ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸುಮ್ಮನಿಹುದು ನ್ಯಾಯವೇ ಪ ದಮ್ಮಯ್ಯ ಪೊರೆಯೆನಲು ಒಮ್ಮೆಯಾದರೂ ಎನ್ನ ದುಮ್ಮಾನವೇನೆಂದು ನಮ್ಮಯ್ಯ ಕೇಳಲಿಲ್ಲ ಅ.ಪ ಸಣ್ಣ ಬಾಲಕನೊಬ್ಬ ಕಣ್ಣೀರ ಸುರಿಸಲು ಪುಣ್ಯ ಲೋಕವನಿತ್ತಮ್ಮಾ ಕಣ್ಣುಕಾಣದೆ ಗೊಂಡಾರಣ್ಯಮಧ್ಯದಿ ನಾನು ಬಣ್ಣಿಸಿ ಕರೆದರೂ ಕಣ್ಣೆತ್ತಿ ನೋಡಲಿಲ್ಲವಮ್ಮಾ 1 ಪರಿದೋಡಿದನಮ್ಮ ನಮ್ಮಯ್ಶ ದುರಿತವಾರಿಧಿಯಲಿ ಕೊರಗುತಲಿಹ ಎನ್ನ ಅರಿತು ಅರಿಯದಂತೆ ಇರುವನಲ್ಲ ಇಂದಿರಮ್ಮ 2 ಮೃತಿಯ ವೇಳೆಯೊಳೊಬ್ಬ ಸುತನಕರೆಯಲಾಗ ಹಿತದಿ ಸೌಖ್ಯವನಿತ್ತನು [ಕೇಳಮ್ಮಾ] ಮಾಂಗಿರಿರಂಗ ಪತಿತಪಾವನಾಯೆಂದು ನುತಿಸಿ ಬೇಡಿದರೂ ಸಂಗತಿಯೇನೊ ಎನಲಿಲ್ಲ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್