ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀನೆ ದಯಾಸಿಂಧು ದೀನಜನರ ಬಂಧು ಧ್ಯಾನಿಪ ಭಕುತರ ಪ್ರಾಣಪದಕನೆ ರಂಗ ಪ ತೊಳಲಿಬಳಲುವ ಮಾನರಕ್ಷಿಸು ಜಾನಕೀಶ ಅ.ಪ ಎಷ್ಟುಪರಿ ಅನೃತವನಾಡಿದೆ ಈ ಹೊಟ್ಟೆಗಾಗಿ ಕೆಟ್ಟ ಕೃತ್ಯಮಾಡಿ ನಾ ದಣಿದೆ ಇ ನ್ನೆಷ್ಟುದಿನ ಈ ದುಷ್ಟ ಬವಣೆ ಎನಗೆ ಸ್ಥಿರವಿದೇ ಭ್ರಷ್ಟನಾಗುಳಿದೆ ಕೊಟ್ಟ ಒಡೆಯರು ಬಿಡದೆ ಕಟ್ಟಿಕಾಡ್ವರು ನಿಲ್ಲಗೊಡದೆ ಇಷ್ಟ ಸತಿಸುತರ್ಹೊಟ್ಟೆಗಿಲ್ಲೆಂದಟ್ಟಿ ಬಡಿವರು ಬಿಟ್ಟುಬಿಡದೆ ಬಿಟ್ಟಿದುಡಿದೆಷ್ಟು ಬಳಲಲಿ ಸೃಷ್ಟಿಗೀಶ ದಯಾದೃಷ್ಟಿಯಿಂ ನೋಡೋ ಕೃಷ್ಣ 1 ಮೋಸಹೋದೆ ಬಲು ಭ್ರಮಿಸದ್ದನು ಭ್ರಮಿಸಿ ತುಸು ಕರುಣವಿಲ್ಲದೆ ಘಾಸಿಯಾದೆ ಮಾತೆಪಿತರ ಮನ ನೋಯ್ಸಿ ವ್ಯಸನಕೂಪದಿ ವಾಸಮಾಡಿದೆ ಕಾಸುಹಣಬಯಸಿ ಅಧಮಸುಖನೆನೆಸಿ ಆಸೆÀಯೆಂಬುವ ಪಾಶ ಎನ್ನನು ನಾಶಮಾಡಿತು ಮುಸುರೆಯನು ಕಟ್ಟಿ ಭಾಷೆ ಕೆಡಿಸಿ ದೋಷಕೆಳಸಿತು ದೋಷ ಗಣಿಸದೆ ಶ್ರೀನಿವಾಸ ಜಗದೀಶ ಕೇಶ 2 ಪಾಪಲೋಪನೆ ಶ್ರೀಶ ಶ್ರೀರಾಮ ಕೃಪೆಯಿಂದ ನೋಡೊ ಪಾಪಿಯಿವನೆಂದು ಮರೆಯದಿರು ಪ್ರೇಮ ಹೇ ಪರಮನೆನ್ನಯ ಪಾಪರಾಶಿಯ ಕಳೆದುಕೊಡಲಿ ಕ್ಷೇಮ ಹೇ ಪರಬ್ರಹ್ಮ ಸ್ಥಾಪಿಸೆನ್ನಯ ಉದರಕಮಲದಿ ಶ್ರೀಪತಿಯೆ ನಿಮ್ಮ ನಾಮ ಅಮೃತ ತಾಪಬಿಡಿಸದೆ ಗಜವ ಸಲಹಿದೆ ಶಾಪದಿಂ ಪೊರೆದಂಬರೀಷನ ದ್ರುಪದನುಜಳ ಮಾನಕಾಯ್ದಾಪತ್ತು ಬಾಂಧವ ಭಕ್ತವತ್ಸಲ ದೇವ 3
--------------
ರಾಮದಾಸರು
ಪಾದ ಮುಖ್ಯ ಪ್ರಾಣಾ ನಂಬಿದೇ ನಿನ್ನಯ ಪಾದಾ ಡಂಬರ ತೊಲಗಿಸಿ ಡಿಂಬದೊಳಗೆ ಹರಿಯ ಬಿಂಬ ಪೊಳೆವಂತೆ ಮಾಡೊ ಪ ಇಪ್ಪತ್ತು ಒಂದು ಸಾವಿರ ಐದೊಂದು ನೂರು ಅಪ್ರತಿಹಂಸಮಂತ್ರ ತಪ್ಪದೆ ದಿನದಿನ ಒಪ್ಪದಿಂದಲಿ ಭಜಿಸಿ ತಪ್ಪಿಸೋ ಭವವಾ ಸ ಮೀಪದ ಜೀವ ಕೊ ಅಪ್ಪನಂದದಿ ಪುಣ್ಯ ವಪ್ಪಂತೆ ಕರುಣಿಸೊ ಕಪ್ಪುವರ್ಣನ ಕೂಡಪ್ಪಿಸಿ ಪಾಲಿಸೋ 1 ಹತ್ತೇಳು ಎರಡಾಯುತ ನಾಡಿಯೊಳು ಉತ್ತರÀ ಪಾಲಿಸೋ ಉತ್ಕ್ರಮಣದಲ್ಲಿ ನೆತ್ತಿಯದ್ವಾರದಿಂದ ಎತ್ತಮರಿಯಲೀ ಸದದೆ ತತ್ತುವರೊಳು ಜೀವೋ ತ್ತಮನೆ ಸತ್ ಚಿತ್ ಎನಗೆ ಕೊಡು ಉತ್ತರ ಧರಿಸೋ 2 ಅಂತರಂಗದಿ ಉಸುರಾ ಹೊರಗೆ ಬಿಟ್ಟು ಅಂತರಂಗಕ್ಕೆ ಸೇರುವ ಪಂಥದೊಳು ನೀನೆ ನಿಂತು ನಾನಾಬಗೆ ತಂತು ನಡಿಸುವ ಹೊಂತಕಾರಿ ಗುಣವಂತ ಬಲಾಢ್ಯ 3 ಪಂಚಪರಣ ರೂಪನೆ ಸತ್ವ ಕಾಯಾ ಪಂಚೇಂದ್ರಿಯಗಳ ಲೋಪನೆ ಪರಮೇಷ್ಟಿ ಸಂಚಿತಾಗಾಮಿ ಬಿಡಿಸಿ ಕೊಂಚ ಮಾಡೋ ಪ್ರಾರಬ್ಧ ವಂಚನೆ ನೆನೆದೊ ಅಂಚಗಂಚಿಗೆ ಪರಪಂಚವೆ ಓಡಿಸಿ ಪಂಚವಕ್ತ್ರ ಹರಿ ಮಂಚದ ಗುರುವೇ 4 ಯೋಗಾಸನದೊಳಿಪ್ಪ ಯಂತ್ರೋದ್ಧಾರಾ ಭಾಗವತರಪ್ಪಾ ಯೋಗಿಗಳೀಶಾ ವ್ಯಾಸಾ ಯೋಗಿಗೊಲಿದ ವ್ಯಾಸಾ ಶ್ರೀ ತುಂಗಭದ್ರಾ ವಾಸಾ ಬಾಗುವೆ ಕೊಡು ಲೇಸಾ ಜಾಗರ ಮೂರುತಿ5
--------------
ವಿಜಯದಾಸ
ಬಂದದ್ದನುಭವ ಮಾಡ್ವೆ ಕಂದನಾಗಿರುವೆ ತಂದೆ ನಿನ್ನಯ ದಯವೊಂದಿರಲಿ ಹರಿಯೆ ಪ ಮಂದಿ ಮಕ್ಕಳು ಎನ್ನ ಕುಂದಿಟ್ಟು ಜರೆಯಲಿ ಬಂಧು ಬಾಂಧವರೆಲ್ಲ ನಿಂದಿಸಿ ನುಡಿಲಿ ಬಂಧನವು ಬಿಡರಿರಲಿ ಎಂದೆಂದು ಮರೆಯದಂತೆ ಇಂದಿರೇಶ ನಿಮ್ಮ ಧ್ಯಾನವೊಂದೇ ಎನಗಿರಲಿ 1 ಭೂಪತಿಗಳೆನ್ನೊಳ್ಕೋಪಮಂ ತಾಳಲಿ ತಾಪಬಡಿಸಲಿ ಮಹಪಾಪಿವನೆನುತ ತಾಪತ್ರಯ ಬಿಡದಿರಲಿ ಪಾಪಲೋಪನೆ ಜಗ ದ್ಯ್ಯಾಪಕನೆ ನಿನ್ನ ಧ್ಯಾಸಪರೂಪ ಎನಗಿರಲಿ 2 ಕಂಡಕಂಡಂತೆ ಜನರು ಭಂಡನೆಂದೆನ್ನಲಿ ತಂಡತಂಡದಿ ಕಷ್ಟ ಅಂಡಲೆದು ಬರಲಿ ಹೆಂಡರು ಸೇರದೆ ಗಂಡನೆಲ್ಲೆಂದೆನಲಿ ಪಂಢರೀಶ ನಿನ್ನ ಪದೆನ್ನ ಮಂಡೆಮೇಲಿರಲಿ 3 ಎತ್ತ ಪೋದರು ಜನರು ಹತ್ರ ಬಡಿಯಲಿ ಎನಗೆ ವಿತ್ತಕೊಟ್ಟೊಡೆಯರು ನಿತ್ತರಿಸದೊದಿಲಿ ಮುತ್ತಿಕೊಂಡ್ವೈರಿಗಳು ಕುತ್ತಿಗೆ ಕೊಯ್ಯಲಿ ಚಿತ್ತಜಪಿತನಿನ್ನ ಭಕ್ತ್ಯೊಂದೆನಗಿರಲಿ 4 ಪೀಡಿಸಲಿ ಬಡತನವು ಕಾಡಿಸಲಿ ದಾರಿದ್ರ್ಯ ಓಡಿಸಲಿ ಪೊಡವಿಪರು ನಾಡ ಬಿಟ್ಟೆನ್ನ ನೋಡಲಿ ಮುನಿದೆನ್ನ ನಾಡದೈವಗಳೆಲ್ಲ ಬೇಡೆನೆ ಶ್ರೀರಾಮ ನಿನ್ನಡಿ ಬಲೊಂದೆನಗಿರಲಿ5
--------------
ರಾಮದಾಸರು