ಒಟ್ಟು 5 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನುದಿನ ವಿಷಯ ಸುಖವು ಎಂದು ಕನಸಿಲಾದರು ಸ್ಮರಿಸಲಾಗದು ಮನವೆ ಪ ಘನ ಸಂತೋಷವಿಲ್ಲವಿದು ನಿತ್ಯಾನಿತ್ಯ ಸುಖ ಬಯಸಿ ಮನದಲ್ಲಿ ನೀ ಸ್ಮರಿಸೆ ಹರಿಯೆ | ತೊರೆಯ ಅ.ಪ ಅಶನ ವಸನ ಪಶುವ್ರಾತ ವಶವಿರುವಾಭರಣ ಹಸನಾದ ರಥ ಪದಾತಿಗಳು ಸ್ವಸ್ವರೂಪವಲ್ಲ ಭಿನ್ನ ತಿಳಿಯೊ | ಮಮತೆ ಅಳಿಯೊ 1 ಬುದ್ಧಿ ವಿದ್ಯಾಕುಶಲ ಗತಿ ಅಧ್ವರ್ಯ ಪ್ರಭು ಮನ್ನಣೆ ಶುದ್ಧ ರೂಪ ಲಾವಣ್ಯ ಯೌವನ ಸಿರಿ ಶೌರ್ಯ ಪರಾಕ್ರಮ ವದ್ಯವಾಗಿ ಪೋಪುದು ಸ್ಥಿರವಲ್ಲ | ಸುಳ್ಳಲ್ಲ 2 ಇಚ್ಛೆಯಿಲ್ಲದೆ ನೀನು ಜನರ ಮೆಚ್ಚಿಗಾಗಿ ಮಾಡಿದ ದಾನ ವೆಚ್ಚವಾಗಿ ಪೋಪವೊ ಧನವಲ್ಲದೆ ನಿಚ್ಚಳ ಪುಣ್ಯಬಾರದು ಮನವೆ ಹೆಚ್ಚಿನ ಸ್ತೋತ್ರಕೆ ಮರುಳಾಗಿ ನೆಚ್ಚದಿರು ವಿಹಿತೋಕ್ತಿಯ | ಬಿಡದಿರು ಸನ್ಮತಿಯ 3 ಆರ್ತನಾಗದಲೆ ನೀನು ಕೀರ್ತಿಗೋಸುಗ ಕಥಾಶ್ರವಣ ಕರ್ತಭಾವದಿ ಸತತ ಮಾಡೆ ವರ್ತಿಸುವ ಪುಣ್ಯಪ್ರಾಪ್ತಿ ವೈಷಿಕ ಸುಖವಲ್ಲದೆ ಶಾಸ್ತ್ರಮರ್ಮ ತಿಳಿಯದೊ | ಅಹಂ ಮಮವಳಿಯದೊ 4 ಮಾನಿತನು ನಾನೆಂದು ನಾನಾ ಮತವಾಶ್ರಯಿಸಿ ಜ್ಞಾನಿಗಳಿಗೆ ಶಿರಬಾಗಲೊಲ್ಲಿ ಏನು ಇದರಿಂದೆಂಬ ತ್ರಿಕರಣ ಶುದ್ಧಿಕಾರಣ ದ್ಯುನದಿ ಸ್ನಾನವಾಹವಲ್ಲಾ | ಇದು ಬಿಡಸಲ್ಲಾ 5 ಕೈಗೊಳುವುದೇ ಮಾನ ಅನ್ಯಾಧೀನವೆನ್ನದೆಂಬುದೇ ಲಜ್ಜಾ ಅನುಭವ ಜ್ಞಾನಿಗಳ ಸಹವಾಸ ಸ್ನಾನ ಸಚ್ಛಾಸ್ತ್ರಾಲಾಪ ನಾನು ನನ್ನದು ಬಿಡುವುದೇ ತ್ಯಾಗ | ಇದೇ ಯೋಗ 6 ಕರಣ ವಿಷಯಗಳಲ್ಲಿ ಹರಿಯ ಚಿಂತಿಸುತ ನಿತ್ಯ ವರ ಯೋಗ ಭೋಗದಲ್ಲಿ ವರ ರಾಮಚಂದ್ರವಿಠಲರಾಯನು ನಿನ್ನ ದುರಿತ ಕಳೆದು ಪಾಲಿಸುವ7
--------------
ವಿಜಯ ರಾಮಚಂದ್ರವಿಠಲ
ಪತಿತ ಪಾವನ ನೀನೆ ಗತಿಯೆನಗೆ ಕೇಳು ಅತಿ ನೀಚ ತರತಮನಾದವಗೆ ಪ. ಸಾರಥಿ ಸ್ಥಿರವಲ್ಲವು ದುರುಳ ದಶೇಂದ್ರಿಯಾಶ್ವಗಳಿರವು ಹುರುಳಿಲ್ಲದಂತೆ ದುರ್ವಿಷಯಾಂಧಕೂಪಕೆ ಸರಿದು ಪೋಗುತಲೆನ್ನ ಕೆಡಹುವವು 1 ಅನ್ಯರಿಗುಸುರೆ ಲಜ್ಜಾಕರದ ಅನ್ಯಾಯ ಕೃತ್ಯದಿಂದಲಿ ನೆರೆದ ಮುನ್ನಿನ ನರಕಯಾತನೆಗಳ ತರಿವದ ನಿನ್ನ ಚರಣಕೊಪ್ಪಿಸಿದೆ ವರದ 2 ದಾಸದಾಸ್ಯವನೆಲ್ಲ ದಯಮಾಡು ಪ- ರೇಶ ಪರಾತ್ಪರ ಮೂರುತಿಯೆ ಲೇಶಾಯಾಸವಿಲ್ಲದೆ ಸಲಹುವ ಜಗ- ದೀಶ ಶೇಷಾಚಲವಾಸಿ ಹರೇ 3
--------------
ತುಪಾಕಿ ವೆಂಕಟರಮಣಾಚಾರ್ಯ
ಯಾಕ ಸ್ಮರಸದೀ ಮನಸಿಗೇ ಪ ಯಾಕ ಸ್ಮರಸದೀ ಮನಸಿಗೆ | ಲೋಕದೊಳು ತನ್ನ ಸುಖಗೆ | ಮಾಕಾಂತ ನಡಿಗಳ ಮರೆಹೊಕ್ಕು | ವಿ ವೇಕ ಸೌಖ್ಯ ಪಡಿಯದೀಗ 1 ಉತ್ತಮ ಸಂಗವ ನೆರೆಮಾಡಿ ತನ್ನ | ಚಿತ್ತದ ಚಂಚಲ ನೀಡ್ಯಾಡೀ | ನಿತ್ಯದಿ ಗುರು ಹಿರಿಯರ ಶೇವೆಯಲಿ| ಹೊತ್ತು ಸಾರ್ಥಕ ಕಳಿಯದು ನೋಡು 2 ಸಣ್ಣ ದೊಡ್ಡವರಿಂದ ಭಲರೇಯಾ ಯಂದು | ಮನ್ನಿಸಿಕೊಳ್ಳದೇ ಅವರ ಕೈಯ್ಯಾ | ಕುನ್ನಿಯ ಛೀ ಸುಡು ಸುಡು ಯಂದು | ನಿನ್ನ ಜನ್ಮಕೆನಿಸುವದು ಬಲು ಕುಂದು 3 ವಿಹಿತವೇ ಅಹಿತವೆಂದು ಬಗೆವದು ತನ್ನ | ಸ್ವಹಿತವೇ ಅಹಿತೆಂದಾಚರಿಸುವುದು | ಇಹಪರ ಲೋಕಕ ಸಲ್ಲದು ಆಗಿ | ಕುಹಕ ಬುದ್ಧಿಯಿಂದಲೇ ಬಾಳುದು 4 ಜನಲಜ್ಜಾ ಮನಲಜ್ಜಾ ವೆರಡಿಲ್ಲಾ ಇದ | ಕೇನೋ ಮುಂದಣಗತಿ ಶಿವಬಲ್ಲಾ | ಅನುಮಾನ ವಿಲ್ಲಿದರೊಳು ಕಂಡು ಕೇಳಿ | ಘನಗುರು ಮಹಿಪತಿ ಜನ ಸೊಲ್ಲಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೀರಾಜನವನೆತ್ತಿರೊ ತಿಮ್ಮಯ್ಯಗೆವಾರಿಜೋದ್ಭವಕಾಮರಯ್ಯಗೆಪ.ಆನಕದುಂದುಭಿಕೂಡೆ ಬಂದಧೇನುಕಾವರ ಪಳ್ಳಿಲಿ ನಿಂದನಾನಾ ಕೃತ್ರಿಮಗೈದಾಳರಿಗೆಪಾನಕೆ ಗೋರಸ ಅಪಹಾರಿಗೆ 1ಆವುಕಾವದಾವಾಗ್ನಿಯ ನುಂಗಿಗೋವಕ್ಕಳ ಸಖರ ಸುಸಂಗಿಪಾವನು ಕಾಲಿನಿಂದ ತುಳಿದಗೆಭಾವಕಿಯರ ಭಾವಕೊಲಿದಗೆ 2ಕೋಪವಿಲ್ಲದನ ಕೂಡಿ ಹೋಗಿಪಾಪವೆಲ್ಲಳಿದು ಮಾವನನೀಗಿತಾಪವಾರಿಸಿದ ತಂದೆ ತಾಯಿಗೆಭೂಪ ಉಗ್ರಸೇನಾಶ್ರಯಗೆ 3ಶ್ರೀರುಕ್ಮಿಣಿ ಸತ್ಯೆಯರಾಳಿನರಕಾಸುರನ ತಲೆಹೋಳಿಭೂರಿಕನ್ನೇರ ಕೈವಿಡಿದಗೆದ್ವಾರಕ ನಗರದರಸಗೆ 4ಕುಂತಿ ಪುತ್ರರ ಸುಖ ಬೆಳೆಸಿಕಾಂತೆ ಪಾಂಚಾಲಿ ಲಜ್ಜಾ ಉಳಿಸಿಭ್ರಾಂತ ಪಾಪಿ ಕೌರವನಾಶಗೆಕಾಂತ ಪ್ರಸನ್ವೆಂಕಟಾದ್ರೀಶಗೆ 5
--------------
ಪ್ರಸನ್ನವೆಂಕಟದಾಸರು