ರತುನ ಸಿಕ್ಕಿದೆ ತಮ್ಮ ಇದು ಬಹು
ಜತನೆಲೋ ನಿಸ್ಸೀಮ ರತುನ ಸಿಕ್ಕಿದೆ ಪ
ನಿನ್ನ ಸುಕೃತದ ಫಲದಿಂದ
ಪತಿತಪಾವನ ಸಿರಿಪತಿ ವಿಮಲನಾಮ ಅ.ಪ
ದುರಿತ ದಾರಿದ್ರ್ಯವಿಲ್ಲದ ಈ ರತ್ನದಿಂ
ಜರಮರಣಂಟಿಲ್ಲ
ನರಹರಿ ವರಪಾದ ಶರಣರು ಪರಕ್ಕೆ
ಪರಮ ಗೌಪ್ಯದಿಂದ ಶೋಧಿಸುತಿರುವಂಥ 1
ತಾಪತ್ರಯಗಳಿಲ್ಲ ಈ ರತ್ನದಿಂ
ಪಾಪ ಶಾಪವಿಲ್ಲ
ಪಾಪಿಯಮದೂತರ ಲೋಪಗೈದಯ ಭಯ
ಆಪಾರ ಪರಲೋಕ ಸೋಪಾನಕ್ಹಚ್ಚುವ2
ಧರ್ಮಕೆ ಕೊಡು ನದರ ಈ ರತ್ನದ
ಮರ್ಮ ತಿಳಿಯೆ ಚದರ
ಬ್ರಹ್ಮ ಬ್ರಹ್ಮಾದಿಗಳೊಮ್ಮನದ್ಹೊಗಳುತ
ನಿರ್ಮಲಾಗುವ ಪರಬ್ರಹ್ಮ ಶ್ರೀರಾಮನೆಂಬ 3