ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾಲಗೋಪಾಲನ ತೋರೆಲೆ ಲಲನೆ ಲೀಲೆಗಳಲ್ಲಿ ಮುದದಿಂದ ಪ ಕಾಲ ಕಳೆಯುತಿರೆ ಬಾಲೆಯರು ಕೇಳೆ ಪೇಳದೆ ಅಗಲಿದನೆಮ್ಮ ಬಲು ಲೋಲನಾಗಿಹನಿವನಮ್ಮ ಎಮ್ಮ ಮೇಲೆ ಅತಿ ಕಠಿಣನಮ್ಮ ಮೋರೆ ಕೀಳು ಮಾಡುವನಿವನಮ್ಮ ಕೋಪ ಜ್ವಾಲೆಯಿಂದುರಿಯುವನಮ್ಮ ಬಲು ಬಾಲನಾಗಿಹನಿವನಮ್ಮ ಗುಣ ಶಾಲಿ ಮಾತೆಯ ಕೊಂದನಮ್ಮ ಕಪಿ ಜಾಲದೊಳತಿ ಪ್ರಿಯನಮ್ಮ ಪರ ಬಾಲೆಯೊಳತಿ ಮೋಹವಮ್ಮ ಮಾಯಾ ಜಾಲವ ಬೀಸುವನಮ್ಮ ಬಲು ಕೀಳನು ಮೇಲು ಮಾಡುವನು ಇಂಥಾ 1 ಸಾರಸಾಕ್ಷನ ವಿರಹವನು ಸೈರಿಸಲಾರೆವೆ ಕರುಣದಲಿ ತೋರೆ ಕೋರುವೆವು ವಿನಯದಲಿ ಅವ ನೀರೊಳಗಡಗಿದನೇನೆ ದೊಡ್ಡ ಮೇರು ಬುಡದಲಿಹನೇನೆ ಅವ ಚಾರು ಸೂಕರನಾಗಿಹನೇನೆ ಅವ ಬಾರಿ ಕಂಭದಲಿಹನೇನೆ ವೇಷ ಧಾರಿ ಬ್ರಹ್ಮಚಾರಿಯೇನೆ ಕ್ಷಿತಿ ಪಾರಿಯೆನಿಸಿ ತಿರುಗುವನೆ ಅವ ಸೇರಿಹನೆ ಹನುಮನನು ಅಯ್ಯೋ ಜಾರ ಚೋರನಿವನಮ್ಮ ಮಾನ ಮೀರಿ ಬತ್ತಲೆ ನಿಂತಿಹನೇ ವಾಜಿ ಏರುತ ಓಡುತಲಿಹನೇ ಇಂಥಾ 2 ವೇಣು ವಿನೋದದಿ ಕುಣಿಯುತಲಿ ಕಾಣುವುದೆಂತು ಪ್ರಸನ್ನ ಮಾಧವನ ಮೀನ ರೂಪವ ತಾಳಿದನ ಬಲು ಪೀನ ಶರೀರ ಕಂಠನ ಧರೆ ಯಾನನದಲ್ಲಿ ಪೊತ್ತಿಹನ ದುಷ್ಟ ದಾನವನನು ಸೀಳಿದವನ ಭೂಮಿ ದಾನವ ಯಾಚಿಸಿದವನ ಭೃಗು ಮುನಿಯೊಳವತರಿಸಿದನ ಕಡು ಕಾನನದೊಳು ತಿರುಗಿದನ ಸವಿ ವೇಣು ಗಾನವ ಮಾಡಿದನ ಬಹು ಮಾನಿನಿ ವ್ರತಗಳನಳಿದವನ ಪ್ರಸ ನ್ನಾನನ ತುರಗವಾಹನನ 3
--------------
ವಿದ್ಯಾಪ್ರಸನ್ನತೀರ್ಥರು