ಪಾಲಿಸೋ ರಂಗಾ ಲೋಲಕೃಪಾಂಗ ಪ
ಬಾಲನ ಮೊರೆಯನು ಕೇಳೊ ಶುಭಾಂಗಾ ಅ.ಪ
ಮಾಡಿದಪಾಪ ಓಡಿಸೊ ಭೂಪಾ
ಬೇಡಿಕೆ ನಿನ್ನಯ ಪಾದವ [ತೋರೋ]ಶ್ರೀಶಾ 1
ಕೇಶವನ್ಯಾರೊ ಪೋಷಕಧೀರಾ
ದಾಸನು ವಂದಿಪೆ ಶ್ರೀಶನು ಬಾರೊ 2
ಕಾಮಿತನಾಮಾ ಶ್ಯಾಮಾ ಸುಧಾಮಾ
ಕೋಮಲರೂಪನೆ ನೀನಿಡು ಪ್ರೇಮಾ 3
ಪೋಷಿಸು ಮುನ್ನ ದೇವ ಎನ್ನ
ದೋಷರಹಿತಗುರು [ತುಲಸಿ]ದಾಸ ಪ್ರಸನ್ನ 4