ತನು ಮನ ಧನ ನಿನ್ನವಯ್ಯ ವನಜನಾಭ ಮಾರನಯ್ಯ ಪ
ಮನಸು ನನಸು ನಿನ್ನವಯ್ಯ ಕನಸು ಕಿನಸು ನಿನ್ನವಯ್ಯ
ದಿನ ದಿನ ದಿನ ಭಜಿಪೆನಯ್ಯ ಮನದಿ ನೆಲಸೋ ನೀ ರಂಗಯ್ಯ ಅ.ಪ
ಸ್ನಾನ ಸಂಧ್ಯಾ ಜಪವು ತಪ ಧ್ಯಾನಪೂಜೆ ಧೂಪ ದೀಪ
ದಾನ ಧರ್ಮ ನೇಮ ಲೋಪವೇನನರಿಯೆ ವಿಶ್ವರೂಪ 1
ಎನ್ನದೆಂಬುದಾವುದಿಲ್ಲ ಎನ್ನ ಕಾರ್ಯವೆನ್ನದಲ್ಲ
ಎನ್ನ ಪೊರೆವರಾರು ಇಲ್ಲ ನಿನ್ನ ಬಿಟ್ಟರೇ ಗತಿಯಿಲ್ಲ2
ನಿನ್ನ ಸನ್ನಿಧಿ ಎನ್ನದೇಶ ನಿನ್ನ ಭಜನೆ ಎನ್ನ ಕೋಶ
ನಿನ್ನ ಕೃಪೆಯೇ ಎನ್ನ ದೋಷನಾಶ ಸನ್ನುತಕಾಯೋ ಮಾಂಗಿರೀಶ 3