ಹೊಂದಿ ಸುಖಿಸಿ ಹೊಂದಿ ಸುಖಿಸಿ
ಒಂದು ಮನದ ಭಾವದಿಂದಾ
ನಂದನೀವ ಜನಕ ನಮ್ಮಗುರುರಾಯನಾ ಪ
ದಿಟ್ಟತನದಿ ಸಾಗರಧಿಂ
ಮುಟ್ಟಿ ಮುದ್ರೆಯ ಕೊಟ್ಟ ಬಳಿಕ ವನವ ಛೇದಿಸಿ
ದುಷ್ಟ ರಾವಣ ತನುಜನಬೆ
ನ್ನಟ್ಟಿ ಕುಟ್ಟಿ ಲಂಕೆಯನು
ಸುಟ್ಟ ಬಿಟ್ಟ ಬಂದು ಪೊಡ ಮಟ್ಟ ಹನುಮಾ 1
ಆಪ ನೋಡದೆ ಭೂಪರಾಸಭೆ |
ಲೋಪಗಡಿ ಮಂಡಿಸಿ ಗೆಲವು |
ಲೋಪವಾಗೆ ದ್ರೌಪದಿಯನು ಛಲನೆ ಮಾಡಿದ ||
ಪಾಪಿಕೌರವ ಧೀಪ ನೆಜ್ಞ ಸ |
ಮೀಪಪಶುವಿನೋ ಪಾದಿಯಲಿ
ಕೊಪದಿಂದಲಿ ಘಾತಿಸಿದ ಭೂಪಭೀಮನಾ2
ಮತ್ರ್ಯ ದೊಳಗ ಬೆರ್ತು ವಿಷಯ
ಅರ್ತುಚರಣ ನಿರ್ತದ್ಹುಗಲು ತೀರ್ಥಚರಣನು
ಸಾರ್ಥಕವನು ಮಾಳ್ಪಾನಂದ
ಮೂರ್ತಿ ಮರುತನಾ3