ಒಟ್ಟು 4 ಕಡೆಗಳಲ್ಲಿ , 1 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಣ್ಣ ಮುಂದಿರೊ-ರಂಗ-ಕಣ್ಣ ಮುಂದಿರೊ ಪಪೂತನಿಯ ಮೊಲೆಯನುಂಡು |ವಾತಶಕಟಾದಿ ದೈತ್ಯರ ||ಫಾತಿಸಿದ ರಂಗ ನಿನ್ನ |ಪೋತತನಕಂಜುವೆನು 1ಕಡಹದ ಮರವನೇರಿ |ಮಡುವ ಧುಮುಕಿ ನೋಡಿ ||ಹೆಡೆಯ ತುಳಿದ ನಿನ್ನ |ದುಡುಕಿಗಂಜುವೆನು 2ಬಾಲೆಯರ ಮನೆಗೆ ಪೋಗಿ |ಹಾಲು-ಮೊಸರು ಕದ್ದು |||ಲೀಲೆ ಮಾಡದಿರಯ್ಯ |ಲೋಲಪುರಂದರವಿಠಲ3
--------------
ಪುರಂದರದಾಸರು
ಧಾನ್ಯ ದೊರಕಿತು ಎನಗೆಧನವು ದೊರಕಿತು ಪಓಣಿಯೊಳಗೆ ಹೋದ ಮಾ-ಣಿಕ್ಯದ ಹರಳು ದೊರಕಿತೋ ಅ.ಪಕಟ್ಟಿಹಗೆಯ ಹಾಕುವುದಲ್ಲಒಟ್ಟಿ ಕೆಸರ ಬಡಿಯುವುದಲ್ಲ ||ಮುಟ್ಟಿ ಹಿರಿದು ಮೇಯಿಸಿದರೊಂದಿಷ್ಟು ಸೂಡು ಸವಿಯಲಿಲ್ಲ 1ಹರಿದುಗೊಣಸುಹಚ್ಚುವುದಲ್ಲಮುರಿದು ಸಣ್ಣಗೆ ಮಾಡುವುದಲ್ಲ ||ಅರಿದುಇದನು ಪೇಟೆಗೆ ಒಯ್ದರೆಕರೆದು ಬೆಲೆಯನು ಕಟ್ಟುವುದಲ್ಲ 2ಪಾಲುಪಸುಗೆಹಂಚುವುದಲ್ಲಮೇಲೆಚಾರರುಒಯ್ಯುವುದಲ್ಲ ||ಶ್ರೀಲೋಲಪುರಂದರವಿಠಲನಮೂಲನಾಮ ದೊರಕಿತಲ್ಲ 3
--------------
ಪುರಂದರದಾಸರು
ನಿಂದೆಯಾಡಲುಬೇಡ ನೀಚಾತ್ಮ - ನಿನಗೆಂದೆಂದು ದೊರಕನು ಪರಮಾತ್ಮ ಪ.ನರಜನ್ಮಕೆ ಬಂದು ನೀ ನಿಂತಿ -ಪರಿಪರಿ ಮಾಡಿದೆಯೊ ಪರದ ಚಿಂತಿಗರುವದಿಂದ ಹಲ್ಲುತಿಂತಿ - ಇದುಸ್ಥಿರವಲ್ಲ ಮೂರುದಿನದ ಸಂತಿ 1ಪರಸತಿಯರ ಕಂಡು ಹೋಗಿ - ಅಲ್ಲಿಪರಮಾತ್ಮನ ಧ್ಯಾನವನ್ನು ನೀನೀಗಿಪರಲೋಕ ಹೇಗೆ ಕಾಣುವೆ ಕಾಗಿ - ನೀನುಪರಪರಿಯಲಿ ನೋಡಲೊ ಗೂಗಿ 2ಬಾಳಿಗೆ ಒಂದೇ ಫಲವುನೋಡು - ಅಲ್ಲಿಕಳ್ಳಸುಳ್ಳರಿಗೆ ಬಲು ತೋಡುಬಾಳ್ವೆವಂತರ ಹುಡುಕಾಡು - ಶ್ರೀಲೋಲಪುರಂದರವಿಠಲನೊಳಾಡು3
--------------
ಪುರಂದರದಾಸರು
ನೋಡುನೋಡು ನೋಡು ಕೃಷ್ಣಾ |ಹೇಗೆ ಮಾಡುತಾನೆ |ಬೇಡಿಕೊಂಡರೆ ಬಾರ ಕೃಷ್ಣ |ಓಡಿ ಹೋಗುತಾನೆ ಪಕಂಡಕಂಡವರ ಮೇಲೆ ಕಣ್ಣು ಹಾಕುತಾನೆ |ಉಂಡು ಉಂಡು ಮುಸುಕನಿಟ್ಟು ಮಲಗಿಕೊಳ್ಳುತಾನೆ ||ಲಂಡತನವ ಮಾಡಿ ಮಾಡಿ ಮಣ್ಣ ಗೋರುತಾನೆ |ಭಂಡು ಮಾಡಿ ಬಾಗಿಲೊಳಗೆ ಚೀರಿಕೊಳ್ಳುತಾನೆ 1ಕರುಣವಿಲ್ಲದಲೆ ಬಂದು ಕಾಲಲೊದೆಯುತಾನೆ |ಶರಣು ಹೊಕ್ಕರೆಯು ತಾನು ಕೊಡಲಿ ಮಸೆಯುತಾನೆ ||ಹರಿಯುವ ವಾನರರ ಕೊಡ ಹಾರಾಡುತಾನೆ |ಸಿರಿಕೃಷ್ಣ ಹಾಲು - ತುಪ್ಪ ಸೂರೆಮಾಡುತಾನೆ 2ಬಾಲೆಯರಿಗೆ ವರವನಿತ್ತು ಪುರವ ಕೆಡಿಸುತಾನೆ |ನೀಲಗುದುರೆಯನೇರಿ ಹಾರಿಸಾಡುತಾನೆ ||ಬಾಲಕರ ಕೂಡಿಕೊಂಡು ಕುಣಿದಾಡುತಾನೆ |ಲೋಲಪುರಂದರ ವಿಠಲ ತಾನು ಕುಣಿಯುತಾನೆ3
--------------
ಪುರಂದರದಾಸರು