ಶ್ರೀ ವ್ಯಾಘ್ರಗಿರಿವಾಸ ಶ್ರೀ ಶ್ರೀನಿವಾಸ
ಸೇವ್ಯ ಪಾದಾಜ್ಜ ಪ
ಕಮಲಸಂಭವಜನಕ ಕಮಲಾಪ್ತ ಕುಲತಿಲಕ
ಕಮಲ ಸನ್ನಿಭಚರಣ ಕಲುಷಗಣಹರಣ
ಕಮನೀಯ ಗುಣಹಾರ ಕಲ್ಯಾಣಗುಣ ಪೂರ
ಕಮಲಾ ಮನೋಹರ ಕಲಿತ ಶೃಂಗಾರ 1
ಲೋಕಮೋಹನರೂಪ ಲೋಕರಕ್ಷಣ ಚಾಪ
ಸುಕೃತಿ ಪರಿವಾರ
ನಾಕನಿಲಯ ಸಮಾಜ ನಮಿತ ಪಾದಾಂ ಭೋಜ
ಪಾಕರಿಪು ಮಣಿನೀಲ ಪದ್ಮಾನುಕೂಲ2
ಮಾಂಡವ್ಯ ಮುನಿಸೇವ್ಯ ಮಾನಸಾಂಬುಜಭವ್ಯ
ಪಾಂಡುಸುತ ಪರಿಪಾಲ ಪಾವನ ಸುಶೀಲ
ಭಾಗವತ ಸನ್ಮೋದ
ಗಾಂಡೀವಿ ಸುಶ್ಯಾಲ ಗಾನರಸಲೋಲ 3
ತವಚರಣ ಪಂಕಜಂ ತೃಪ್ತಜನ ಸುರಕುಜಂ
ಭವಜಲಧಿಕಾರಣಂ ಭವತು ಮಮ ಶರಣಂ
ತವನಾಮಕೀರ್ತನಂ ತಾಪಪರಿಮೋಚನಂ
ಶ್ರವಣಯೋರ್ದೇಹಿಮಮ ಶಮಿತಾಘಮಹಿಮಾ 4
ಸಕಲಲೋಕ ಶರಣ್ಯ ಸರ್ವದೇವವರೇಣ್ಯ
ನಿಖಿಲಭೂತವಾದ ನಿರ್ಮಲ ಸುವೇಷ
ಅಕಲಂಕ ಚರಿತ ನಿತ್ಯಾನಂದ ಗುಣಭರಿತ
ಶಿಖಿರಿಷ ವಿಹರಣ ಕುಶಲ ಶ್ರೀವರದ ವಿಠಲ 5