ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಡಂಭಕ ಹರಿದೂರ ಪ್ರಾಣೀ ಪ ಅಂಬುಜನಾಭನ ಇಂಬನ ಪಡಿಯದೇ| ಡೊಂಬನ ಪರಿಯಾಚಾರ ಪ್ರಾಣೀ ಅ.ಪ ಅಬ್ಧಿಶಯನ ಸಿರಿನಾಥನ ಒಲುಮೆಯ| ಲಬ್ಧ ದೊರೆಯದೆ ವಿಚಾರಾ|| ಲಬ್ಧನಾಗಿ ಧನ ಮಾನಕಬಿಟ್ಟಿನೀ| ಶಬ್ದದಂಗಡಿ ಪ್ರಸರಾ|ಪ್ರಾಣೀ 1 ಪೊಡವಿಯೊಳಗ ಉಗ್ರಸಾಧನದಿಂದಲಿ| ಬಿಡದೆವೆ ತವಶರೀರಾ||ಒಡನೆ ಮರೆದು ರಿಧ್ಧಿಸಿಧ್ಧಿಯ ಬಲದಲಿ| ಹಿಡದಿ ಮನದಿ ಅಹಂಕಾರ|ಪ್ರಾಣೀ 2 ಅದಿತತ್ವದಾಗಲೆ ಸಾಧಿಸೇನೆಂದರೆ| ಸಾಧನ ಕೇಳು ಸುಸಾರಾ|| ಭೇದಿಸು ಮಹಿಪತಿ ನಂದನ ಸಾರಿದ| ಸಾಧು ರಾಶ್ರಯ ಮನೋಹರ|ಪ್ರಾಣೀ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮುದ್ದು ಸುರಿಯುತಾನೆ ನೋಡಿ ಕೃಷ್ಣ ಪ ಮುದ್ದು ಸುರಿಯುತಾನೆ ಸಿದ್ಧ ಜನರ ವಂದ್ಯ ಮಧ್ವವಲ್ಲಭ ಕೃಷ್ಣ ಹೃದ್ವನಜದಲಿ ಬಲ್ ಅ.ಪ ತ್ರಿವಂಗಿ ಭಾವದಿ ಶ್ರೀ ವೇಣುಪಿಡಿದು ತಾ ಸಾವೇರಿ ಮೊದಲಾದ ರಾಗವ ಪಾಡುತ1 ಬಲದ ಪಾದದಿ ಚೆಲುವ ಎಡದ ಪಾದವನಿಟ್ಟು ನಳಿನಮುಖಿ ರುಕ್ಮಿಣಿ ಬಲ ಸತ್ಯಭಾಮೇರಿಂದ 2 ಧ್ವಜ ವಜ್ರಾಂಕುಶ ಚಕ್ರ ಕಂಜಚಿನ್ಹೆಗಳಿಂದ ತೇಜ ಮುಕುಟ ಶಿರಶ್ಚಕ್ರ ಶೋಭಿತಮುಖ 3 ಶ್ರೀ ಪಾದರಾಯರಿಗೆ ಸ್ವಪ್ನಲಬ್ಧನಾಗಿ ಶ್ರೀ ಪದ್ಮಭವಂದ್ಯ ಪ್ರತ್ಯಕ್ಷ ವ್ಯಾಸಮುನಿಗೆ 4 ಶ್ರೀ ನರಹರಿಯು ತಾ ನೆನೆಯುವರಿಗೆ ಭವ ಕಾನನದ ಭಯದ ಮನ ಶಂಕಿಸದಿರೆಂದು5
--------------
ಪ್ರದ್ಯುಮ್ನತೀರ್ಥರು