ಇವ ನೋಡಮ್ಮ ನವನೀತಚೋರ
ದೇವದೇವ ಮಾ ಮನೋಹರ ಧ್ರುವ
ಗೋವನಿವ ಗೋಪಾಲ ಶ್ರೀಧರ
ಗೋವಿಸುವ ಇವ ದಾಮೋದರ
ಸಾವಿರ ನಾಮದೊಡೆಯ ಸಹಕಾರ
ಫಣಿ ಮೆಟ್ಟಿದ ವೀರ 1
ಸಿರಿಯ ಲೋಲನಿವ ನಂದಕುಮಾರ
ಉರಗಶಯನ ಕೌಸ್ತುಭಭರ
ಪರಮ ಪುರಷ ಹರಿಯ ಸುರವರ
ಮರುಳಮಾಡಿದವ ಗೊಲ್ಲತೇರ 2
ಬೆಣ್ಣೆ ಮೊಸರು ಕದ್ದು ವೈವನ
ಕಣ್ಣಿಲೆ ಕಟ್ಟಬೇಕು ಇವನ
ಪುಣ್ಯಯುಳ್ಳ ಯಶೋದೆ ಕಂದನ
ಬಣ್ಣಿಸೊ ಮಹಿಪತಿಗನುದಿನ 3