ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಪೋಶನವ ಹಾಕೆ ಒ(ವೈ?) ಯ್ಯಾರಿ ಲೋಕಸುಂದರಿ ಶ್ರೀಪತಿಯ ಕರದಲ್ಲಿ ಘೃತಧಾರೆ ಲೋ- ಕಂಸಾರಿ ಕೈಯಲ್ಲಿ ತ್ರಿಧಾರೆ ಪ ಕೊಳಲನೂದುತಾಕಳನೆ ಕಾಯುತ್ತ ದಧಿಚೋರನಾಗಿ ಕಳಲಗಡಿಗೆಯನೊಡೆದು ಪೋಗುತ್ತ ಸೆಳೆದು ಗೋಪೇರ ಸೀರೆಗಳ ಮರಕೆ ಕಟ್ಟಿದ್ದ ಕರಕೆ 1 ವಾರಿಜಾಕ್ಷಗೆ ಒಲಿದು ನಲಿಯುತ್ತ ವರ ಮೋಹನಾಂಗಿ ಸಾರಸಮುಖಿ ಸರಸವಾಡುತ್ತ ಮಾರಜನಕನ ಮನವ ಮೋಹಿಸುತ ಮುಖನೋಡಿ ನಗುತ2 ನಂದನಂದನ ನರನ ಸಾರಥಿಯೊ ಭೀಮೇಶಕೃಷ್ಣ ಕೊಂಡಾಪೋಶನ ಕುಳಿತ ಸತಿಜೊತೆಗೆ ಚೆಂದದಿಂದಲಿ ಬೆಳಗಲಾರತಿಯ ಪಾಡಿ ಕೀರುತಿಯ 3
--------------
ಹರಪನಹಳ್ಳಿಭೀಮವ್ವ
ಕಮಲೆ ನಿನ್ನನು ಭಜಿಪೆ ಕಮನೀಯಗಾತ್ರೆ ಸುಮನಸರ ಜನನಿ ನಿನ್ನಮಲಪದ ತೋರೆ ಪ. ಲೋಕಸುಂದರಿ ಎನ್ನ ಶೋಕಗಳ ತರಿದು ಅವ ಏಕಮನಸು ನೀಡೆ ಶ್ರೀ ಕಳತ್ರನ ಪದದಿ ನೀ ಕರುಣಿಸಿದನೆ ನನಗನೇಕ ಜನ್ಮದಲಿ 1 ಪತಿ ಎಂದೆಂದಿಗೆ ತೊಲಗದಂದದಲಿ ನೀಡೆ ಒಂದನರಿಯೆನೆ ಈಗ ಬಂದೆನೇ ನಿನ್ನ ಬಳಿಗೆ ನಂದಕಂದನ ತೋರಿ ಕುಂದು ಪರಿಹರಿಸೆ 2 ಗೋಪಾಲಕೃಷ್ಣವಿಠ್ಠಲನ ಹೃದಯದಿ ತೋರಿ ಕಾಪಾಡೆ ಸತತದಲಿ ಕಾರುಣ್ಯಶಾಲಿ ನೀ ಪಯೋಬ್ಧಿಯೊಳ್ ಕೈಪಿಡಿದೆ ಶ್ರೀ ಹರಿಯ ರೂಪ ರೂಪಾಂತರದ ವ್ಯಾಪಾರ ತಿಳಿಸೆ 3
--------------
ಅಂಬಾಬಾಯಿ