ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚರಿತೆಯ ಪೇಳಬೇಕೆ ಪ ಕೊರತೆಗಳೆಣಿಸದೆ | ಸ್ಥಿರಸುಖದೊಳು ಬಾಳಿ ಅ.ಪ ಚದುರ ಚೆನ್ನಿಗ ಮುದ್ದು | ಪದುಮದಳಾಕ್ಷನ 1 ಕಾಲಿನೊಳೊದೆದೆಲ್ಲ | ಶ್ರೀಲೋಲನುಣಲೊಲ್ಲ 2 ಹರಿಣಾಕ್ಷಿಯರಿರೇನು | ಮರುಳರಂತೊರೆವಿರೆ 3 ಮೆಚ್ಚಿನ ಮಾತಿದು | ಸಚ್ಚರಿತವಿದೆಂದು 4 ಬಿಗಿವೆ ಸದಾನಂದ | ವಾಗಲಿ ನಿಮಗೆಲ್ಲ 5
--------------
ಸದಾನಂದರು
ದಧಿ ಕಡೆವ ವೇಳೆಗೆ ಪ ಮಧುವೈರಿ ಬಂದನದಕೋ ಸಂಗಡಿಗರೊಂದಿಗೆ ವಿಧವಿಧ ರಾಗದಿ ಕೊಳಲನೂದುತ ತಾನು ಅ.ಪ. ಅರಳೆಲೆ ಮಾಗಾಯಿ ಕಿರುಗೆಜ್ಜೆ ಪಾಗಡ ಪರಿ ಪರಿಯಾಭರಣಗಳಿಟ್ಟು ಕಿರುನಗೆ ಮುಖದ 1 ವಾರಿಜನೇತ್ರನು ಓರೆನೋಟದಿ ಸಕಲ ನಾರೀಮಣಿಗಳ ಮನಸೂರೆಗೊಳ್ಳುತಲಿ 2 ಬಾಲನಂದದಿ ತಾನು ಲೀಲೆಯ ತೋರುತ ಮಾಲೋಲನು ಆಗ ಬೆಂಣೆ ಕೊಡೆನ್ನುತಲಿ 3 ಏನು ಪುಣ್ಯ ಯಶೋದೆ ತಾನು ಮಾಡಿರ್ದಳೊ ಶ್ರೀನಿಧಿ ಕೃಷ್ಣನು ಸಾನುರಾಗದಲಪ್ಪಿದ 4 ಮುಟ್ಟಿ ಭಜಿಸುವರಘ ಸುಟ್ಟು ಸಲಹು ದಿಟ್ಟ ಶ್ರೀ ರಂಗೇಶವಿಠಲ ನಲಿಯುತ 5
--------------
ರಂಗೇಶವಿಠಲದಾಸರು
ಪದುಮನಾಭನ ಚರಿತೆಯು ಪರಮಾದ್ಭುತವು ಪ ಯದುಕುಲ ಲೋಲನ ವಿಧ ವಿಧ ಲೀಲೆಯೊ ಪದೇ ಪದೇ ನೆನೆಯಲು ಪರಮಹರುಷ ಮನಕೆ ಅ.ಪ. ದೇವತೆಗಳ ಮೊರೆ ಲಾಲಿಸಿ ಭುವಿಯೊಳು ದೇವಕಿ ಸುತನಾಗಿ ಜನಿಸಿದನು ಗೋವಳರೊಡಗೂಡಿ ಗೋವ್ಗಳ ಕಾಯ್ದ ಬೃಂ ದಾವನ ಲೋಲನು ಶ್ರೀವೇಣುಗೋಪಾಲ 1 ಕಾಮಜನಕ ಸರ್ವಕಾಮಿತದಾಯಕ ಕಾಮಿನಿಯರ ಕೂಡೆ ಕ್ರೀಡಿಸಿದನನಘ ಆ ಮಹಾಭಕ್ತ ಅಕ್ರೂರನಿಗೊಲಿದನು ತಾಮಸ ಕಂಸನ ಧ್ವಂಸಗೈದನು ದೇವ 2 ಕರಿಗಿರೀಶ ಮುಚುಕುಂದ ವರಪ್ರದ ಸರಸಿಜಾಕ್ಷ ಶ್ರೀರುಕ್ಮಿಣಿರಮಣ ಸುರರಿಪು ನರಕಾಸುರ ಸಂಹಾರಕ ಸುರಮಾತೆಗೆ ಕುಂಡಲಿಗಳನಿತ್ತನು 3
--------------
ವರಾವಾಣಿರಾಮರಾಯದಾಸರು
ಸಾರ್ಥಕಾಗುವುದು ರವಿಮಾರ್ಗ ಅ ನರ್ಥ ಊಹಿಸುವುದು ಶಶಿಮಾರ್ಗ ಪ ತೀರ್ಥಪಾದನಾಧೀನವಿದೆನ್ನದೆ ಕರ್ತನಾವೆನುತ ಕೆಲರು ಕೆಡುತಿಹರು ಅ.ಪ ದೇವರುಪೂಜೆಯ ಮಾಡುವರ ಸ- ದ್ಭಾವ ಭಕುತಿಯಿಂದ ಪೂಜೆಪುದು ನೋವಿದು ಪೂಜೆಗೆ ಕೂಲಿ ಎಂದು ದುರ್ ಭಾವದಿಂದ ದುಷ್ಟರು ತಾವ್ ಕೆಡುವರು 1 ಮೇಲಾಸಕ್ತಿಯು ಸಜ್ಜನಕೆ ಶ್ರೀ- ಲೋಲನುಭಯರೊಳಗೆ ನಿಂತು ತ- ತ್ಕಾಲ ಪ್ರೇರಿಸಿ ಎರಡುಗತಿ ಕೊಡಿಸುವ 2 ಬದಲಿಗೆ ಬದಲೇ ಶಶಿಮಾರ್ಗ ಸ- ಮ್ಮುದ ನಿಷ್ಕಾಮವು ರವಿಮಾರ್ಗ ಪದುಮೆಯರಸ ಗುರುರಾಮವಿಠಲ ದ್ವಿ ವಿಧರಿಗೆ ಮುಕ್ತಿಯು ಸಂಸಾರ ಕೊಡುವ 3
--------------
ಗುರುರಾಮವಿಠಲ
ಸಾಸಿರ ನಾಮವ ಹಾಡೆ | ತಂಗಿ ಪ ದಾಸರು ಬಂದರೆ ಕೈ ಜೋಡಿಸಿ ವಂದಿಸೆ ತೋಷದಿ ವರಗಳ ಸೀಡುವರಮ್ಮ ಅ.ಪ ಪರಿಮಳ ಭರದಲಿ ಮೆರೆಯುವ ಹೂಗಳ ಅರಸಿ ತಂದಿರುವಳು ನೀನಲ್ಲವೇ ಪರಮ ಮಂಗಳಕರ ಸರಸಿಜಪಾದಕೆ ಹರುಷದೊಳರ್ಪಿಸೆ ಮರೆಯದಿರಮ್ಮ 1 ಮಂದರಧರ ಗೋವಿಂದನು ಮನದಲಿ ನಿಂದಿರುವನು ತಾನೆಂದೆಣಿಸಮ್ಮ ಬಂಧಿಸಿ ಪಂಚೇಂದ್ರಿಯಗಳನೆಲ್ಲ ವಂದಿಸಿ ಕೈಪಿಡಿ ಎಂದು ಬೇಡಮ್ಮ 2 ಅಂಗನೆಯರ ಭಾವಭಂಗಿಗೆ ನಲಿಯುವ ಮಾಂಗಿರಿಯರಸನು ನಿಜವಮ್ಮ ಇಂಗಿತವರಿತು ಗೋಪಾಂಗನೆಯರಿಗಾ- ಲಿಂಗನವಿತ್ತವನಿವನಮ್ಮ 3 ಇವನಮ್ಮ ಮನದೈವ ಗೋಪಾಲನು ಇವನಮ್ಮ ಪರದೈವ ನೀಲಾಂಗನು ಭವದೂರ ಸುಕುಮಾರ ಸಿರಿಲೋಲನು ನವನೀತ ದಧಿಚೋರ ಸುವಿಲಾಸನು 4 ಪರಮಾರ್ಥ ಚರಿತಾರ್ಥ ವರದಾತನು ಪರತತ್ವ ಚಿರತತ್ವ ಗುರುವೀತನು ದುರಿತಾರಿ ಉಪಕಾರಿ ಪರಮಾತ್ಮನು ಸಿರಿರಂಗ ಮಾಂಗಿರಿಯ ದೊರೆಯೀತನು 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್