ಶ್ರೀವರ ಶುಭಗುಣನಿಚಯ ರಮಾಸ್ವದ
ಪಾಲಯ ಮಾಂ ಸತತಂ ಪ.
ನೀಲ ಮೇಘ ಶೋಭ ಸುಖ ಕಲ್ಲೋಲ ನಿತ್ಯಲಾಭ
ಲೋಲಾಂಬಕ ಕಮಲಾಲಯವರ ಕರು
ಣಾಲವಾಲ ಮಾತಾಲಿಸು ತ್ವರಿತದಿ 1
ಮಂದಹಾಸದಿಂದ ಮೆಚ್ಚಿದ ಸುಂದರೇಶ ವೃಂದ
ಹೊಂದುತ ಹೊಸ ಪರಿಯಿಂದ ರಮಿಸಿ ಸ್ವಾ-
ನಂದವಿತ್ತ ಗೋವಿಂದ ಮುಕುಂದ 2
ದಾಸಾನಂದಕರ ನಿತ್ಯವಿಲಾಸಿತ ಸುರನಿಕರ
ಶ್ರೀಶಯನ್ನನಕಲುಷಿತ ಪೂರಿಸು
ಶೇಷಗಿರಿಯ ಶ್ರೀವಾಸ ಪರಾತ್ಪರ 3