ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಿಡೆನು ನಿನ್ನಯ ಪಾದವಾ ಮುಖ್ಯ ಪ್ರಾಣ ಬಿಡೆನು ನಿನ್ನ ಪಾದಾ ಕಡಲ ಹಾರಿದೆನೆಂಬ ಸಡಗರದಿಂದೆನ್ನ ಕಡೆಹಾಯಿಸದೆ ಬೇಗ ಪ. ಹದಿನಾಲ್ಕು ಲೋಕದೊಳು ವ್ಯಾಪಕವಾಗಿ ಮುದದಿಂದ ಹಂಸ ಮಂತ್ರವ ಜಪಿಸುತ ಮಧುವೈರಿಯನು ಒಲಿಸಿ ಕಡೆಗೆ ಅಜ- ಪದವನೈದುವಿ ಸುಖದಿ ವಿಧುಕಳಾಧರ ವಾಸವಾದ್ಯರ ಮುದದಿ ರಕ್ಷಿಸಿ ದೈತ್ಯ ಪುಂಜವ ವಿಬುಧ ಗಣಾರ್ಚಿತ 1 ಮತಿವಂತನಾದಮ್ಯಾಲೆ ತ್ವತ್ಪಾದವೇ ಗತಿಯೆಂದು ನಂಬಿಹೆನು ನೀ- ನಿತ್ತ ಶಕುತಿಯಿಂದ ಪೂಜೆಯನು ಮಾ- ಡುತ ನಿನ್ನ ಪ್ರತಿಮೆಯ ನಮಿಸುವೆನು ವಿತತ ಮಹಿಮನೆ ಪೂರ್ವಭವ ದುಷ್ಕøತಗಳೆನ್ನನು ಪತನಗೊಳಿಪದನತುಳ ನೀ ನೋಡುತ್ತ ಎನ್ನನು ಜತನಮಾಡದೆ ವಿತಥ ಮಾಳ್ಪರೆ 2 ಹಿಂದೆ ತ್ರೇತಾಯುಗದಿ ಈ ಧರಣಿಗೆ ಬಂದು ನೀ ಕಪಿರೂಪದಿ ಅರ- ವಿಂದ ಬಾಂಧವನನು ಸೇರಿದಿ ಇಂದ್ರ ನಂದನನಿಂಗೆ ರಾಜ್ಯವ ಇಂದಿರೇಶನ ದಯದಿ ಕೊಡಿಸಿ ಪು- ರಂದರಗೆ ವರವಿತ್ತ ಬಲದಶ ಕಂಧರನ ಜವದಿಂದ ಗೆಲಿದನೆ 3 ಭೀಮನನೆನಿಸಿ ಕೀಚಕರ ನಿ- ರ್ನಾಮ ಗೊಳಿಸಿ ಜಯಿಸಿ ಕಿಮ್ಮೀರ ಬಕಮಾಗಧರ ಸೀಳಿಸಿ ಸಾಮಗಾಯನ ಲೋಲಕೃಷ್ಣನ ಪ್ರೇಮ ರಸಪೂರ್ಣೈಕ ಪಾತ್ರನಿ- ರಾಮಯನೆ ಧೃತರಾಷ್ಟ್ರತನಯಸ್ತೋಮವನು ತರಿದಮಲರೂಪ 4 ಕಡೆಯಲಿ ಕಲಿಯುಗದಿ ನೀ ಯತಿಯಾಗಿ ಮೃಡನ ತರ್ಕವ ಖಂಡಿಸಿ ಜ್ಞಾನಾ ನಂದಕದಲಿ ಕೃಷ್ಣನ ಸ್ಥಾಪಿಸಿ ಮಾಯಿಗಳನ್ನು ಬಡಿದು ದೂರದಲೋಡಿಸಿ ಪೊಡವಿಗಧಿಪತಿ ಪಾವನಾತ್ಮಕ ಒಡೆಯ ಶೇಷಾಚಲನಿವಾಸನ ಮೆರದನೆ ತಡವ ಮಾಡದಲು 5
--------------
ತುಪಾಕಿ ವೆಂಕಟರಮಣಾಚಾರ್ಯ