ಶ್ರೀರಾಮ ಮನೋಹರ ಕೃಪಾಸಾಗರ ಪ
ಸಾರಸಾಪ್ತ ವಂಶ ಭೂಪ ಸಾಧು ಪೋಷಕ
ಮಾರುತಾತ್ಮಜಾ ಪೂಜಿತ ಅ.ಪ
ಗಾಧಿತನಯ ಯಾಗರಕ್ಷಗಾಧ ಮಹಿಮನೇ
ಬೋಧ ರೂಪ ಬುಧ ಜನ ಪ್ರಿಯಾ
ವೇದವಂದ್ಯ ವಿಶ್ವವಲ್ಲಭಾ 1
ರಾವಣಾದಿದನುಜ ಭಂಜನಾನತರ ಕಾವನೆ
ಭಾವಜಾರಿ ಚಾಪಭಂಗ ಭಾಸುರಾಂಗನೆ
ದೇವ ದೇವ ದೀನರಕ್ಷಕಾ 2
ಭೂಮಿಗಧಿಕ ನೂತನ ಪುರಿಧಾಮ ನೀನಲಾ
ಕಾಮಿತಾರ್ಥದಾತ ಸಾಮಗಾನ ಲೋಲಕ್ಷೇಮವೀವ ಗುರುರಾಮ ವಿಠ್ಠಲ 3