ನಮೋ ನಮೋ ನಂದಕುಮಾರ ನಿನ-
ಗೆದುರ್ಯಾರೊ ಯದುಕುಲ ವೀರ ಭಜಿ-
ಸುವ ಭಕ್ತ ಜನರುದ್ಧಾರ ಮಾಡೊ
ಪರಮ ದಯಾಳು ನೀ ಸರ್ವ ಸ್ವತಂತ್ರ
ನಿನ್ನ ಧ್ವಜ ವಜ್ರಾಂಕುಶ ರೇಖಾ
ವೆಂಕಟಾದ್ರೀಶ ನಮೋ ನಮೋ ಪ
ಶ್ರೀಶ ಜಗದ್ಭರಿತ ನೀನು ಒಂದು-
ಕಾಸಿಗ್ವಿಷಯಗಳಲ್ಲ ನಾನು ನಿನ್ನ
ದ(ರ್ಶ)ನ ಹಾರೈಸುವೆನು ಪರಮ
ನುಗ್ರ(ಹ)ದಿ ಪಾಲಿಸೋ ನೀನು ಹರೇ
ದೋಷರಹಿತ ಎನ್ನ ದೋಷನಾಶನ ಮಾಡಿ
ಶೇಷಶಯನ ಶ್ರೀನಿವಾಸ ನೀ ದಯಮಾಡೊ1
ಬಾಯಿ ಬೀಗವನ್ಹಾಕಿ ಚರಿಯೆ ಗಂ-
ಡಾರತಿ(?) ಶಿರದ ಮೇಲ್ಹೊರೆಯೆ ನಿನ್ನ
ನಾಮವ ಕೊಂಡಾಡಲರಿಯೆ ಪಾದ-
ಚಾರ್ಯಾಗಿ ಬರುವುದೀಪರಿಯೆ ತಿಳಿದು
ಮಾನ್ಯದೊಕ್ಕಲು ಎಂದು ಬಹುಮಾನದಿಂದಿಟ್ಟು
ಮಾಧವ ಕರುಣದಿ 2
ಬಾಡಿಗಿದ್ದರಾಯನ್ಹಿಡಿಯ (?) ನಿನ್ನ
ಅನುಮತಿಲ್ಲದೆ ದಾರಿ ನಡೆಯ
ಬ್ಯಾಡ ಬಿಡು ಲೋಭಿತನವ ಎ-
ನ್ನೊಡೆಯ ಬಿಡದೆ ಕಾಡುತ ಕಾಸು
ಕವಡೆ ಕಡ್ಡಿ ಕಣಜಕ್ಕೆ ಈ ಪರಿ
ಗಳಿಕೆ ದೇಶದ ಮೇಲೆ ಕಾಣೆನು 3
ಮುಡಿಪು ಬೇಡುವುದ್ಹೇಳೊ ಎಷ್ಟು ನಿನ್ನ
ಬಡಿತ ತಡೆಯಲಾರೆ ಪೆಟ್ಟು ಮಡಿ
ಮೈಲಿಗೆಂದರೆ ಅತಿಸಿಟ್ಟು ನಾ
ಬಿಚ್ಚಾಡುವೆನೊ ಬೀಡ ಬಿಟ್ಟು ಪ ್ರ-
ಸಾದ ತೀರ್ಥ ಬೇಕಾದರೆ ಕ್ರಯಕಟ್ಟಿ ಗಂ-
ಟ್ಯಾರಿಗೆ ಮಾಡುವಿ ಹೇಳೆನಗೊಂದಿಷ್ಟು 4
ಸತಿಗೆ ಮಾಡುವೆ ಲಕ್ಷ್ಮೀಪತಿಯೆ ನಿನ
ಸುತ ಸತ್ಯಲೋಕದಧಿಪತಿಯೆ ಅತಿ
ಹಿತ ಭಕ್ತರಿಗೆ ಭಿಕ್ಷೆಗತಿಯೇ ನೀಡಲು
ಧನವೊಲ್ಲದೆ ಬೇಡುವರೊ ಸದ್ಗತಿಯ ನಿನ-
ಗತಿಯಾಸೆ ಘನತ್ಯಲ್ಲ ಗತಿಪ್ರದಾಯಕ ಕೇಳೊ
ಪೃಥುವೀಶ ನಿನ್ನದಲ್ಲವೆ ಸಕಲೈಶ್ವರ್ಯ 5
ಕನಕಗಿರಿದೊರೆಯೆಂಬೊದೆಲ್ಲೊ ಬಂದ
ಜನಕೆ ಅನ್ನವ ನೀಡಲೊಲ್ಲ್ಯೊ ಜಗ-
ಜನಕ ನಿನ್ನನು ಕಾಣಲಿಲ್ಲೋ ನಾನಿ-
ರ್ಧನಿಕನೆಂಬುವುದು ನೀ ಬಲ್ಲ್ಯೊ ಎನ-
ಗನುಕೂಲ ಧೈರ್ಯವ ಕೊಟ್ಟು ನಿನ್ನ ದರುಶನ
ಸನಕಾದಿಗಳೊಡೆಯ ನಿನ್ನ ಮನಕೆ ಬಂದರೆ ನೀಡೊ6
ಶಂಕರ ಸುರರಿಂದ್ವಂದಿತನೊ ನಾ
ಕಿಂಕರ ನರರಿಂದ ನಿಂದಿತನೊ ನೀ
ಮಂಕುಜನರ ಪಾಪ ಪರಿಹಾರಕನೊ ಹರೇ
ಶಂಖ ಚಕ್ರಾಂಕಿತ ಭೀಮೇಶಕೃಷ್ಣನ ನಾಮ
ಶಂಕೆಯಿಲ್ಲದೆ ಕೊಟ್ಟು
ವೆಂಕಟ ದಯಮಾಡೊ 7