ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭವ ಭಸಿ- ತಾಂಗನ ನೋಡಿದೆ ಪ. ರಂಗನ ತನ್ನಂಗದೊಳಗೆ ಇಟ್ಟು ಹಿಂಗದೆ ನೆನೆಯುವ ಮಂಗಳ ಮೂರುತಿ ಅ.ಪ. ತ್ಯಕ್ಷನ ನೋಡಿದೆ | ಕರುಣಕ- ಟಾಕ್ಷನ ನೋಡಿದೆ ವೀಕ್ಷಣದಿಂದ ಶ್ರೀ ವಕ್ಷನ ಸುತನನು ಶಿಕ್ಷಿಸಿದ ಫಾಲಾಕ್ಷನ ಶಿವನ 1 ಹರನನು ನೋಡಿದೆ | ಗಂಗಾ- ಧರನನು ನೋಡಿದೆ ಗಿರಿಜೆವಲ್ಲಭ ಭಾಸುರ ವಂದಿತನಾ ಸರಿತು ತುಂಗ ಪಂಪಾಪುರವಾಸನ 2 ಶೂಲಿಯ ನೋಡಿದೆ | ರುಂಡ ಮಾಲಿಯ ನೋಡಿದೆ ಕೈಲಾಸದಿ ಉಮೆ ಲೋಲನೆನಿಸಿ ಇಲ್ಲಿ ವ್ಯಾಳಭೂಷಣನಾಗಿ ಲೀಲೆಯೊಳ್ ಮೆರೆವನ 3 ಈಶನ ನೋಡಿದೆ | ನರಹರಿ ದಾಸನ ನೋಡಿದೆ ಪಾಶುಪತಾಸ್ತ್ರವ ವಾಸವಜನಿಗಿತ್ತ ಪೋಷಿಕಿರಾತನ ವೇಷನ ಹರುಷದಿ 4 ದಿಟ್ಟನ ನೋಡಿದೆ | ವೈಷ್ಣವ ಶ್ರೇಷ್ಠನ ನೋಡಿದೆ ವೃಷ್ಣೀಶ ಗೋಪಾಲಕೃಷ್ಣವಿಠ್ಠಲನಿಗೆ ಪುಟ್ಟ ಮೊಮ್ಮಗನಾಗಿ ತುಷ್ಟಿಪಡಿಸುವನ5
--------------
ಅಂಬಾಬಾಯಿ
ಲೀಲೆಯೊಳಾಡಿಸೊ ಹರಿ ನಿನ್ನ ಲೀಲೆಯೊಳಾಡಿಸೊ ಪ ಲೀಲೆಯೊಳಾಡಿಸೊ ಕಾಲಕಾಲದಿ ನಿನ್ನ ಶೀಲನಾಮವೆನ್ನ ನಾಲಗ್ಗೆ ಕರುಣಿಸು ಅ.ಪ ಮಂದಮತಿಯ ಹರಿಸೋ ಮನ ಗೋ ವಿಂದನೊಳೊಡಗೊಡಿಸೊ ಎಂದೆಂದಿಗು ಆ ನಂದನ ಕಂದನ ಪಾದ ಮನಮಂದಿರದಿರಿಸೊ 1 ಶೀಲಗುಣವ ಕಲಿಸೊ ಭವಗುಣ ಜಾಲವ ಪರಹರಿಸೊ ಪಾಲಿಸಿ ನಿಮ್ಮ ಧ್ಯಾನಲೋಲನೆನಿಸಿ ಯಮ ದಾಳಿ ನೀಗಿಸಿ ಭವಮಾಲೆಯ ಗೆಲಿಸೊ 2 ಮೋಸ ಮಾಯ ಹರಿಸೊ ವಿಷಯ ದಾಸೆಯ ಪರಿಹರಿಸೊ ಭಾಸುರಕೋಟಿಪ್ರಭೆ ಸಾಸಿರನಾಮದ ಶ್ರೀಶ ಶ್ರೀರಾಮ ನಿಮ್ಮದಾಸೆನಿಸೊ 3
--------------
ರಾಮದಾಸರು