ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೆಚ್ಚದಿರು ಸಂಸಾರ ನೆಲೆಯಲ್ಲವೀ ಕಾಯಅಚ್ಯುತನ ನಾಮವನು ನೆನೆದು ಸುಖಿಯಾಗೊ ಪ ಗಳಿಸದಿರು ಸೀಮೆಯನು ಗಳಿಸದಿರು ದ್ರವ್ಯವನುಗಳಿಸದಿರು ನೀ ದುರಿತರಾಶಿಗಳನುನಳಿನನಾಭನ ದಿವ್ಯ ನಾಮವನು ನೆನೆನೆನೆದುನೆಲೆಯಾದ ಪರಮ ಪದವಿಯ ಪಡೆಯೊ ಮನವೆ 1 ನೋಡದಿರು ಪರಸತಿಯ ಕೂಡದಿರು ದುರ್ಜನರಆಡದಿರು ಮಾತುಗಳ ಗರ್ವದಿಂದಬೇಡದಿರು ಕೈಯ ಹಿಂದೆಗೆವ ಲೋಭಿಯನು, ಕೊಂ-ಡಾಡದಿರು ಬೀದಿಗೂಳುಂಬ ದೈವಗಳ 2 ನಾನಾ ಜನ್ಮದಿ ಬಂದ ನಾಟಕದ ಬೊಂಬೆಯಿದುಮಾನಕ್ಕೆ ಮೆಚ್ಚಿ ನೀ ಮರುಳಾಗದೆಜಾಣತನದಿಂ ಕಾಗಿನೆಲೆಯಾದಿಕೇಶವನಮಾನಸದಲಿ ನೆನೆದು ಸುಖಿಯಾಗು ಮನುಜ 3
--------------
ಕನಕದಾಸ