ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆತ್ಮನಿವೇದನೆ ಕರುಣದಿಂದಲಿ ಪೊರೆಯೊ ನೀ ಎನ್ನ| ನರಹರಿಯೆ ಮುನ್ನ | ಚರಣಕಮಲವ ಸ್ಮರಿಸುವೆನು ನಿನ್ನ ಪ ಪೊರೆಯಬಾರದೆ ಶರಣು ಶ್ರೀಹರಿಅ.ಪ ಗೋಪಾಲಕೃಷ್ಣ| ಗೋಪಸ್ತ್ರೀಯರ ಹರುಷಗೊಳಿಸಿದೆ|| ವೃಂದದಿ ನಲಿದು ಮೆರೆದೆ| ದ್ರುಪದ ಸುತೆಯಳಿಗಿತ್ತ ಶ್ರೀಹರಿ 1 ಗೋವೃಂದ ಸಲಹಿ| ಗೋವಿಂದಾಭಿಧಾನವನು ಪಡೆದೆ|| ರವನು ಹೀರಿದ ಕರುಣಿ ಶ್ರೀಹರಿ 2 ಇಂದೀವರಾಭನೆ| ಬಂಧುಬಾಂಧವರಾರು ಹಿತರಲ್ಲ|| ಇಂದಿರೇಶನೆ ನಿನ್ನ ಚರಣ| ದ್ವಂದ್ವದೊಳು ಮನವಿತ್ತೆನಾಪ | ದ್ಬಂಧುವಾದರೆ ಪ್ರೇಮವಿರಿಸುತ || ಬಂಧಗಳ ಪರಿಹರಿಸುತೆನ್ನನು 3 ಪತಿತಪಾವನ ಈಶ ಸರ್ವೇಶ| ಮಹಶೇಷಶಯನ | ಹಿತವಿಧಾಯಕ ಸರ್ವಭೂತೇಶ|| ದೊರಕುವ ತೆರದೊಳನುದಿನ 4 ಶ್ರೀಕಾಂತ ಸಲಹೈ| ಲೋಕಭರಿತನೆ ಸುಖವಿಧಾಯಕನೆ|| ಲೋಕವಂದಿತ ಲೋಕನಾಥಾ | ನಾಕಿವಂದಿತ ಭಕ್ತವತ್ಸಲ 5 ನಿನ್ನ ಪಾದವ ನಂಬಿ ನಾನಿಹೆನು| ದೇವಾದಿದೇವಾ| ನಿನ್ನ ನಾಮಾವಲಿಯ ಸ್ಮರಿಸುವೆನು|| ಮುನ್ನ ಮಾಡಿದ ಪಾಪವೆಲ್ಲವ| ನಿನ್ನ ನಾಮ ಸ್ಮರಣದಲಿ ಸಂ| ಪೂರ್ಣ ಪರಿಹರಗೊಳಿಸಿ ನಿನ್ನಯ| ಸನ್ನುತಾಂಘ್ರಿಯ ಸೇವೆಗಿರಿಸುತ 6
--------------
ವೆಂಕಟ್‍ರಾವ್
ನಾರಿ ನೀನಿಲ್ಲಿ ನೆಲೆದೋರಿ ಸಲ್ಲದು ದೈತ್ಯಕುಲದಾರಿ ಪ. ಮೂಢನಾದೆನು ನಿನ್ನ ಮಹಿಮೆಯನರಿಯದೆ ಆಡಲಾರೆನು ಮಹಾಪರಾಧವ ಕೂಡಿದ ಜನರೊಳೀಕುಗ್ಗಿಸದೆನ್ನ ನೀ ದಯ- ಮಾಡಿ ರಕ್ಷಿಸುವುದೆಂದು ಬೇಡಿಕೊಂಬೆನು ತಾಯೆ 1 ಲೋಕವಂದಿತೆ ನಿನಗ್ಯಾಕೆ ಕೋಪವು ಪೂರ್ವ ರಾಕೇಂದು ಮುಖಿ ಭುವ(?)ನೈಕನಿಧೆ ವ್ಯಾಕುಲತೆಯ ಬೇಗ ಓಡಿಸಿ ಕರುಣದಿ ಸಾಕುವುದುಚಿತವೆನ್ನನು ಶರ್ವನೊಡಗೂಡಿ 2 ರಮ್ಮೆಯರಸ ವೆಂಕಟೇಶನ ಕರುಣದಿ ಹಮ್ಮುಗೊಳ್ಳದೆ ಹಗಲಿರಳಿನಲಿ ನಿಮ್ಮೆಲ್ಲರನು ಪಾಡಿ ಪೊಗಳುವೆನೆಂಬುದ ಅಮ್ಮ ನೀ ತಿಳದಿರಲಿಮ್ಮನಗೊಳದೆನ್ನ 3
--------------
ತುಪಾಕಿ ವೆಂಕಟರಮಣಾಚಾರ್ಯ
ಮಾವಿನಕೆರೆ ಎಲ್ಲಿರುವೆ ಬಾರಂಗ ಬಾ ಮೋಹನಾಂಗ ಎಲ್ಲಿರುವೆ ನೀಲಾಂಗ ಮಾಂಗಿರಿರಂಗ ಪ ಇಲ್ಲಿರುವೆಯಾರಂಗ ಸಲ್ಲಲಿತ ರಂಗ ಮೆಲ್ಲನೇ ರಂಗ ಓ ಮುದ್ದುರಂಗಾ ಅ.ಪ ಅಲ್ಲಿ ನೋಡಿದರಿಲ್ಲ ಇಲ್ಲಿ ಕಾಣಿಸಲಿಲ್ಲ ಬಲ್ಲೆ ನಾನೀ ಚೆಲ್ಲ ವರದಾತನಲ್ಲ ಇಲ್ಲಿ ತಿಳಿಗೊಳವಿಲ್ಲ ಮಲ್ಲಿಗೆಯ ಹೂವಿಲ್ಲ ಇಲ್ಲಿರುವ ಧೃಢವಿಲ್ಲ ನೀ ಬರುವೆ ಅರಿವಿಲ್ಲ 1 ಗಜರಾಜ ಕರೆದನೆ ಅಜಾಮಿಳನು ಕೂಗಿದನೆ ಅಜನು ಬಾರೆಂದನೆ ಲೋಕವಂದಿತನೆ ರಜತಾದ್ರಿ ವಾಸನೆ ಪೂಜಿಸಲು ಕರೆದನೊ ಸುಜನ ವರದಾಯಕನೆ ವಿಜಯ ಪೂರಿತನೇ 2 ವನವನದಿ ಸಂಚರಿಸಿ ದನಿದನಿಯನನುಸರಿಸಿ ಮನದಿ ನೋವನನುಭವಿಸಿ ಕನಸೆಂದು ಭಾವಿಸಿ ಕನವರಿಪ ಯೆನ್ನೊಳಗೆ ಕನಿಕರವ ಸೂಸಿ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸಾರಸಭವ ಮೋಹಿತೆ ದೇವಿ ಜಗನ್ಮಾತೆ ಪ ಚಾರುಕೀರ್ತಿ ಪರಿಶೋಭಿತೆ ಲಾವಣ್ಯಾಂಬರಭೂಷಿತೆ ಅ.ಪ ಸುರನುತೆ ಶಾರದೆ ಬುಧಗಣಸೇವಿತೆ ಮಯೂರರಂಜಿತೆ ವರ ಮಾಂಗಿರಿವರ ಭಾವಿತೆ ಪಾಹಿಮಾಂ ಲೋಕವಂದಿತೆ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸ್ವೀಕರಿಸೈ ಕರುಣಾಕರ ಶ್ರೀವರ ಲೋಕವಂದಿತ ಪ್ರಭುವೆ ಪ ಮಾಕಮಲಾಸನ ನಾಕಪಾಲವಂದ್ಯ ಮಾತುಳಾಂತಕ ಮಧುಸೂದನ ಶ್ರೀಹರಿ ಅ.ಪ ಮಾವು ಮಾದಳ ದ್ರಾಕ್ಷ ಬಾಳೆ ಕಿತ್ತಳೆ ಮೊದಲಾದ ಫಲಗಳೆಲ್ಲ ಮಾಧವ ನೀನಿದನಾರೋಗಣೆ ಮಾಡು ಶ್ರೀ ರಮಣಿಯ ಪ್ರಿಯ ಶ್ರೀನಿವಾಸನೆ ಬೇಗ 1 ನಾನಾ ವಿಧದ ಫಲ ಹಾಲು ಸಕ್ಕರೆ ಬೆಣ್ಣೆ ನಾರಾಯಣ ನಿನಗೆ ಬಾಲೆ ಲಕುಮಿ ಪರಮಾದರದಿಂದಲಿ ಸೇವೆಗೆ ಪರಮಾನ್ನವನರ್ಪಿಸುವಳು2 ತನುವೆಂಬೊ ತಟ್ಟೆಯೊಳಿರಿಸಿ ಫಲವ ನಿ- ರ್ಮಲಮನವೆಂಬ ವಸ್ತ್ರವನ್ಹೊದಿಸಿ ಸನ್ಮತವೆಂಬ ಸಾರಣೆಮಾಡಿ ನಮ್ಮ ಗುರುಕರುಣದ ರಂಗವಲಿಯನ್ಹಾಕುವೆ 3 ನವವಿಧ ಭಕುತಿಯ ನಳನಳಿಸುವ ವೀಳ್ಯ ಚಲುವ ಶ್ರೀ ಹರಿ ನಿನಗೆ ಸವಿನಯ ನುಡಿಗಳ ಮಂತ್ರ ಪುಷ್ಪಗಳು ಸನಕಾದಿವಂದ್ಯ ಸರ್ವೇಶ ಶ್ರೀ ಕೃಷ್ಣ 4 ಕ್ಷೀರ ಸಾಗರವಾಸಿ ಶ್ರೀ ಭೂರಮಣನೆ ಮಾರಜನಕ ಹರಿಯೆ ಕಾರುಣ್ಯಸಾಗರ ಕಮಲನಾಭ ವಿಠ್ಠಲ ಪಾರುಗಾಣಿಸೊ ಭವಸಾಗರದಿಂದಲಿ5
--------------
ನಿಡಗುರುಕಿ ಜೀವೂಬಾಯಿ