ಒಟ್ಟು 7 ಕಡೆಗಳಲ್ಲಿ , 7 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದಿರಾದೇವಿ ಕಾಯೆ ಕರುಣಾಂಬುಧಿಯೆ ಪ ಮಾಯೆ ನಾರಾಯಣನ್ನ ಜಾಯೆ ಸತತ ಜ್ಞಾನ | ವೀಯೆ ಭಕ್ತರ ಪ್ರೀಯೇಅಪ ಕನ್ನಾಮಣಿಯೆ ಕಾಮಿನಿ ಮಂಗಳವಾಣಿ | ಸನ್ನುತೆ ಲೋಕ ಜನನಿ | ನಿನ್ನ ಚರಣಯುಗ್ಮ | ವನ್ನೆ ನಂಬಿದೆ ಸುಪ್ರಸನ್ನೆ ಸರ್ವಜೀವರ | ಭಿನ್ನೆ ಭಾಗ್ಯಸಂಪನ್ನೆ || ಮನ್ನಿಸಿ ಮುದದಿಂದ | ಬಿನ್ನಪ ಲಾಲಿಸು | ಚನ್ನೆ ಚಕ್ರ ಪಾಂಚಜನ್ಯ ಧರಾದೇವಿ 1 ಅತಿದಯವಂತೆ ನೀನೆಂದು ಬೇಗದಿ ಬಂದು | ನುತಿಸಿದೆ ದೀನನಾಗಿಂದೂ | ಪತಿತರೊಳಿಡದಲೆ | ಗತಿಗೆ ಸಮ್ಮೊಗಮಾಡು | ತ್ಪತ್ತಿ ಸ್ಥಿತಿ ಲಯಕರ್ತೆ ಅತುಳ ಶೋಭನಮೂರ್ತೆ | ಪತಿಯಲಿ ಜನಿಸಿದೆ| ಪತಿಗೆ ಸತಿಯಾದೆ | ಪತಿಯ ಸಂಗಡ ಜ | ನಿತಳಾದ ಚರಿತೆ2 ಕುಂಕುವರತ ರಾಜಿತೆ ಧವಳಗೀತೆ | ಪಂಕಜಸದನೆ ಖ್ಯಾತೆ | ಲೆಂಕಾ ವತ್ಸಲೆ ಸರ್ವಾಲಂಕಾರ ಮಾಯೆ ರವಿ | ಸಂಕಾಸೆ ಬಹುಕಾಲ | ಸಂಕಟವ ವಿನಾಶೆ | ಕ | ಳಂಕವಾಗದಂತೆ3
--------------
ವಿಜಯದಾಸ
ಏನಾಗುವುದು ತಾನಾಗಿದೆ ಜಗ ನೀನ್ಯಾಕದರೋಳ್ಪಾಲಿಡುವ್ಯೋ ಪ ಕಾಣುಕಾಣುತಲಿ ಶೂನ್ಯವೆನಿಪುದೆಲ್ಲ ಜಾಣನಾಗಿ ಭವಗೆಲಿಯೆಲವೋ ಅ.ಪ ಸತತದಿ ಸತಿಸುತರ್ಹಿತಕಾಗಿ ಬಲು ಮತಿಗೆಟ್ಟತಿಯಾಗ್ವ್ಯಥೆಬಡುವ್ಯೋ ಪೃಥಿವಿ ಮೇಲೆ ನಿನ್ನ ಮತಿಯಲಿಂದ ಮಣ್ಣು ಪ್ರತಿಮೆಮಾಡಿ ಸೃಷ್ಟಿಗೊಳಿಸಿದೆಯೋ 1 ಹಲವುವಿಧದಿ ನಾನೆ ದುಡಿದು ಧಾನ್ಯಧನ ಗಳಿಸಿದೆನೆಂದು ಬಲು ಭ್ರಮಿಸುವೆಯೋ ತಿಳಿದುನೋಡೆಲೆ ಬೀಜದೊಳಗೆ ಮೊಳಕೆ ತಿದ್ದಿ ಬೆಳೆಯ ಬೆಳೆಸಿ ಸ್ಥಿತಿಮಾಡಿದೆಯೋ 2 ಎಷ್ಟುದಿನಿರ್ದರು ಬಿಟ್ಟು ಹೋಗುವುದನು ಗಟ್ಟಿಮಾಡ್ಯಾಕೆ ಭ್ರಷ್ಟನಾಗುವೆಯೋ ಸೃಷ್ಟಿಸ್ಥಿತಿಲಯಕರ್ತ ಶ್ರೀರಾಮನ ನಿಷ್ಠೆಯಿಂ ಪಾಡಿ ಮುಕ್ತಿಸುಖ ಪಡೆಯೋ 3
--------------
ರಾಮದಾಸರು
ಬಾಲೆಯರೆಲ್ಲರು ಬನ್ನಿರೆ ರನ್ನದ ಕೋಲ್ಗಳನೀವ್ ಪಿಡಿದು ಪ. ಮೇಲಹ ಪದಮಂ ಪಾಡುವ ಕೋಲಾಹಲ ಸಮಯವಿದು ಅ.ಪ. ಶರಧಿತನೂಭವೆ ನೀ ಬಾ ಬಾ ನೆರೆಮೆರೆವೀ ಶರದುತ್ಸಹಮಂ ಅರಿಪುತು ಜಗಕಿಂದು 1 ನಿಗ್ರಹಕಾರ್ಯದಿಂದುಗ್ರನಾಗಿಹ ಭರ್ಗನಕೆಲಕೈತಂದು ವ್ಯಗ್ರತೆಯಿಳಿಸಿ ಪೊರೆ ಶೀಘ್ರದಿ ಗಿರಿಸುತೆ ಸಮಗ್ರ ಭಾರತಮಿಂದು2 ಸರಸ್ವತಿ ಬಾ ನಿನ್ನರಸನ ಕೆಲಸಾರ್ ಧರೆಯೊಳ್ ಸುಪ್ರಜರಂ ನೆರೆ ಸೃಜಿಸುವ ವೋಲ್ ಅರುಹು ವಿಚಕ್ಷಣೆ ಅಸುರರ ಪಡೆಯದಿರೆನ್ನು3 ಶರದಿತನೂಭವೆ ಅರಸಗೆ ನೀನೊರೆ ಪರಿಪರಿ ವಿಧದಿಂದಂ ಕೊರತೆಯದಿಲ್ಲದೆ ಪೊರೆ ಜಗಮೆನ್ನುತ ಪೊರೆವೆವು ಛಲದಿಂದಂ4 ಭಾರತ ಜನನಿಯ ಭಾಗ್ಯೋದಯಮಂ ತೋರಿರೆ ಶಕ್ತಿತ್ರಯರೆ ಭಾರತವೀರರಿಗಾರೋಗ್ಯೈ ಶ್ವರ್ಯಂಗಳ ಕರುಣಿಸಿರೇ 5 ರಾಷ್ಟ್ರಪ್ರಮುಖರ ಕಷ್ಟಂಗಳ ನಾ ವೆಷ್ಟೆಂದೊರೆದಪೆವೇ ಸೃಷ್ಟಿ ಸ್ಥಿತಿ ಲಯಕರ್ತರು ನೀವಿರೆ ದೃಷ್ಟಿಸಿರೀಗೆನ್ನುವೆವೆ 6 ಕನ್ನಡತಾಯಿಯ ಕನ್ನೆಯರಾವು ಉನ್ನತಿಯನ್ನೆಳಸುವೆವು ಮನ್ನೆಯರ್ ನೀವೆಮ್ಮೋಳಿನ್ನಾವೇಶಿಸೆ ಧನ್ಯರು ಮಾನ್ಯರು ನಾವಹೆವು7 ಆರ್ಯಮಹಿಳೆಯರೆನೆ ವೀರಮಾತೆಯರೆನೆ ಧಾರುಣಿಯೊಳಗೆಮ್ಮಂ ಧೈರ್ಯಸ್ಥೈರ್ಯೌದಾರ್ಯ ಗುಣಂಗಳ ಪೂರಿತರಪ್ಪಂತೊಸೆವುದೆಮಗಿನ್ನು 8 ಒಲಿದೆಮ್ಮನು ನೀವ್ ನೆಲೆಸಿರೆ ನಲವಿಂ ಬಲಗೊಳ್ಳುತ್ತಾನವರತಂ ಕಲಿಯುಗಮಲ್ಲಿದು ಕೃತಯುಗಮೆನುವೋಲ್ ಬೆಳಗುವೆವೆಲ್ಲೆಡೆಯೋಳ್9 ಪರಿ ಭಾವಿಸಿ ಮನ್ನಿಸಿರೆ ಶ್ರೀವರ ಶ್ರೀಶೇಷಗಿರೀವರ ನಾವಗ ಮೋವುಗೆ ಕರುಣಿಸಿರೆ 10
--------------
ನಂಜನಗೂಡು ತಿರುಮಲಾಂಬಾ
ಶಿವ ಮಹದೇವಗೆ ಶರಣೆಂಬೆನಾ ಮಾಯಾ ಶಿರ ಮಾಲಾಧರನಿಗೆ ಶರಣೆಂಬೆ ನಾ ಪ ಪಾರ್ವತಿ ರಮಣಗೆ ಶರಣೆಂಬೆ ನಾ ಭವತಾಪ ಸಂಹಾರಗೆ ಶರಣೆಂಬೆನಾ ಸರ್ವಕಾಲ ಬಿಡದೆ ಶರಣೆಂಬೆನಾ ಸಾಧು ಸಜ್ಜನರ ಪೊರೆವಗೆ ಶರಣೆಂಬೆನಾ 1 ನಂದಿವಾಹನಗೆ ಶರಣೆಂಬೆನಾ ನಾಗ ಭೂಷಣಗೆ ಶರಣೆಂಬೆನಾ ಸುಂದರ ಮೂರ್ತಿಗೆ ಶರಣೆಂಬೆನಾ ಸುರಮುನಿ ವಂದ್ಯಗೆ ಶರಣೆಂಬೆನಾ 2 ಗಜಚರ್ಮಧಾರಿಗೆ ಶರಣೆಂಬೆನಾ ಕೈಲಾಸ ವಾಸಿಗೆ ಶರಣೆಂಬೆನಾ ಭಯನಾಶ ಮಾಡ್ವವಗೆ ಶರಣೆಂಬೆನಾ ಭಕ್ತಿಭಾವ ಮಾನಸನಿಗೆ ಶರಣೆಂಬೆ ನಾ 3 ಲಯಕರ್ತ ಮೂರ್ತಿಗೆ ಶರಣೆಂಬೆನಾ ಕೈಲಾಸವಾಸಿಗೆ ಶರಣೆಂಬೆನಾ ಭಯನಾಶಮಾಡ್ವವಗೆ ಶರಣೆಂಬೆನಾ ಭಕ್ತಿಭಾವ ಮಾನಸನಿಗೆ ಶರಣೆಂಬೆ ನಾ 4 ಆಕಾರಶೂನ್ಯ ಪರೇಶಗೆ ಶರಣೆಂಬೆನಾ ಅಖಿಲಾಕಾರ ತಾನೆಂಬಗೆ ಶರಣೆಂಬೆನಾ ಲೋಕದೋಳ್ ಭಕ್ತರ ಪೊರೆವಗೆ ಶರಣೆಂಬೆನಾ ಶ್ರೀಲೋಲ ಹೆನ್ನೆವಿಠ್ಠಲ ಪ್ರಿಯಗೆ ಶರಣೆಂಬೆನಾ 5
--------------
ಹೆನ್ನೆರಂಗದಾಸರು
ಶೋಭಾನೆ ಶೋಭಾನೆ ಶೋಭಾನೆ ಪ ಶ್ರೀಗಣಾಧಿಪತಿಯ ಸಂಸೇವಿಸಿ ಶಂಕರನ ಭಜಿಸಿ ವಾಗಾಭಿಮಾನಿಯೆನಿಪ ಸರಸ್ವತಿ ದೇವಿಗೆ ವÀಂದಿಸಿ ಸಾಗರಸುತೆಯರಮಣ ನಿಂತು ಪೇಳಿಸಿದ ಪರಿಯೊ ಳೀಗ ಗಂಡುಮಕ್ಕಳಾಶೀರ್ವಾದ ಪದವ ಪೇಳ್ವೆ ಸುಜನರೆಲ್ಲಾಲಿಪುದು ಶೋಭಾನೆ 1 ಬಾಲನಾಗಿ ಪ್ರಹ್ಲಾದನವೋಲ್ ಬಹುಕ್ರೀಡೆಗಳಾಡುತಲಿ ಮೇಲೆ ಪಂಚಾಬ್ದದಿ ಸದ್ ವಿದ್ಯಾಭ್ಯಾಸಗಳನೆ ಮಾಡಿ ಶಾಸ್ತ್ರಾರ್ಥವೇತ್ತನಾಗುತಲಿ ಶೀಲಾದಿ ಸದ್ಗುಣಗಳುಳ್ಳ ಬಾಲೆಯಳ ಮದುವೆಯಾಗಿ ಕಾಲ ಕಾಲದಲ್ಲಿ ದೇವಋಷಿ ಪಿತೃಗಣಗಳ ಪೂಜೆ ಅಗ್ಗಳ ನೀನಾಗು 2 ಕೆರೆಗಳ ಕಟ್ಟಿಸು ಸರೋವರಗಳನ್ನೆ ಮಾಡಿಸು ನಿ- ನಿಖಿಳ ಯಜ್ಞಗಳಾಚರಿಸು ಸತ್ಪಾತ್ರಕ್ಕೆಯಿತ್ತುದಾತನೆಂದೆನಿಸು ನಿರತ ಬಂದವರಿಗನ್ನ ನೀಡುತ್ತ ಪ್ರಸನ್ನ ಮನದಿ ಮರಗಳ ಹಾಕಿಸು ಸಪ್ತಸಂತಾನಗಳನ್ನೆಗಳಿಸು ಮಾನ್ಯರೊಳು ವರ್ತಿಸಿಸುಖಿಸು 3 ಧರ್ಮಯುಕ್ತನಾಗುತ್ತ ಅಧರ್ಮಗಳ ಬಿಡುತ ಸ- ತ್ಕರ್ಮಗಳಾಚರಿಸು ಫಲವ ಕಂಜಾಕ್ಷಗರ್ಪಿತಮಾಡು ನಿತ್ಯ ಸಂತಸದಿ ಮರ್ಮಜ್ಞರೆನಿಪ ಗುರುಹಿರಿಯರ ಸೇವಿಸುತ ಸ ಮಾಡಿ ನಿತ್ಯಸುಖಿಯಾಗು 4 ಧೀರ್ಘಾಯುವಾಗಿರು ಬಂಧು ವರ್ಗವ ಪರಿಪೋಷಿಸು ಭರ್ಗಾದಿ ದೇವತೆಗಳ ಭಕ್ತಿಯಿಂದಾ ಪೂಜಿಸಿತ್ರಿ- ಅರ್ಥಿಯ ಪೊಂದು ಸ್ವರ್ಗಸ್ಥಿತಿ ಲಯಕರ್ತ ಗುರುರಾಮವಿಠಲ ನಘ್ರ್ಯ ಸಂಪದಗಳಿತ್ತು ಆದರಿಸಿ ತನ್ನ ಭಕ್ತಾ ನಿತ್ಯ ಸತ್ಯಾಧನವ ಮಾಡಿಸುವಾ ಶೋಭಾನೆ 5
--------------
ಗುರುರಾಮವಿಠಲ
ಶ್ರೀಆನಂದಮಯಸ್ತೋತ್ರ40ಪೂರ್ಣ ಸುಗುಣಾರ್ಣವನೆಅನಘಪರಮೇಶ್ವರನೆಆ ನಮಿಪೆ ಶ್ರೀರಮಣಆನಂದಮಯವಿಷ್ಣುಪನಿನ್ನಯ ಸುಮಹಿಮೆಗಳ ನಿನ್ನಿಚ್ಛೆಯಿಂದಲೇಚೆನ್ನಾಗಿ ತಿಳಿಸಿ ಅಚ್ಛಿನ್ನ ಭಕ್ತಿಯನೀಯೊ ಅಪಸುಖರೂಪ ಪಾಲನಾಲಯಕರ್ತ ಲಕ್ಷ್ಮೀಶನಿಷ್ಕಳನು ನೀ ಸದಾಕೈವಲ್ಯಸುಖದಆಗಮಸುಶಾಸ್ತ್ರೈಕ ವಿಜÉÕೀಯ ಪರಬ್ರಹ್ಮಅಂಗಾಂಗ್ಯಭಿನ್ನ ಆನಂದ ಸಂಪೂರ್ಣ 1ಬ್ರಹ್ಮಶಬ್ದದಿ ಮುಖ್ಯವಾಚ್ಯ ಬಹು ಆವರ್ತಿಬ್ರಹ್ಮಆನಂದಮಯನೀ ಇತರರಲ್ಲಬ್ರಹ್ಮಪರಿಪೂರ್ಣಹರಿಸರ್ವನಾಮದಿ ನೀನೆಬಹುರೂಪ ಸರ್ವಸ್ಥ ಈಶ್ವರಆನಂದಮಯ2ಚಿತ್ಪ್ರಕೃತಿ ನಾಲ್ಮೊಗನು ಅಷ್ಟಮೂರುತಿ ಎಂಬರುದ್ರನು ದೇವೇಂದ್ರ ಸುರಗುರುವಿಪ್ರಇಂಥ ಯಾರೂ ವಸ್ತು ಯಾವುದೊ ಅಲ್ಲವುಆನಂದಮಯನೀನು ವಿಷ್ಣು ಪರಬ್ರಹ್ಮ3ಪ್ರಕೃತಿ ಪ್ರಜಾಪತಿ ಸದಾನಂದ ದಶಪ್ರಮತಿರುದ್ರಾಷ್ಟಮೂರ್ತ್ಯಾದಿ ಸರ್ವ ಶಬ್ದಂಗಳುಪರನೆ ಬ್ರಹ್ಮನೆ ವಿಷ್ಣು ಮುಖ್ಯ ವಾಚಕ ನಿನಗೆಇರುವ ಈ ಸರ್ವರೊಳು ಸುಖಪೂರ್ಣ ಸ್ವಾಮಿ 4ಅನ್ನಮಯ ಪ್ರಾಣಮಯ ಮನೋಮಯ ವಿಜ್ಞಾನಮಯಆನಂದಮಯಎಂಬ ಐದು ಶಬ್ದಂಗಳು 1ಆನಂದಮಯಶಬ್ದದಿಂದ ಗ್ರಹಿಸಲುಬೇಕುಆನಂದಮಯಬ್ರಹ್ಮ ನೀನೆ ಇತರರು ಅಲ್ಲ5ಶಿರ ಬಾಹುದ್ವಯ ಮಧ್ಯಚರಣಅಂಗಾಂಗಗಳುಪೂರ್ಣಆನಂದಮಯಎಂದೂ ಅಭಿನ್ನಉರು ಸುಗುಣ ಪರಿಪೂರ್ಣ ವಿಷ್ಣು ಆತ್ಮನು ಬ್ರಹ್ಮಶೃತಿಯು ಬಹುಸಾರುತಿದೆ ಸುಖಮಯನು ಎಂದು 6ಅನ್ನಮಯ ಅನಿರುದ್ಧ ಪ್ರಾಣಮಯ ಪ್ರದ್ಯುಮ್ನಮನೋಮಯ ಸಂಕರ್ಷಣನು ವಿಜ್ಞಾನಮಯನುಅನಘಮಾಯಾರಮಣ ಪರವಾಸುದೇವ ನೀಆನಂದಮಯಶ್ರೀಶ ನಾರಾಯಣ ಬ್ರಹ್ಮ7ಪಂಚ ಕೋಶಂಗಳಲಿ ತನ್ನಾಮ ತದ್ಭಿನ್ನಕಿಂಚಿತ್ತು ಲೇಪವಿಲ್ಲದೆ ಇದ್ದು ನಿಯಮಿಸುವೆಪಂಚ ಸುಖರೂಪದಿಂ ಪಂಚವರ್ಣದಿ ಜ್ವಲಿಪೆಸಂಚಿಂತಿಪರ್ಗೆ ಸುಖವೀವೆ ಸುಖಮಯ ಬ್ರಹ್ಮ 8ಅಧಿಕಾರಿ ಆನಂದಪ್ರಚುರಬಹುರೂಪ ನೀಸರ್ವರೂ ನಿನ್ನಿಂದ ಉಪಜೀವ್ಯರೊ ಸ್ವಾಮಿಸರ್ವರಿಗು ಪ್ರೇರಕನು ಸತ್ತಾಪ್ರವೃತ್ತಿದನುಸರ್ವೇಶ ಸುಖಪೂರ್ಣ ಸರ್ವವ್ಯಾಪಿಯೆ ದೇವ 9ಆನಂದಮಯನೀನೆ ಆನಂದೋದ್ರೇಕದಿಂಪ್ರಾಣಿಗಳ ಧರ್ಮಗಳ ಪ್ರವೃತ್ತಿ ಮಾಡುವೆಯೊಆನಂದೋದ್ರೇಕದಿಂ ಸರ್ವತ್ರವ್ಯಾಪ್ತ ನೀಆನಂದಮಯಇತರ ಲೋಕಚೇಷ್ಟಕರಿಲ್ಲ10ಅಂಗಾಂಗಿತ್ವದಿ ಭಗವಂತ ನೀ ಕ್ರೀಡಿಸುವೆರಂಗ ನೀ ಸತ್ಯಂ ಜ್ಞಾನಮನಂತಂ ಬ್ರಹ್ಮನೆಂದುಹೊಗಳುತಿದೆ ಶೃತಿಯು ಸುಖಸಾರಾತ್ಮ ಚಿನ್ಮಾತ್ರಚಾರ್ವಾಂಗ ನಿನ್ನ ತಿಳಿಯದೆ ಬೇರೆ ಗತಿಯಿಲ್ಲ 11ಸತ್ಯ ಸತ್ಸøಷ್ಟಿಕರ್ತ ಜೀವನಪ್ರದನುಸರ್ವ ಪ್ರವರ್ತಕನು ಸಂಹಾರಕರ್ತಅಶೇಷಸಾಮಾನ್ಯ ವಿಶೇಷಜ್ಞಾನವು ಜ್ಞಾನದೇಶಾದಿಪರಿಚ್ಛೇದ ಶೂನ್ಯವು ಆನಂತ 12ಅನ್ನಮಯದಿಂ ಸೃಷ್ಟಿ ಸಂಹಾರಜೀವನವುಪ್ರಾಣಮಯ ಶಬ್ದ ಸಹ ಜೀವನಪ್ರದವುಮನೋಮಯ ಶಬ್ದದಿಂ ಸಾಮಾನ್ಯಜ್ಞಾನವುವಿಜ್ಞಾನಮಯ ಶಬ್ದದಿ ವಿಶೇಷಜ್ಞಾನ 13ಆನಂದಮಯಶಬ್ದದಿಂದಲಿ ಜÉÕೀಯವುಆನಂದಾದ್ಯಖಿಳಗುಣ ಅಪರಿಚ್ಛಿನ್ಮತ್ವಅನ್ನಮಯ ಪ್ರಾಣಮಯ ಸತ್ಯಂ ಬ್ರಹ್ಮಮನೋಮಯ ವಿಜ್ಞಾನಮಯ ಜ್ಞಾನಂ ಬ್ರಹ್ಮ 14ಆನಂದಮಯಆನಂತಂ ಬ್ರಹ್ಮ ಎಂದೀ ರೀತಿಮಂತ್ರವರ್ಣೋಕ್ತ ಶಬ್ದಗಳಿಗೇಕಾರ್ಥಆನಂದಮಯಮೊದಲಾದ ಶಬ್ದಗಳಿಂದಆನಂದಪರಿಪೂರ್ಣ ವಿಷ್ಣು ನೀನೇ ವಾಚ್ಯ 15ಆತ್ಮ ನೀಆನಂದಮಯಇತರರು ಅಲ್ಲಆನಾತ್ಮರು ಸಂಪೂರ್ಣಸ್ವತಂತ್ರರು ಅವರುಚೇತನಾಚೇತನದಸತ್ತಾನಿನ್ನಿಂದಲೇಆನಂತ ನೀ ಸರ್ವಗನು ಆಸಮ ಪ್ರಭು ಐರ 16ಬ್ರಹ್ಮ ವಿದಾಪ್ನೋತಿ ಪರಂ ಎಂದು ಉಪನಿಷದ್ವಾಕ್ಯಬ್ರಹ್ಮಾಪರೋಕ್ಷವೇ ಮೋಕ್ಷಕ್ಕೆ ಕಾರಣಬ್ರಹ್ಮೇತರ ವಿರಿಂಚಾದಿ ಜೀವರ ಜ್ಞಾನಮೋಕ್ಷಕೊಡಲು ಎಂದು ಶೃತಿಯು ಪೇಳುತಿದೆ 17ತಮೇವಂ ವಿದ್ವಾನಮೃತ ಇಹಭವತಿನಾನ್ಯಃ ಪಂಥಾ ಅಯನಾಯ ವಿದ್ಯತಾಎಂಬ ಶೃತ್ಯನುಸಾರ ನಿನ್ನಾಪರೋಕ್ಷ ವಿನಾಮುಕ್ತಿಯು ಲಭಿಸದು ಅನ್ಯಜ್ಞಾನದಿ ಎಂದೂ 18ಆನಂದಪ್ರಚುರ ಪೂರ್ಣಾನಂದಮಯ ನೀನೆಆನಂದ ತರತಮದಿ ಜೀವರಲಿ ಉಂಟುಅತ್ಯಂತ ಭೇದವು ನಿನಗೂ ಜೀವರಿಗೂಅನಂತ ಅಪರಿಮಿತ ಆನಂದಿ ನೀನೆ 19ರುದ್ರನ ಶತಗುಣಿತ ಆನಂದ ನಾಲ್ಮೊಗನಒಂದು ಆನಂದವು ಎಂಬುವುದು ಶೃತಿಯುಆನಂದ ಪರಿಮಿತವು ಜೀವರಿಗೆ ಈ ರೀತಿಆನಂದ ಅಪರಿಮಿತ ನಿನ್ನಯ ಸ್ವರೂಪ 20ಸುಖಮಯ ನಿನ್ನಪರಿಮಿತಾನಂದಾದಿಗಳನುಸಾಕಲ್ಯತಿಳಿದವರು ಇಲ್ಲವೇ ಇಲ್ಲಸಾಕಲ್ಯಶಬ್ದಗಳು ಪೊಗಳಲರಿಯವು ನಿನ್ನಏಕಸುಖಮಯ ನೀನು ಜೀವರಿಗೆ ಭಿನ್ನ 21ತತ್ವಮಸ್ಯ ಹರಿಬ್ರಹ್ಮಾಸ್ಮಿ ಪುರುಷಯೇ ವೇದಂಸರ್ವಂ ಎಂಬಂಥಾ ಇಂಥ ಶೃತಿ ಮಾತುಗಳುಜೀವೇಶ ಐಕ್ಯವನು ಬೋಧಿಸುವವಲ್ಲವುಸರುವಿಚಾರ ನಿರ್ಣಯದಿ ಭೇದಬೋಧಕವೆ 22ಜೀವರಿಗೆ ಜನ್ಮಜೀವನಸತ್ತಾದಾತನುಸರ್ವಾಶ್ರಯ ಸರ್ವನಿಯಾಮಕನು ಆತ್ಮಜೀವರು ಪರಬ್ರಹ್ಮಜ್ಞಾನದಿಂ ಪೊಂದುವಸೋಚಿತಪೂರ್ಣತ್ವ ಕೊಡುವ ನೀ ಬ್ರಹ್ಮ 23ಸರ್ವಕ್ಕೂ ಭಿನ್ನ ನೀ ಸರ್ವತ್ರ ಸರ್ವದಾಸರ್ವದೊಳು ಇರುವಂಥ ಸರ್ವೇಶ್ವರಸರ್ವ ಸತ್ತಾದಿ ಪ್ರದತ್ವ ಸ್ವಾಮಿತ್ವದಿಂಸರ್ವ ನೀನೆಂದೆನಿಸಿಕೊಂಬೆಯೊ ದೇವ 24ಸರ್ವವಂದ್ಯನು ವಿಷ್ಣು ಸರ್ವಾಂತರ್ಯಾಮಿಯುಸ್ವತಂತ್ರ ಈಶನು ಸರ್ವಜೀವರಿಗೆ ಭಿನ್ನಸರ್ವಸ್ವಾಮಿಯು ನೀನು ಎಂದರಿತು ಭಜಿಪರಿಗೆಸರ್ವಶೋಕವ ಬಿಡಿಸಿ ಮೋಕ್ಷಸುಖವೀವೆ 25ಸರ್ವಜಡ ಚೇತನದಿ ಅಂತರ್ನಿಯಾಮಕನುಸರ್ವಜಗದಾಧಾರ ಏಕ ಬಹುರೂಪತ್ವಂ ಅಸೌ ಅಹಮೆಂದು ಸರ್ವನಾಮದಿ ವಾಚ್ಯಸರ್ವಜಡ ಚೇತನಕೆ ವಿಲಕ್ಷಣನು ಸ್ವಾಮಿ 26ಅತೀಂದ್ರಿಯವು ಬ್ರಹ್ಮವಿಷಯಕ ಜ್ಞಾನಶೃತ್ಯನುಸಾರವಿಲ್ಲದ ಅನುಮಾನದುಸ್ತರ್ಕದಿಂದಲಿ ಲಭಿಸದು ಯಾರಿಗೂಮೋದಮಯ ಶ್ರೀ ವಿಷ್ಣು ಜೀವರಿಂ ಭಿನ್ನ 27ಬದ್ಧರೊಳು ಮುಕ್ತರೊಳು ಇದ್ದು ನೀ ನಿಯಮಿಸುವೆಬದ್ಧರಂತೇ ಮುಕ್ತಜೀವರಿಗೂ ಭಿನ್ನಮುಕ್ತರಿಗೆ ಅವರವರ ಆನಂದ ಅನುಭವವುಅಧೀನ ನಿನ್ನಲ್ಲಿಆನಂದಮಯಶ್ರೀಶ28ಸದಮಲ ಬ್ರಹ್ಮ ನಿನ್ನ ಪರೋಕ್ಷಜ್ಞÕನಿಗೆಪದುಮಸಂಭವ ಸಹ ನೀನು ಸಹ ಇದ್ದುಒದಗಿಸುವೆ ಸೋಚಿತ ಮೋಕ್ಷಸುಖ ಅವರಿಗೆಹೇ ದಯಾನಿಧೇ ನಮೋ ಆನಂದಪೂರ್ಣ 29ಅನ್ನ ಪ್ರಾಣ ಮನೋವಿಜ್ಞಾನಆನಂದಮಯಪರಿಣಾಮ ಅಭಿಮಾನರಹಿತ ಅಧಿಕಾರಿಆನಂದ ಪ್ರಚುರನೇ ಲೋಕಚೇಷ್ಟಕ ನೀನೆಮಂತ್ರವರ್ಣೋಕ್ತ ಮಹಾಮಹಿಮ ಸುಖಪೂರ್ಣ 30ವನಜಾಸನಾದಿಗಳು ಆನಂದಮಯರಲ್ಲನಿನ್ನಿಂದ ಉಪಜೀವ್ಯ ಭಿನ್ನರು ಅವರುಆಮ್ನಾಯದಿಂ ವೇದ ದುಸ್ತರ್ಕಕತಿ ದೂರಆನಂದಮಯವಿಷ್ಣು ಮುಕ್ತರಿಗೂ ಆಶ್ರಯನು31ಜ್ಞಾನಸುಖಪೂರ್ಣ ಪ್ರಸನ್ನ ಶ್ರೀನಿವಾಸಪೂರ್ಣಪ್ರಜÕರ ಹೃತ್‍ಸ್ಥ ಜನ್ಮಾದಿಕರ್ತಎನ್ನ ಒಳಹೊರಗಿದ್ದು ನೀನೆ ನುಡಿದೀ ಗ್ರಂಥನಿನಗೆ ಅರ್ಪಣೆ ಸುಹೃದನಿತ್ಯಸಂತೃಪ್ತ32
--------------
ಪ್ರಸನ್ನ ಶ್ರೀನಿವಾಸದಾಸರು
ಹೊಯ್ಯಾಲೊ ಡಂಗುರವ - ಜಗ - |ದಯ್ಯನಯ್ಯ ಶ್ರೀಹರಿ ಅಲ್ಲದಿಲ್ಲವೆಂದುಪ.ಅಷ್ಟೈಶ್ವರ್ಯದ ಲಕುಮಿಯ ಅರಸೆಂದು |ಸೃಷ್ಟಿ - ಸ್ಥಿತಿ - ಲಯಕರ್ತನೆಂದು ||ಗಟ್ಟಿಯಾಗಿ ತಿಳಿದುಹರಿ ಎನ್ನದವರೆಲ್ಲ |ಭ್ರಷ್ಟರಾದರು ಇಹ - ಪರಕೆ ಬಾಹ್ಯರು ಎಂದು 1ಹರಿಯೆಂಬ ಬಾಲನ ಹರಹರ ಎನ್ನೆಂದು |ಕರುಣವಿಲ್ಲದೆ ಪಿತ ಬಾಧಿಸಲು ||ತರಳನ ಮೊರೆಕೇಳಿ ನರಮೃಗರೂಪದಿ |ಹರಿಯ ನಿಂದಕನ ಸಂಹರಿಸಿದ ಮಹಿಮೆಯ 2ಕರಿ ಆದಿಮೂಲನೆ ಕಾಯೆಂದು ಮೊರೆಯಿಡೆ |ಸುರರನು ಕರೆಯಲು ಬಲ್ಲದಿರೆ ||ಗರುಡನನೇರದೆ ಬಂದು ಮಕರಿಯ ಸೀಳ್ದು |ಕರಿರಾಜನ ಕಾಯ್ದ ಪರದೈವ ಹರಿಯೆಂದು 3ಸುರಪಗೊಲಿದು ಬಲಿಯ ಶಿರವನೊದ್ದಾಗಲೇ |ಸುರಸವು ಉದಿಸೆ ಶ್ರೀ ಹರಿಪಾದದಿ ||ಪರಮೇಷ್ಟಿ ತೊಳೆಯಲು ಪವಿತ್ರೋದಕವೆಂದು |ಹರ ತನ್ನ ಶಿರದಲ್ಲಿ ಧರಿಸಿದ ಮಹಿಮೆಯ 4ಮಾನಸಲಿಂಗಪೂಜೆಗೆ ಮೆಚ್ಚಿ ಶಿವ ಬಂದು |ಬಾಣನ ಬಾಗಿಲ ಕಾಯ್ದಿರಲು |ದಾನವಾಂತಕ ಸಾಸಿರ ತೋಳ ಕಡಿವಾಗ |ಮೌನದಿಂದೊಪ್ಪಿಸಿಕೊಟ್ಟ ಶಿವನು ಎಂದು 5ಭಕ್ತಗೊಲಿದು ಭಸ್ಮಾಸುರಗೆ ಶಿವ ವರವಿತ್ತು |ಭಕ್ತನ ಭಯದಿಂದ ಓಡುತಿರೆ ||ಯುಕ್ತಿಯಿಂದಸುರನ ಸುಟ್ಟು ಶಿವನ ಕಾಯ್ದ |ಶಕನು ಶ್ರೀಹರಿ ಅಲ್ಲದಿಲ್ಲವೆಂದು 6ಗರಳಜ್ವಾಲೆಗೆ ಸಿರಿರಾಮ - ರಾಮನೆಂದು |ಸ್ಮರಿಸುತಿರಲು ಉಮೆಯರಸನಾಗ ||ಕೊರಳು ಶೀತಲವಾಗೆ ಸಿತಿಕಂಠ ತನ್ನಯ |ಗಿರಿಜೆಗೆ - ರಾಮಮಂತ್ರವ ಕೊಟ್ಟ ಮಹಿಮೆಯ 7ಹರಬ್ರಹ್ಮ ಮೊದಲಾದ ಸುರರನುದಶಶಿರ |ಸೆರೆಹಿಡಿದು ಸೇವೆಯ ಕೊಳುತಿರಲು ||ಶರಧಿಯ ದಾಟಿ ರಾವಣನ ಸಂಹರಿಸಿದ |ಸುರರ ಲಜ್ಜೆಯ ಕಾಯ್ದ ಪರದೈವ ಹರಿಯೆಂದು 8ಜಗದುದ್ಧಾರನು ಜಗವ ಪೊರೆವನೀತ |ಜಗ ಬ್ರಹ್ಮಪ್ರಳಯದಿ ಮುಳುಗಲಾಗಿ ||ಮಗುವಾಗಿ ಜಗವನುದ್ಧರಿಸಿ ಪವಡಿಸಿ ಮತ್ತೆ |ಜಗದ ಜನಕಪುರಂದರವಿಠಲನೆಂದು9
--------------
ಪುರಂದರದಾಸರು