣಿಕ ಗೆಜ್ಜೆಯುಭಾಳ ಕಡೆಗೆ ಪೋಗಿ ಲೋಲಾಡುವ ದೃಷ್ಟಿಮಾಲೆಯನ್ಹಾಕಿ ತಾರೆ ಗೋಪಮ್ಮ 2 ಅರಳೆಲೆನಿಟ್ಟಿಹದು ಮುಂದಲೆಯಲ್ಲಿ ಜರದ ಕುಂಚಿಗೆ ಇಹುದುತೆರದ ಕಣ್ಣು ಮುಚ್ಚಿ ತೆರೆದು ನೋಡುತಲಿದ್ದಎರೆದು ಮಲಗಿಸಿದೆಯೇನೆ ಗೋಪಮ್ಮ ನೀ 3 ಎಷ್ಟು ಜನ್ಮದ ಪುಣ್ಯವು ಬಂದೊದಗೀತ ಪುಟ್ಟಿದೆ ಇಂಥ ಕೂಸುಪುಟ್ಟ ಬಾಲಗೆ ಉಮ್ಮಕೊಟ್ಟು ಬಟ್ಟಲಿ ನಾನುದೃಷ್ಟಿಯು ಮುರಿಯುವೆನೇ ಗೋಪಮ್ಮ ನಾ 4 ಮಂದಿ ಕೈಯಲಿ ಕೊಡೆನೆ ಈ ಕೂಸಿನ್ನ ತಂದು ಕೊಡುವೆನೆ ನಾನುಇಂದಿರೇಶನ ಬಿಟ್ಟು ನಿಂದಲಾರದ ಮನಇಂಥ ಕಂದನ್ನ ಪಡೆದಿಹೆನೆ ಗೋಪಮ್ಮ ನೀ 5
--------------
ಇಂದಿರೇಶರು
ಏನೆಂದು ಬಣ್ಣಿಸುವೆನೊ ನಾನು | ಶ್ರೀನಾಥ ಪ್ರಿಯಳಾದ ಶ್ರೀ ತುಳಸಿ ಮಹಿಮೆಯನು ಪ ಅಮೃತ ಕಲಶ ಬರೆಕಂಡು ಅತಿ | ಜಲಜಾಂಬಕನ ಪ್ರೇಮಾಂಜಲ ಉದರಲು | ಇಳಯೊಳದಿರಿಂದುದಿಸಿ ಬೆಳೆದು ನಿಂದಿರೆ ನೋಡಿ | ಒಲಿದು ಕೋಮಲ ಮುಗುಳು ತಳೆದ ಶ್ರೀಹರಿ ತಾನು 1 ಹರಿಯು ಧರಿಸಿದ ಕಂಡು ಸುರರೆಲ್ಲ ವಂದಿಸುತ | ಶಿರದಲಾಂತರು ಪರಮ ಹರುಷದಿಂದ | ಸಿರಿಸರಸ್ವತಿ ಗಿರಜೆ ನಿರುತ ನಿನ್ನಯ ವ್ರತದಿ | ಧರೆಯೊಳಗೆ ತಮ್ಮ ತಮ್ಮ ಅರಸರೊಲಿಸಿದರೆಂದು 2 ದುರಿತ ಕುಲ ಓಡುವವು ತನುವ ನೀ ಡಾಡಿ ಜಲನೀಡಿ ಕೊಂಡಾಡಿ ನಿಂದು | ಕೂಡೆ ಮೃತ್ತಿಕೆ ಫಣಿಗೆ ತೀಡಿದರೆ ಭಕುತಿಯಲಿ | ಬೇಡಿದಿಷ್ಟಾರ್ಥ ಕೈಗೂಡಬಹುದಿಳೆಯೊಳಗೆ 3 ತುಲಸಿ ಭಕುತಿಲ್ಲದವ ಕಲಿವಂಶದನುಜನವ | ತುಲಸಿ ಧರಿಸಿದ ತನುವು ಸಲೆಮುಕ್ತಿ ಮಂಟಪವು | ತುಲಸಿ ಬೆಳೆಹದಿ ಮನೆಯು ಬಲಿದ ಪುಣ್ಯದ ಖಣಿಯು | ತುಲಸಿ ಇಲ್ಲದ ಗೇಹ ಕಲುಷಾಲಯ 4 ಮೂಲದಲಿ ಬ್ರಹ್ಮ ತಾ ನೀಲಕಂಠನು ನಡುವೆ | ಮೇಲುತುದಿಯಲಿ ವಿಷ್ಣು ಲೋಲಾಡುವಾ | ಸಾಲಕೊಂಬೆಗಳಲಿ ವಿಶಾಲದೇವತೆಗಳಿಹರು | ತಾಳಿ ಪ್ರೇಮವನು ಮಹೀಪತಿ ನಂದನಾಜ್ಞೆಯಲಿ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮರವೆ ಮುಸುಕಿದುದುತಾ ಪರಮ ಕೃಪೆವಂತ ಬಂದು ಪ್ರಳಾಪವೇನಿದುಯೆಂದು ನನ್ನಯತಾಪವನು ತಂಪಿಸುತ ಬಿಗಿಯಪ್ಪಿದನು ದೇಶಿಕನು 1ಕಂಗಳೊಳಗಾನಂದಜಲ ಸುರಿದಂಗದೊಳು ರೋಮಾಂಚವಾಗಿಯೆಮಂಗಳಾಕೃತಿಗಂಡು ಚರಣಕ್ಕೆರಗಿದೆನು ಮರಳಿಕಂಗಳೊರತೆಯ ತೊಡೆದು ದಿವ್ಯ ಕರಂಗಳಿಂದಲಿ ಶಿರತಡ' ಸರ್ವಾಂಗವನು ಬಿಗಿಯಪ್ಪಿಯಭಯವನಿತ್ತ ದೇಶಿಕನು 2ನಿನ್ನೊಳಾನಿಹೆನೆಲ್ಲಿ ಪೋಪೆಡೆಯನ್ನು ತೋರಿಸು ನನಗೆ ನೀನಾರೆನ್ನ ಮನ ನಿನ್ನುವನುಳಿದು ನಿಲಬಲ್ಲುದೇ ಮಗನೇಇನ್ನು ಧೈರ್ಯವ ಮಾಡು ಗಿರಿಗುಹೆಯನ್ನು ಸೇರ್ವೆನು ನಾನು ಜನತತಿಯನ್ನು ಹೊದ್ದುವದಿಲ್ಲವೆಂದುಸುರಿದನು ದೇಶಿಕನು 3ಇರಿಸಿರುವೆನೀ ಪಾದುಕೆಗಳನು ಹರುಷದಿಂದರ್ಚಿಸುತ ಭಾ'ಸುಬರಿಯ ಭ್ರಾಂತಿಯ ಬಿಟ್ಟು ಭಕ್ತಿಯ ಬಲದಿ ಮಂತ್ರವನುನಿರುತ ಜಪಿಸುತ್ತಿರು ಯಥೇಚ್ಛೆಯೊಳರಿವು ಸುಖಸಂಪತ್ತಿ ಲಭಿಪುದುಪರಮ ಭಕತನು ನೀನೆನುತ ವಾಚಿಸಿದನು ದೇಶಿಕನು 4'ಜಯದಶ'ುಯ ದಿವಸ ಲಭಿಸಿತು 'ಜಯಕರ ಮುಂದಿನ್ನು ನಿನಗೆಲೆದ್ವಿಜನೆ ಸುತ ಪೌತ್ರಾದಿ ಕುಲಪಾರಂಪರೆಗೆ ನಿನ್ನಾಸುಜನತೆಯ ಕರುಣಿಪುದು ಭಕ್ತವ್ರಜದೊಲೋಲಾಡುವದು ತಪ್ಪದು'ಜಯಸಾರಥಿ ನಿನ್ನ ವಶವೆಂದನು ಗುರೂತ್ತಮನು 5ಅನಿತರೊಳು ಜನಸಂದಣಿಯ ಧ್ವನಿಯನು ತಿಳಿದು ನಾನೆದ್ದೆ ಬೇಗದಿಘನಕೃಪಾನಿಧಿ ಗುರುವ ಕಾಣದೆ ಮತ್ತೆ ಬಳಲಿದೆನುಇನನುದಿಸಿದೊಂದರೆಘಳಿಗೆ ತಲೆಯನು ಬಿಡದೆುದ್ದಲ್ಲಿ ಪಾದುಕೆಯನು ಶಿರದಿ ತಾಳಿದೆನು ಮನೆಗೈದಿದೆನು ಹರುಷದಲಿ 6ತಿರುಪತಿಯ ವೆಂಕಟನು ಸುಖವನು ಕರುಣಿಸಲು ದೇಶಿಕನ ತನುವನುಧರಿಸಿ ಪಾದುಕೆುತ್ತು ಸಲ'ದನೊಲಿದು ಕೃಪೆುಂದಹರುಷದಿಂದೀ ದಿವಸ ಶ್ರೀ ಗುರುವರನ ಪೂಜಾಕಾರ್ಯವೆನಿಪುದುನಿರುತ ಭಜಿಸುವರಿಂಗೆ ಸಕಲೇಷ್ಟಾರ್ಥ ಸಿದ್ಧಿಪುದು * 7
--------------
ತಿಮ್ಮಪ್ಪದಾಸರು
ಯಾಯಾ ವಾರವ ನೀಡಿ ಪ್ರೀಯದಿಂದಲಿ ಜನರು ಸ್ತ್ರೀಯರು ಮುದದಿಂದ ಪ ಸಾರುತ ಹರಿದಾಸ ಕೇರಿಯೊಳಗೆ ಬರಲು ಚೋರತನವ ಮಾಡಿ ಚುದಗು ಬುದ್ಧಿಯಲಿಂದ ದ್ವಾರವನಿಡದಿರಿ 1 ಬಂದಾ ಹರಿದಾಸನ ವಂದಿಸಿ ನಿಮ್ಮಯ ಮಂದಿರದೊಳು ಕರೆದು ತಂದಿಗಳೆಂದು ನಲು ವಿಂದಲಿ ಉಪಚರಿಸಿ 2 ಪರಲೋಕ ಬಂಧುಗಳೆ ಕರುಣವ ಮಾಡಿದಿರಿ ಕರ್ಮ ಪರಿಹರವೆಂದು ನಾ ಸಿರ ಬಗೆ ಕೊಂಡಾಡುತಾ 3 ಪತಿಮತೈಕ್ಯವಾಗಿ ಅತಿಶಯ ಭಕುತಿಯಲಿ ಗತಿಗೆ ಸಾಧನವೆಂದು ತಿಳಿದು ಈ ಧರ್ಮಕ್ಕೆ ಪ್ರತಿಕೂಲವಾಗದಲೆ 4 ವಕ್ಕಡತಿ ತಂಡುಲವ ಚಕ್ಕನೆ ನೀಡಲು ಮಕ್ಕಳು ಮರಿಗಳು ಸಹಿತ ನಿತ್ಯಾ ಸುಖವಕ್ಕು ಸಟಿಯಲ್ಲಾ 5 ಇಲ್ಲವೆಂದು ನುಡಿದರೆ ಪುಲ್ಲಲೋಚನವಪ್ಪಾ ಎಲ್ಲ ಕಾಲದಲಿ ನಿಮ್ಮಂಗಣದೊಳು ಇಲ್ಲವೆ ನಿಂತಿಪ್ಪದು 6 ಹಸ್ತು ಹರಿದಾಸ ಬಂದು ಹೊಸ್ತಿಲಿಂದಲೆ ತಿರಿಗಿ ವಿಸ್ತರಿಸುವೆ ಕೇಳು ಹರಿ ತೊಲಗುವಾ ದ್ವಿ ಮಸ್ತಕ ಭುಂಜಿಸುವಾ 7 ಒಂದೊಂದು ಕಾಳಿಗೆ ಒಂದೊಂದು ಕುಲಗೋತ್ರ ಮುಂದೆ ಉತ್ತಮ ದೇಹದಲಿ ಬಂದು ಸುಜ್ಞಾನದಿಂದಲೆ ಲೋಲಾಡುವರು 8 ಹಲವು ಪೇಳುವದೇನು ಸುಲಭಾವೆನ್ನು ಧರ್ಮ ಅಳಿದು ಹೋಗುವದಲ್ಲ್ಲ ಇದನು ವಿಜಯವಿಠ್ಠಲ ಬಲ್ಲ ಮಹಾಫಲವ9
--------------
ವಿಜಯದಾಸ
ಭೃಂಗಕುಂತಳೆ ಶ್ರೀರಂಗನಸತಿಸ-ರ್ವಾಂಗದಿ ಶೃಂಗಾರೆತುಂಗವಿಕ್ರಮೆತುರಂಗಗಮನೆಭವಭೃಂಗವು ನಿವಾರೆಪಚರಣದಂದುಗೆ ನಡುಪಟ್ಟಿಯಉಡಿಗೆಜ್ಜೆಕರದಲಿ ಕಂಕಣ ಕಡಗ ಬಳೆಕೊರಳೊಳು ಮುತ್ತು ರತ್ನದಿ ಶೋಭಿಪತರತರ ಪದಕದ ಸರಮಾಲೆ1ಬಾಲಚಂದ್ರನವೋಲು ದೇವಿ ಕ-ಪೋಲವು ಪೊಳೆಯುವುದುಲೋಲಾಡುವ ಗಿಳಿವಾಲೆಯು ಕರ್ಣಕೆ ವಿ-ಶಾಲದಿ ಶೋಭಿಪುದು2ಪಟ್ಟೆ ಪೀತಾಂಬರ ಉಟ್ಟು ದೇವಿನೆರಿ ಚೆಲ್ಲುತ ನಡೆತಂದೂಸೃಷ್ಟಿಯೊಳ್ ಸುಜನರ ಪಾಲಿಸಿ ಲಕ್ಷುಮೀಕ್ಷುಲ್ಲರ ಮುರಿದಂದುಅರಿಸಿನ ಕುಂಕುಮ ಚಂದ್ರ ಕಸ್ತೂರಿಯುನಯನದಿ ಕಾಡಿಗೆಯುಶಿರದಿ ಮುಂದಲೆ ಬೊಟ್ಟು ಜಡೆಗೊಂಡೆ ಪುಷ್ಪವುಚರಣದಿ ಮಿಂಚಿಕೆಯೂ3ಹಸ್ತದಿ ಪದ್ಮಾವು ಬೆರಳೊಳು ಉಂಗುರತಿತ್ತಿಗೆ ಮೂಗುತಿ ಮುಖರಗಳೂನಿತ್ಯವು ಸ್ಮರಿಸೆ ಗೋವಿಂದನ ದಾಸನಅರ್ಥಿಯೊಳ್ ದೇವಿಯ ಪೊರೆಯುವಳು4
--------------
ಗೋವಿಂದದಾಸ