ಒಟ್ಟು 7 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಅನಂತೇಶ್ವರ ದೇವರನ್ನು ನೆನೆದು) ಯಾಕಿಲ್ಲಿ ಬಂದು ಮಲಗಿದೆಯೊ ಎಲಾ ಹರಿಯೇ ಲೋಕೋತ್ತಮಾನಂತೇಶ್ವರ ದೇವಾಲಯದಿ ಪ. ಬಿಡದೆ ಪಾಲ್ಗಡಲೊಳಗೆ ಕಡು ವೈಭವದಿ ತಡಿಗೆ ಝಡಿದು ಬರುತಿಹುದು ಭೋರ್ಗುಡಿಪ ತೆರೆಯ ಝಡಿವ ನಾದಕೆ ಒಡಂಬಡದೇಕಾಂತದಿ ಬಂದು ಮಡದಿ ಶ್ರೀದೇವಿ ಸಹಿತೊಡನೆ ಮಲಗಿದೆಯೋ 1 ನೀರೊಳಗೆ ಮುಳುಗಿ ವೇದವÀ ತಂದು ಬೆನ್ನಿನೊಳು ಭಾರವನು ಪೊತ್ತು ಬಹಳಾಲಸ್ಯವೋ ಧಾರುಣಿಯ ಸಲಹೆ ಭೋರ್ಗುಡಿಸಿ ಸ್ತಂಭದಿ ಬಂದ ಕ್ರೂರತನಕಿದುವೆ ವಿಸ್ತಾರ ಸಮಾಧಾನತೆಯೋ 2 ರೂಢಿಗೊಡೆಯ ತಾನಾಗಿ ಮೋಡಿಯೊಳು ಭೂದಾನ- ಬೇಡಿದೆನು ಎಂಬ ನಾಚಿಕೆಯ ಮನವೋ ಖೋಡಿ ನೃಪತಿಯರ ಹೋಗಾಡಿಸುತ ಕಾಡಿನೊಳು ಕೋಡಗರ ಕೂಡಿ ರಥ ಓಡಿಸಿದ ಬೇಸರವೋ 3 ಲೋಲಾಕ್ಷಿಯರ ವ್ರತವ ಹಾಳುಮಾಡುತ ಕಲಿಯ ಕಾಲದೊಳು ಗೈವಂತಮೇಲುಕಾರಿಯದ ಕಾಲೋಚಿತವ ಮನದೊಳಾಲೋಚಿಸುತ್ತಹಿಯ ಮೇಲೆ ಪವಡಿಸಿ ನಿದ್ರಾಲೋಲನಾಗಿಹೆಯೋ 4 ಯುಗಯುಗದೊಳವತಿರಿಸ ಜಗದ ಭಾರವನಿಳುಹಿ ಬಗೆಬಗೆಯ ನಾಟಕದಿ ಮಿಗೆ ಪಟ್ಟ ಶ್ರಮವ ತೆಗೆಯಲೋಸುಗ ಚರಣಯುಗವ ಮೃದುಕರದಿ ಶ್ರೀ ಸೊಗಸಿನಿಂದೊತ್ತುವ ಸೊಂಪೊಗರಿತೋ ನಿನಗೆ 5 ಲಲಿತ ವೈಕುಂಠದೊಳಗೆ ಜಲಜಭವಮುಖ್ಯಸುರ- ಗಲಭೆಯುಂಟೆಂದಲ್ಲಿ ನಿ¯ದೆ ಈಗ ಲಲನೆಯಳ ಕೂಡೆ ಸರಸಗಳನಾಡಲು ತನಗೆ ಸ್ಥಳವಿಲ್ಲವೆನುತಿಲ್ಲಿ ನೆಲಸಿಕೊಂಡಿಹೆಯೋ 6 ಸೇರಿರ್ದ ಶರಣ ಸಂಸಾರಿ ನೀನೆಂದು ಶ್ರುತಿ ಸಾರುವುದು ಕರುಣವನು ತೋರೆನ್ನ ದೊರೆಯೇ ದಾರಿದ್ರ್ಯದೋಷವಪಹಾರಿಸುತ ಇಷ್ಟಾರ್ಥ- ಸೇರಿಸೈ ಶ್ರೀ ಲಕ್ಷ್ಮೀನಾರಾಯಣನೆ ಹರಿಯೇ 7
--------------
ತುಪಾಕಿ ವೆಂಕಟರಮಣಾಚಾರ್ಯ
ಏನನಾದರೂ ಬರೆಯೋ ಎನ್ನ ಪಣೆಯೊಳಗೆನೀನಿಷ್ಟ ಬರೆಯಬೇಡವೋ ಮೂಢ ವಿಧಿಯೇ ಪ ಬಾಲತನದಲಿ ಬಹಳ ಭಾಗ್ಯ ಸಂಪದಗಳನುಮೇಲೆ ಯೌವನ ಬರಲು ಬಡತನವನುಲೋಲಾಕ್ಷಿಯರಿಗೆ ಮರುಳಾಗಿ ಸಂಚರಿಪುದನುಹಾಲು ಅನ್ನವನಿಕ್ಕಿದವರಿಗೆ ಮುನಿವುದನು1 ಮುಪ್ಪಿನಲಿ ಯೌವನದ ಸ್ತ್ರೀಯ ಸಂಭೋಗವನುತುಪ್ಪವಿಲ್ಲದ ಭೋಜನದ ರುಚಿಯನುಅಪ್ಪುತಿಹ ಮಕ್ಕಳಿಲ್ಲದ ಕುಸಂಸಾರವನುಕಪ್ಪುಗೊರಲನ ನೆನೆಯದೇ ದಿನವ ಕಳೆವುದನು 2 ಪರರೊಡವೆಯನು ತಿಂದ ಶರೀರವನೆ ಪೊರೆವುದನುಪರರ ನಿಂದೆಯ ಮಾಡಿ ಬಾಳುವುದನುವರ ಕೆಳದಿ ರಾಮೇಶ ನಿನ್ನ ಪಾದಾಂಬುಜವಸ್ಮರಿಸಿದಂತನ್ಯಮತದಲ್ಲಿ ಸಂಭವಿಪುದನು 3
--------------
ಕೆಳದಿ ವೆಂಕಣ್ಣ ಕವಿ
ಗಾಳದ ಪುಳುವಿನಾಶೆಯ ಮೀನ್ಗಳಂತೆ ಮುಂದುಗಾಣರುಹಾಳುಬಾವಿಯ ಪೋಲ್ವ ಭವದಿ ಬಳಲುವ ಜೀವರು ಪ. ಮೇಲೆ ಬಹ ಕಾರ್ಯಜಾಲ ಹಂಬಲಿಸುವಖೂಳ ಜಲಜದ ಕೋಳದೊಳು ಹಲುಬುವಳಿಯಂತೆಕಾಲಪಾಶಕ್ಕೆ ಸಿಕ್ಕಿ ಪುಸಿಯಾಗದೆ ಉಳಿಯಫಾಲದ ಬರಹವ ಮೀರಿ ನಡೆವ ಮನುಜನು ದಾವ 1 ತೈಲ ವಿಕ್ರಯದ ಶೆಟ್ಟಿ ಮೇಲೆ ಬಹ ಲಾಭಗಳಸಾಲ ಯೋಚಿಸಿ ತನ್ನ ಮೂಲಧನವ ನೀಗಿದ ಗಡಬಾಳುವ ಸುತನ ಬಯಸಿ ಮದುವೆಯ ಮಾಡಿದ ಚೆಲ್ವಬಾಲಕಿ ಬದುಕದೆ ಗರ್ಭದೊರಸೆ ಬಿದ್ದುಹೋಗಳೆ2 ಖೂಳಕೊಬ್ಬಿನಲ್ಲುಂಡು ಶಾಲ್ಯಾನ್ನ ದಕ್ಕದಿರೆನಾಳೆಬಹ ಸಂಕಟವನರಿಯದ ಮನುಜನಲ್ಲವೆತಾಳದಮರನÀ ನೆಳಲಿಗೆಂದು ಬಂದು ಕುಳಿತರೆಬೋಳುತಲೆಯಲಿ ಅದರ ಫಲ ಬಿದ್ದು ಸಾಯನೆÉ 3 ಸೂಳೆಯರ ಮೆಚ್ಚಿದವ ಅವರು ಕೊಟ್ಟ ಮದ್ದಿನಿಂದಬೀಳ್ವುದೀ ತನುವೆಂದು ಅಕಟಕಟ ಬಲ್ಲನೆಮಾಳಿಗೆಯ ತೊಲೆ ಮುರಿದು ಮರಣ ಬಂದೀತೆಂದುಲೋಲಾಕ್ಷಿಯರ ಸಂಗಡ ಮಲಗಿದವ ಬಲ್ಲನೆ 4 ಶೂಲಧರ ಖಳನಿಗೆ ವರವ ಕೊಟ್ಟು ಕಂಗೆಟ್ಟುಕೋಲುತಾಗಿದ ಹರಿಣನಂತೆ ಹರಿಯ ಸಾರ್ದಗಡಆಲಸ್ಯಭಯ ಭಕ್ತಿಭರಿತ ನರರೇನ ಬಲ್ಲರುಕೇಳೆಯಾನಋತೇ ಯೆಂಬ ಶ್ರುತಿಯ ಸಂಭ್ರಮವ 5 ಬೊಮ್ಮ ತಾಕಾಲೂರಿ ತಪಗೈದು ಜಗವ ಮಾಡಿದ ಗಡ 6 ಶ್ರೀಲೋಲ ಹಯವದನ ಸರ್ವಸ್ವತಂತ್ರ ತನ್ನತೋಳ ಬಲದಿಂದೊಬ್ಬನೇ ತೊಡಗಿದ ಕಾರ್ಯ ಈಡೇರಿಸುವಈಲೋಕವೆಲ್ಲವಳಿಯಲು ಆಲದೆಲೆಯ ಮೇಲೆಲೀಲೆಯಿಂ ಪವಡಿಸಿ ಸೃಜಿಸಿದಗೆ ಪರರ ಹಂಗೇ 7
--------------
ವಾದಿರಾಜ
ಪುಷ್ಪಧರಿಸುವ ಉತ್ಸವಗೀತೆ ಪುಷ್ಪವನ್ನುಧರಿಸುವ ಉತ್ಸವ ನೋಡುವ ಬನ್ನಿ ಭಕ್ತವತ್ಸಲನರಾಣಿ ರಂಗನಾಯಕಿಗಿಂದು ಪ. ವೈಶಾಖಮಾಸದಲಿ ಕೃಷ್ಣಪಕ್ಷದಲಿ ಲಕ್ಷ್ಮೀಗೆ ಪುಷ್ಪವನ್ನು ಧರಿಸುವ ಅರ್ತಿಯ ನೋಡುವ ಬನ್ನಿ 1 ವಿಧವಿಧದ ಪುಷ್ಪವ ಮುಡಿಸಿ[ದರು] ಮದನನಮಾತೆಯ ಶಿರಸಿಗೆ 2 ಪಂಕಜನಾಭನರಾಣಿ ಪರಮಕಲ್ಯಾಣಿ ನೀಲವೇಣಿ ಪಂಕಜಪಾಣಿ ಕೀರವಾಣಿ ಸುಶೋಣೀ 3 ಸುರರು ಅಸುರರು ಕೂಡಿ ಶರಧಿಮಥನವ ಮಾಡೆ ಭರದಿಂದ ಉದಿಸಿಬಂದ ವರಲಕ್ಷ್ಮೀದೇವಿಗಿಂದು 4 ಜಯವಿಜಯರಿಗಾಗಿ ಜನಿಸಿ ತಾ ಭೂಮಿಯಲಿ [ಗೆದ್ದ] ಇಂದು 5 ಸೃಷ್ಟಿಭಾರವನಿಳುಹಲೆಂದು ಕೃಷ್ಣಮೂರುತಿ ಜನಿಸಿ [ಒಲಿದ] ಭೀಷ್ಮಕನುದರದಿ ಬಂದ ರುಕ್ಮಿಣೀದೇವಿಗೆ ಇಂದು6 ಮಲ್ಲೆ ಮಲ್ಲಿಗೆ ವಕುಳ ಮಂದಾರ ಪಾರಿಜಾತ[ವ] ಫುಲ್ಲನಾಭನರಾಣಿಗೆ ಲೋಲಾಕ್ಷಿಯರು ಮುಡಿಸಿದರು 7 ತಾಳೆ ಚಂಪಕ ಕಮಲಮಾಲೆ ಸುರಗಿ ಜಾಜಿಯ ನೀಲವರ್ಣನರಾಣಿಗೆ ಲೋಲಾಕ್ಷಿಯರು ಮುಡಿಸಿದರು 8 ಮರುಗ ದವನ ಪಚ್ಚೆತೆನೆಯು ಸುಗಂಧರಾಜವ ಪರಮ ಸುರರು ತಂದು ಮುಡಿಸುವರು 9 ವಸಂತೋತ್ಸವಕೆಂದು ವಸುಧೀಶನರಸಿ ತಾನು ಕುಶಲದಿಂದಲೆ ಬಂ[ದಳಾವ]ಸಂತಮಂಟಪಕಿಂದು 10 ರತ್ನದ ಕೆಂಪಿನ ಕಿರೀಟವಿಟ್ಟು ತಿದ್ದಿದ ಕಸ್ತೂರಿಬಟ್ಟು ಮುತ್ತುಸುತ್ತಿದ ಮೂಗಿನಬಟ್ಟು ಹರಿದ್ರಾವಸ್ತ್ರವನುಟ್ಟು 11 ಕರ್ಪೂರದ ಚೂರ್ಣದಿ ಮಿಂದು ಭಕ್ತರಿಟ್ಟ ನೈವೇದ್ಯವನುಂಡು [ತಾ]ಪೊರಟಳು ಮಿತ್ರೆಯರ ಕೋಲಾಟವ ನೋಡುತ್ತ ತನ್ನರಮನೆಗೆ 12 ಹುಟ್ಟಿದಮನೆ ಕ್ಷೀರಾಬ್ಧಿ ಹೊಕ್ಕಮನೆ ಶ್ರೀವೈಕುಂಠವ ಬಿಟ್ಟು ಭಕ್ತರ ಸಲಹುವೆನೆಂದು ಬಂದ ವೆಂಕಟರಂಗನರಸಿಗೆ 13
--------------
ಯದುಗಿರಿಯಮ್ಮ
ಬಟ್ಟ ಮುತ್ತಿನ ಸರವ ಕೊರಳೊಳಿಟ್ಟು ನೋಡುತಪುಟ್ಟ ಪುಟ್ಟ ಪಾದದಿಂದ ದಟ್ಟಡಿಯನಿಕ್ಕುತಅಟ್ಟಟ್ಟು ಕರೆದರೆ ಬಾರದೆ ಅಂಬೆಗಾಲನಿಕ್ಕಿ ಕೊಡವುತತಿಗೂಳುಗುಳೆಂದು ಮುಟ್ಟಿ ನಲಿದಾಡುತ ತಟ್ಟೆಗೆ ಮುಚ್ಚಿಗೆಯೆಂದುತಟ್ಟನೆ ಕೈಯನಿಡುತ ಪುಟ್ಟಮಕ್ಕಳೊಡನೆ ಚಂಡಾಡಿನಲಿದಾಡುವ ದಿಟ್ಟರಂಗಯ್ಯ 1 ರನ್ನ ದುಂಗುರ ಪದಕ ತಾಳಿಯನ್ನು ಹಾಕುವೆಸಣ್ಣ ಮಕ್ಕಳ ಕೂಡೆಲ್ಲಾ ಚಿನ್ನಿಕೋಲನಾಡುತಕನ್ನೆವೆಣ್ಣುಗಳ ಕಂಡು ಕಣ್ಣ ಸನ್ನೆ ಮಾಡುತಕಣ್ಣಮುಚ್ಚಾಲೆ ಆಟವ ಆಡಿ ನಲಿದಾಡುತ ತಾಹೊನ್ನ ಹಿಡಿ ಹೊನ್ನಾಟವನಾಡುತ ಶ್ರೀರಂಗಧಾಮ ಪನ್ನಗಶಯನ 2 ಕಾಲಿನಂದುಗೆ ಘಲಿರೆನೆ ನಳಿತೋಳನಾಡುತಬಾಲೆಯರ ಕೂಡೆ ಬಹು ಲೀಲೆಯ ಮಾತಾಡುತಶಾಲೆಗಳ ಸೆಳದು ಮರದ ಮೇಲೆ ಕುಳಿತು ನೋಡುತಹಾಲು ಬೆಣ್ಣೆ ಕಳ್ಳನೆಂಬ ದೂರುಗಳ ಕೇಳುತಲೋಲಾಕ್ಷಿಯರೊಳನಿಂಥಾ ಜಾಲಿಗಳ ಮಾಡುವ ಬಾಲಗೋಪಾಲ3 ಕಂಡು ನಿನ್ನನು ಪ್ರೇಮದೊಳಪ್ಪಿಕೊಂಡು ನೋಡುವೆಹಿಂಡು ಬೊಗರಿಲಿತ್ತಲಿಗ್ಗೆ ಚಂಡ ಕೊಡುವೆ ಬಾರಯ್ಯಭಂಡಿಯನೊದದ ಪಾದಪದುಮವನ್ನೇ ತಾರಯ್ಯಗುಂಡುವಾನಿಟ್ಟ ನಳಿ ತೋಳನೊಮ್ಮೆ ತೋರಯ್ಯಪುಂಡಲೀಕಾಕ್ಷಿಯರು ನಿನ್ನ ಕಂಡರೆ ಸೇರರೂ ಕೃಷ್ಣ4 ಕರದ ಕಂಕಣ ಝಣರೆನಲು ಮುಂಗುರಳ ತಿದ್ದುತಕರದ ಕಂಬಾಲಿನೆಲ್ಲವ ಸುರಿದು ಸೂರೆ ಮಾಡುತತರುಣಿಯರು ನೋಡಲವರ ಪುರುಷರಂತೆ ತೋರುತಸರಸವಾಕಿನಿಂದಲವರ ಮರುಳು ಮಾಡಿ ಕರವುತಸರಿಯ ಮಕ್ಕಳೊಡನೆ ಜೊಲ್ಲು ಸುರಿಸುತ ಮಾತಾಡುವಂಥಾ ಸರಸಗೋಪಾಲ 5 ಮರುಗ ಮಲ್ಲಿಗೆ ಸಂಪಗೆಯ ಪೂಸರವ ಮುಡಿಸುವೆಕೊರಳ ಮುತ್ತಿನ ಸರವ ನಿನಗೆ ಕರದು ಕೊಡುವೆಬಾರಯ್ಯ ಅರಳೆಲೆ ಮಾಗಾಯನಿಟ್ಟ ಸಿರಿಮುಖವತೋರಯ್ಯ ಪರನಾರಿಯರೊಡನಿಂಪಾಸರ ಛಂದವೇನಯ್ಯಪುರದ ನಾರಿಯರ ಕೂಡೆ ಸರಸವನಾಡು ಉಡುಪಿಪುರದ ಶ್ರೀಕೃಷ್ಣ 6 ಅಂದುಗೆ
--------------
ಕೆಳದಿ ವೆಂಕಣ್ಣ ಕವಿ
(ಅನಂತೇಶ್ವರ ದೇವರನ್ನು ನೆನೆದು)ಯಾಕಿಲ್ಲಿ ಬಂದು ಮಲಗಿದೆಯೊ ಎಲಾ ಹರಿಯೇಲೋಕೋತ್ತಮಾನಂತೇಶ್ವರ ದೇವಾಲಯದಿ ಪ.ಬಿಡದೆ ಪಾಲ್ಗಡಲೊಳಗೆ ಕಡು ವೈಭವದಿ ತಡಿಗೆಝಡಿದು ಬರುತಿಹುದು ಭೋರ್ಗುಡಿಪ ತೆರೆಯಝಡಿವ ನಾದಕೆ ಒಡಂಬಡದೇಕಾಂತದಿ ಬಂದುಮಡದಿ ಶ್ರೀದೇವಿ ಸಹಿತೊಡನೆ ಮಲಗಿದೆಯೋ 1ನೀರೊಳಗೆ ಮುಳುಗಿ ವೇದವÀ ತಂದು ಬೆನ್ನಿನೊಳುಭಾರವನು ಪೊತ್ತು ಬಹಳಾಲಸ್ಯವೋಧಾರುಣಿಯ ಸಲಹೆ ಭೋರ್ಗುಡಿಸಿ ಸ್ತಂಭದಿ ಬಂದಕ್ರೂರತನಕಿದುವೆ ವಿಸ್ತಾರ ಸಮಾಧಾನತೆಯೋ 2ರೂಢಿಗೊಡೆಯ ತಾನಾಗಿ ಮೋಡಿಯೊಳು ಭೂದಾನ-ಬೇಡಿದೆನು ಎಂಬ ನಾಚಿಕೆಯ ಮನವೋಖೋಡಿನೃಪತಿಯರ ಹೋಗಾಡಿಸುತ ಕಾಡಿನೊಳುಕೋಡಗರ ಕೂಡಿ ರಥ ಓಡಿಸಿದ ಬೇಸರವೋ 3ಲೋಲಾಕ್ಷಿಯರ ವ್ರತವ ಹಾಳುಮಾಡುತ ಕಲಿಯಕಾಲದೊಳು ಗೈವಂತಮೇಲುಕಾರಿಯದಕಾಲೋಚಿತವ ಮನದೊಳಾಲೋಚಿಸುತ್ತಹಿಯಮೇಲೆ ಪವಡಿಸಿ ನಿದ್ರಾಲೋಲನಾಗಿಹೆಯೋ 4ಯುಗಯುಗದೊಳವತಿರಿಸ ಜಗದ ಭಾರವನಿಳುಹಿಬಗೆಬಗೆಯ ನಾಟಕದಿ ಮಿಗೆ ಪಟ್ಟ ಶ್ರಮವತೆಗೆಯಲೋಸುಗ ಚರಣಯುಗವ ಮೃದುಕರದಿ ಶ್ರೀಸೊಗಸಿನಿಂದೊತ್ತುವ ಸೊಂಪೊಗರಿತೋ ನಿನಗೆ 5ಲಲಿತ ವೈಕುಂಠದೊಳಗೆ ಜಲಜಭವಮುಖ್ಯಸುರ-ಗಲಭೆಯುಂಟೆಂದಲ್ಲಿ ನಿ¯ದೆ ಈಗಲಲನೆಯಳ ಕೂಡೆ ಸರಸಗಳನಾಡಲು ತನಗೆಸ್ಥಳವಿಲ್ಲವೆನುತಿಲ್ಲಿ ನೆಲಸಿಕೊಂಡಿಹೆಯೋ 6ಸೇರಿರ್ದ ಶರಣ ಸಂಸಾರಿ ನೀನೆಂದುಶ್ರುತಿಸಾರುವುದು ಕರುಣವನು ತೋರೆನ್ನ ದೊರೆಯೇದಾರಿದ್ರ್ಯದೋಷವಪಹಾರಿಸುತ ಇಷ್ಟಾರ್ಥ-ಸೇರಿಸೈ ಶ್ರೀ ಲಕ್ಷ್ಮೀನಾರಾಯಣನೆ ಹರಿಯೇ 7
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ