ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಂತೆಂದ್ಹಿಗ್ಗ ಬೇಡೆಲೊ ಖೋಡಿ ಹೋ ಯ್ತೆಂದಳಬೇಡೆಲೆ ಖೋಡಿ ಪ ಬಂತುಹೋಯ್ತೆಂಬುದರಂತರ ತಿಳಕೊಂ ಡಂದಕನನುವಿಗೆ ತ್ವರೆ ಮಾಡಿ ಅ.ಪ ಬಂದು ನಿನಗಾಗುವುದೇನೋ ಮತ್ತು ಹೋದರೆ ನಿಂತ್ಹೋಗುವುದೇನೋ ಮಂದನಾಗದೆ ನೀ ಬಂದ ಖೂನ ತಿಳಿ ದೊಂದಿ ಭಜಿಸಿ ಹರಿದಯ ಪಡಿ1 ಎಂಥಸಮಯವನು ನೀ ಪಡೆದು ಭವ ಸಂತೆಯೊಳಗೆ ನಿಂತಿ ಮೈಮರೆದು ಸಂತೆಯ ತಂತ್ರಕೆ ಸೋಲದೆ ಕಂತು ಪಿತನನೆನಿ ಲಗುಮಾಡಿ 2 ಕ್ಷಿತಿಯ ಸುಖವು ನಿನಗೊಂದಿಲ್ಲ ನಿಜ ಭವ ಮೂಳ ಸತತದಿ ಭಕುತಹಿತ ಶ್ರೀರಾಮನನ್ನು ನುತಿಸಿ ಮುಕ್ತಿ ಸುಖ ಪಡಿಬೇಡಿ 3
--------------
ರಾಮದಾಸರು
ಯಾಕೆ ಜೀವನೆ ಒಣ ಉಸಾಬರಿ ನಿನ ಗ್ಯಾಕೆ ಲೋಕದ ಸುಳ್ಳೆ ಕಿರಿ ಕಿರಿ ಪ ಪಾದ ಬಿದ್ದು ಮೊರಿ ಪರ ಲೋಕ ಪದವಿ ಸಂಪಾದಿಸಿ ಮೆರಿ ಅ.ಪ ಇಷ್ಟಬಂಧು ಸತಿಸುತರೆಲ್ಲ ನೀನು ಬಿಟ್ಟು ಹೋಗ್ವಾಗ್ಯಾರು ದಿಕ್ಕಿಲ್ಲ ಎಷ್ಟು ಸಂಪಾದಿಸಿದ ಗಳಿಕೆಲ್ಲ ನೀನು ಕಟ್ಟಿಕೊಂಡು ಸಂಗಡೊಯ್ಯೋಣಿಲ್ಲ ಕುಟ್ಟಿ ಯಮದೂತರು ಕಟ್ಟಿ ಎಳೆಯುವಾಗ ನೀ ಗಟ್ಟಿ ಮಾಡಿದ್ದು ಎಲ್ಲ ಬಟ್ಟಬೈಲೆ 1 ಯಾರು ಮೆಚ್ಚಿದರು ಫಲವಿಲ್ಲ ನಿನ ಗ್ಯಾರು ಮುನಿದರೇನು ಕೆಡುಕಿಲ್ಲ ನೀರಮೇಲಿನ ಲಿಪಿಯಂತೆಲ್ಲಜಗ ಸಾರ ಸುಳ್ಳು ಖರೆವೊಂದಿಲ್ಲ ತೋರುವ ಬಿಸಿಲಿನ ವಾರಿಯಂತೆ ಮಾಯಾ ಕಾರ ತಿಳಕೋ ತೋರುವುದೆಲ್ಲ 2 ಬಂದಿ ಇಲ್ಲಿಗೆ ಬಹಳ ಲಗುಮಾಡಿ ಮತ್ತೆ ಮುಂದೆ ಹೋಗುವುದೆಲ್ಲಿ ತಿಳಿ ಮಂದನಾಗದೆ ಚಾಚಿ ಜ್ಞಾನಕುಡಿ ಅಲ್ಲಿ ನಿಂದು ನೋಡು ನಿಜ ಹುಡುಕಾಡಿ ಇಂದಿನ ಸಮಯವು ಮುಂದೆ ಸಿಗುವುದೇನೋ ತಂದೆ ಶ್ರೀರಾಮಪಾದಕ್ಹೊಂದಿ ಮುಕ್ತಿಯ ಪಡಿ3
--------------
ರಾಮದಾಸರು