ಒಟ್ಟು 5 ಕಡೆಗಳಲ್ಲಿ , 3 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಹೆಬ್ಬುರಿ ಶ್ರೀ ಅನಂತಪದ್ಮನಾಭ) ಹೆಬ್ಬುರಿ ಪದ್ಮನಾಭಾ ನಂಬಿದೆನು ಪದಾಬ್ಜವ ಪೂರ್ವಶೋಭಾ ಕೊಬ್ಬಿದ ಶತ್ರು ಪುಂಜಗಳನ್ನು ದೂರದಿ ದಬ್ಬಿ ದಯಾರಸ ಉಬ್ಬಿಪಾಲಿಸು ದೇವಾ ಪ. ಯೋಗಿ ಹೃನ್ಮಂಡಲದಿ ನಿತ್ತಂದದಿ ಸಾಗಿ ಬಂದಿರುವಿಯಲ್ಲಿ ನಾಗಶಯನ ನಿನ್ನ ನೆಲೆಯರಿಯದ ತಪ್ಪ ನೀ ಪಾಲಿಪುದೆಂದು ಬಾಗಿ ಬೇಡುವೆ ನಿಂದು 1 ಈ ಕ್ಷಮೆ ಮೇಲಿಲ್ಲದಾ ಲೋಕೋತ್ತರ- ದಾಶ್ಚರ್ಯ ತೋರುವುದು ಪಕ್ಷಿಧ್ವಜ ನಿನ್ನ ಪಾದಪದ್ಮಗಳಲ್ಲಿ ನಕ್ಷತ್ರ ಮಾಲೆಗಳುರುಳುವದೇನಿದು 2 ಪಾಂಡವ ಸಾರಥಿಯೆ ನಿನ್ನಯ ಮೂರ್ತಿ ಕಂಡೆನು ಶ್ರೀಪತಿಯೆ ಕೌಂಡಿಣ್ಯ ಮುನಿಯನು ಕಾಪಾಡಿದಖಿಳ ಬ್ರ- ಹ್ಮಾಂಡ ನಾಯಕ ನಿನ್ನ ದಾಸ್ಯವ ದಯಮಾಡು 3 ಹೆಬ್ಬುಲಿಯಂತಿರುವ ಹೂಣ ಭೂಪ ನಬ್ಬರವಡಗಿಸುತ ಭಾರ ನಿನ್ನದಯ್ಯ ವಾರಿಧಿ ಕೃಷ್ಣ 4 ನೀನೆ ಸದ್ಗತಿಯೆಂಬರ ಕಾವುದಕನು- ಮಾನವ್ಯಾತಕೊ ಭೂವರ ದೀನ ಬಂಧು ಶೇಷಗಿರಿನಾಥ ದಯದಿಂದ ಮಾನಸ ಫಲವ ಪೂರಣಗೈಸು ಗೋವಿಂದ 5
--------------
ತುಪಾಕಿ ವೆಂಕಟರಮಣಾಚಾರ್ಯ
ಆದಿಮೂಲ ಪಾಲಯಾ ಮಾಂ ಪ ವೇದವೇದ್ಯ ಕರುಣೋದಧಿ ಎನ್ನಪ- ರಾಧಗಳೆಣಿಸದೆ ಮೋದದಿ ಸಲಹೊ ಅ.ಪ. ಜಗದುತ್ಪತ್ತಿ ಸ್ಥಿತಿಲಯ ಕಾರಣ ಅಘಹರ ಅನಿಮಿಷ ಪೂಜಿತ ಚರಣ1 ಪರಮ ಪುರುಷ ಪರಮಾತ್ಮ ಪರಾತ್ಪರ ದುರಿತ ವಿದೂರ 2 ಸಕಲ ವ್ಯಾಪಕ ಸುಖನಿರವಧಿಕ ಮುಕುತಿದಾಯಕ ಮೂರ್ಜಗನಾಯಕ 3 ಆರ್ತಬಂಧು ಲೋಕೋತ್ತರ ಮಹಿಮ ಕೃ- ತಾರ್ಥನ ಮಾಡು ಪವಿತ್ರ ಚರಿತ್ರ 4 ಪರಿಪರಿ ಜನ್ಮದ ಪರಿಭ್ರಮಣೆಯ ನೀ ಪರಿಹರಿಸೈ ಶ್ರೀ ಕರಿಗಿರೀಶನೇ 5
--------------
ವರಾವಾಣಿರಾಮರಾಯದಾಸರು
ತುಳಸಿ ಸ್ವೀಕರಿಸೆನ್ನಯ ಪೂಜೆಯ ತುಳಸೀ ಲೋಕೋತ್ತರನರಸೀ ಪ ಈ ಕರಗಳು ಧನ್ಯಗಳಾಗಲಿ ಮನ ವ್ಯಾಕುಲ ಪರಿಹರಿಸಮ್ಮ ಜನನಿ ಅ.ಪ ಮಲ್ಲಿಗೆ ಸಂಪಿಗೆ ಜಾಜಿ ಸೇವಂತಿಗೆ ಫುಲ್ಲ ಕುಸುಮವಿರಲು ಒಲ್ಲನು ಹರಿ ನೀನಿಲ್ಲದ ಪೂಜೆಯ ಬಲ್ಲರಿದನು ಜ್ಞಾನಿಗಳು ಮಾತೆ 1 ವಂದಿಸಿ ನಿನ್ನಯ ಚರಣಗಳಿಗೆ ಫಲ ಗಂಧ ಪುಷ್ಪಗಳನರ್ಪಿಸುವೆ ಬೃಂದಾವನಲೋಲನ ವಲ್ಲಭೆ ಮೃದು ಮಂದಹಾಸವನು ತೋರೆ ಮಾತೆ 2 ನೀನಿದ್ದೆಡೆ ಹರಿ ತಾನಿರುವನು ಅನು ಮಾನವಿಲ್ಲವೆನಗೆ ನೀನಾಗಿರುವೆ ಪ್ರಸನ್ನವದನೆ 3
--------------
ವಿದ್ಯಾಪ್ರಸನ್ನತೀರ್ಥರು
ನೀನೆ ಅನಾಥನಾಗಿರಲು ಅನ್ಯರಿಗೆ ಏನು ದಾನವ ನೀ ಮಾಡುವಿಯೊ ಪ ಜ್ಞಾನಪೂರ್ಣ ನೀನೆಂದು ಅರಿತು ನಿನ್ನ ಜ್ಞಾನಲೇಶವನು ಯಾಚಿಸುವೆ ಅ.ಪ ಯಾರು ನಿನ್ನ ತಂದೆ ಯಾರು ನಿನ್ನ ತಾಯಿ ತೋರೆಲೊ ಈರೇಳು ಭುವನದಲಿ ಊರೊಳು ವಾಸಕೆ ಗೃಹವನು ಕಾಣದೆ ವಾರಿಧಿಯೊಳು ನೀನಡಗಿದೆಯೊ ರಂಗ 1 ಎಡಬಿಡದಿಹ ನಿನ್ನ ಮಡದಿಯ ಬಯಸದೆ ಪಡೆದೆಯೊ ನಾಭಿಯೊಳ್ನಾಲ್ಮುಗನ ಅಡಿಯಾಕಾಶವ ಕಾಣದ ಇಂತಹ ದುಡುಕಿನ ಲೋಕೋತ್ತರ ಪುರುಷ 2 ಪೆತ್ತುದನೆಲ್ಲವ ತುತ್ತು ಮಾಡುವುದು ಎತ್ತರ ನಡತೆಯೊ ನಾ ಕಾಣೆ ಪುತ್ಥಲಿ ಗೊಂಬೆಗಳಂದದಿ ಎಲ್ಲರ ಸುತ್ತಿಸುತಿಹೆ ಪುರುಷೋತ್ತಮನೆ 3 ಚಂಚಲಳಾದÀ ಮಡದಿಯು ನಿನ್ನನÀು ವಂಚಿಪಳೆನ್ನುವ ಭಯದಿಂದ ಹೊಂಚು ಕಾಯಲು ನಿನ್ನ ಹೃದಯದಲ್ಲಿ ಪೊತ್ತು ಸಂಚರಿಸುವೆ ವಿಲಕ್ಷಣ ಪುರುಷ 4 ಅಣುವಿನೊಳಗೆ ಅಣು ಮಹತಿನೊಳಗೆ ಮಹ ತೆನಿಪ ವಿರೋಧ ಧರ್ಮಕೆ ಧರ್ಮಿ ಎನ್ನಿಪ ನಿನ್ನಯ ಗುಣವರಿಯಲು ಸಂತತ ಸುಜನ ಪ್ರಸನ್ನ 5
--------------
ವಿದ್ಯಾಪ್ರಸನ್ನತೀರ್ಥರು
ಪಾದ ಚಿಂತನವು ಕ್ಷಣದಲಿ ಶೋಧಿಪುದು ಮತಿಯ ತಾರಕ ಪ ಮೋದತೀರ್ಥರ ಭೇದಮತ ಅನು ವಾದ ಮಾಡಿದ ಶ್ರೀಜಯತೀರ್ಥರ ಅ.ಪ ಈ ಜಗದೊಳಗಿನ ರಾಜಕೀಯದ ಸೋಜಿಗ ಜೀವನವನೆ ತೊರೆದು ರಾಜೀವೋದ್ಭವನಯ್ಯನ ಚರಣಾಂ ಬೋಜ ನಿರತ ಯತಿರಾಜರ ತಾರಕ 1 ಕಾಕುಮತಗಳನೇಕಗಳನು ನಿ ರಾಕರಿಪ ಗ್ರಂಥಗಳನು ರಚಿಸಿ ಲೋಕೋತ್ತರನಿಗೆ ನ್ಯಾಯಸುಧೆಯಭಿ ಷೇಕವ ಮಾಡಿದ ಟೀಕಾಚಾರ್ಯರ 2 ವಿಧಿ ಫಾ ಲಾಕ್ಷನುತ ಶ್ರೀಕೃಷ್ಣನ ಪೂಜಕ ದುಷ್ಟ ಪಕ್ಷ ನಿರಾಸದಲಿ ಅತಿ ದಕ್ಷ ದೀಕ್ಷ ಅಕ್ಷೋಭ್ಯರ ಕುವರರ 3
--------------
ವಿದ್ಯಾಪ್ರಸನ್ನತೀರ್ಥರು