ತಿಳಿದುಕೊಳ್ಳಿ ಖೂನ ಬಲ್ತು ನಿಜ ಜ್ಞಾನ ಧ್ರುವ
ಹಾದಿ ಅದೆ ಹಿಂದಗಾಧ ಅದೆ ಮುಂದೆ
ಭೇದಿಸಿನ್ನು ತಿಳಿದುಕೊಳ್ಳಿ ಗುರುಕೃಪೆಯಿಂದ 1
ಲಬ್ಧ ಅದೆ ಹಿಂದೆ ಶಬ್ದ ಅದೆ ಮುಂದೆ
ಲಬ್ಧವಾಗಿ ಕೇಳಿಕೊಳ್ಳಿ ಗುರುದಯದಿಂದ 2
ಅರ್ಥ ಅದೆ ಹಿಂದೆ ಸ್ವಾರ್ಥ ಅದೆ ಮುಂದೆ
ಅರ್ತು ಇದೆ ಕೇಳಿಕೊಳ್ಳಿ ಗುರು ಜ್ಞಾನದಿಂದೆ 3
ಗುಂಭ ಅದ ಹಿಂದೆ ಡಂಭ ಅದೆ ಮುಂದೆ
ಇಂಬು ಇದೇ ತಿಳಿದುಕೊಳ್ಳಿ ಗುರು ಜ್ಞಾನದಿಂದೆ 4
ನೋಟ ಅದೆ ಮುಂದೆ ಕೂಟ ಅದೆ ಹಿಂದೆ
ನೀಟವಾಗಿ ಗುರುವಿಗೆ ಕೇಳಬೇಕು ಒಂದೆ 5
ಮನವು ಅದೆ ಮುಂದೆ ಘನವು ಅದೆ ಹಿಂದೆ
ತನುವಿನೊಳು ಮಾಡಿಕೊಳ್ಳಿ ಖೂನ ನಿಜ ಒಂದೆ 6
ದೇಹ್ಯ ಅದೆ ಮುಂದೆ ಸೋಹ್ಯ ಅದೆ ಹಿಂದೆ
ಸೋಹ್ಯ ದೋರಿಕೊಡುವ ಮಹಿಪತಿ ಗುರು ತಂದೆ7