ನೀನೆ ತಾಯಿಯು ನೀನೆ ತಂದೆಯು ನೀನೆ ಬಾಂಧವನು ರಂಗ ಪ
ನೀನೆ ನಿತ್ಯನನಾದಿದೇವನು ನೀನೆ ಸತ್ಯಲೋಕೇಶನೀಶನು ಅ.ಪ
ಲೋಕಭರಿತ ಅನೇಕಚರಿತ ಲೋಕಪಾಲಕನು
ವಿಭವ ಲಯಗಳೇಕಕರ್ತನು
ಶ್ರೀಕರಾ ಕೃಪಾಕರಾಸುರ ಭೀಕರಾಂಗನು
ಪಿನಾಕಿ ವಿನುತನೂ ಕಳತ್ರನು 1
ನಂದಗೋಪನ ಕಂದ ಕೃಷ್ಣ ನೀನೆಂದು ನಂಬಿದೆನೋ
ಮಂದಹಾಸವದನವ ನಾನೆಂದು ನೋಡುವೆನೋ
ಸುಂದರಾರವಿಂದ ಪಾದವನೆಂದು ಪೂಜಿಪೆನೋ
ತಂದೆ ಮಾಂಗಿರಿರಂಗನೊಲವನೆಂದು ಪಡೆದೇನೋ2