ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಾವಧಾನಾಗಿ ಮಾಡೆಲೋ ಗುರುಭಕ್ತಿ | ಕಾವಕರುಣಾಳುದೋರಿ ನಿಜ ಮುಕ್ತಿ ಪ ಗುರುನಾಮ ಸ್ಮರಣೆ ಅನುದಿನಾ | ಗುರುಮೂರ್ತಿಯ ಮಾಡಿ ನಿಜಧ್ಯಾನಾ | ಗುರುಚರಣವ ಪೂಜಿಸು ನಿಧಾನಾ | ಗುರು ನಮನದಿ ಹಾಕಿ ಲೋಟಾಂಗಣಾ 1 ಗುರುಭಕ್ತರ ಸಂಗವನು ಮಾಡಿ | ಗುರು ಕರುಣದ ಮಹಿಮೆಯ ಪಾಡಿ | ಗುರುವಾಕ್ಯ ಪ್ರಸಾದವನು ಬೇಡಿ | ಗುರು ಅಭಯವ ಕೊಂಡು ನಲಿದಾಡಿ 2 ಗುರುವಿನಲ್ಲಿ ಹಿಡಿಯದೆ ನರಭಾವಾ | ಗುರುವಿಗರ್ಪಿಸಿ ತನುಧನ ಮನ ಜೀವಾ | ಭವ ಬಂಧನವಾ | ಗುರುಮಹಿಪತಿ ಬಾಲನಾಗಿರುವಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು