ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೊಂಬುವರಿಲ್ಲೆನ್ನ ಸರಕ | ಇಂಬಿಲ್ಲ ಇಡಲಿಕ್ಕೆ |ಹೂರಲಾರೆ ಮುದುಕ ನಾ ಪ ಸುರರು ಸೇವಿಸಲಿನ್ನು | ಸೆರೆ ಸಿಕ್ಕಿರುವರಲ್ಲಾ | ಧರೆಯೊಳು ಲೋಗರಿಗೆ |ಗುರುತಿಲ್ಲಾ ಇದರೊಳು 1 ಕೊಂಡವರಿಗೆ ಲಾಭವು ಒಂದಕ್ಕೆ ನಾಲ್ಕು | ಇಸಗೊಂಡವರಿಗೆಂಟು ಮಡಿಯಹುದು || ಪುಂಡತನದಲಿ ಕಸಗೊಂಡೇನೆಂದವರಿಗೆ | ಮಂದಮತಿಗಳಿಗೆಂದಿಗೂ ದೊರೆಯದು 2 ತಂದೆ ಸದ್ಗುರು ಭವತಾರಕನ ಭಜಕ- | ರಿಂದು ಈ ವಾರ್ತೆಯನು ಕೇಳಿದರೆ | ಬಂದು ವಂದಿಸೆನ್ನ || ಆನಂದವ ಬಡಿಸುವರು | ಎಂದು ಆಗುವದೋಹಾಗೆಂದು ಯೋಚಿಸುವೆ 3
--------------
ಭಾವತರಕರು
ಶರಣು ಭಾರತಿರಮಣ ಶಮಲವರ್ಜೀತ ಚರಣ ಕೆರಗಿ ಬೇಡುವೆ ವರವ ಪಿಡಿಯೆನ್ನ ಕರವಾ ಪ ಇಪ್ಪತ್ತೊಂದು ಸಾವಿರದಾರುನೂರು ಜಪ ತಪ್ಪದೆಲೆ ಸಕಲ ಜೀವರೊಳು ಜಪಿಸಿ ಮುಪ್ಪಿಲ್ಲದ ಜನ ಪದವಿಯನೈದಿ ಭಜಕರಿಗೆ ಸುಪ್ತಿ ಸ್ವಪ್ನವ ಬಿಡಿಸಿ ಮುಕ್ತರನು ಮಾಳ್ಪೆ 1 ಪವಮಾನರಾಯಾ ನೀ ಸಲಹದಿರೆ ಪಾಲಿಸುವ ದಿವಿಜರಿನ್ನುಂಟೇನೋ ಲೋಕದೊಳಗೆ ಯವನರಿಂದಲಿ ಬಂದ ಭಯವ ಪರಿಹರಿಸಿ ನಿ ನ್ನವರ ಸಂತೈಸು ಸರ್ವಕಾಲದಲೀ 2 ಲೋಗರಿಗೆ ಬೇಡಿದಿಷ್ಟಾರ್ಥಗಳ ಕೊಟ್ಟು ಚ ನ್ನಾಗಿ ಸಂತೈಪೆನೆಂದನು ದಿನದಲೀ ಭೋಗಪುರದಲಿ ಬಂದು ನೆಲೆಸಿದೆಯ ನೀ ಪರಮ ಭಾಗವತ ತಿಲಕ ಪಾಲಕ ವೀತಶೋಕ 3 ಭಾನುನಂದನಗೆ ನೀ ಒಲಿದ ಮಾತ್ರದಲಿ ರಘು ಸೂನು ಸಂರಕ್ಷಿಸಿದ ಸುರಪತನಯಾ ವಾನÀರೋತ್ತಮ ವಾಲಿಯನು ಸದೆದ ನಿನ್ನ ದಯ ಕಮಲ ಸಂಭವನ ಪದಕೆ ಯೋಗ್ಯ 4 ಶುಚಿನಾಮಕನೆ ಎನಗೆ ಹರಿಕಥಾ ಶ್ರವಣದಲಿ ರುಚಿಪುಟ್ಟುವಂತೆ ಮಾಡುನುಗಾಲದೀ ಮುಚುಕುಂದ ವರದ ಜಗನ್ನಾಥವಿಠಲನ ಗುಣ ರಚನೆಗೈವ ಸಮರ್ಥ ನೀನೇ ಸುಕೃತಾರ್ಥ 5
--------------
ಜಗನ್ನಾಥದಾಸರು