ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಮಪಿತ ಪದಸರಸಿರುಹ ಭೃಂಗ ಭಂಗ ಪ ದಾಕ್ಷಾಯಿಣೀಪತೇ ಬಾಗಿ ವಿಜ್ಞಾಪಿಸುವೆ ದಾಕ್ಷಿಣ್ಯ ಲವಲೇಶವಿಲ್ಲವೊ ನನಗೆ ಸಾಕ್ಷಿಯೇಸು ಕೊಡಲಿದಕೆ ಬ್ರಹ್ಮನ ಶಿರ ತರಿದೆ ಸಾಕ್ಷಾತು ಪಿತನೆಂಬುದ ನೀ ಲಕ್ಷ್ಯವಿಡದೆ 1 ಸ್ಮರ ನಿನ್ನ ಕಿರಿತಂದೆ ಅಕ್ಷಿತೆರದೀಕ್ಷಿಸವನ ಬಿಡದೆ ದಹಿಸಿನಿಂದೆ ದಕ್ಷ ನಿನಗೇನಾಗಬೇಕು ತಿಳಿದು ನೋಡೊ ತಕ್ಷಣದಲವನನೆತ್ತಿ ಹರಿಗಡಿದೆ ನೀನು 2 ಪಾಪಯೇಸು ಮಾಡಿದರೆಯು ಭಯವೇನು ನಿನಗೆ ಶ್ರೀಪತಿ ರಂಗೇಶವಿಠಲಗೆ ಸರ್ವವರ್ಪಿಸಿ ತಾಪತ್ರಯ ದೂರ ವಿರಾಗಿಯಾಗಿ ಮನಸ್ಸು ನಿ- ಪರಿ ಮನಸ ಕೊಡು ಗುರುವೆ 3
--------------
ರಂಗೇಶವಿಠಲದಾಸರು
ನನ್ನ ಕರ್ಮವು ಬಂದು ಇನ್ನು ಬಾಧಿಸುತಿರೆ ಅನ್ಯರೇನ ಮಾಡುವರೈ ಪ ಕನ್ನೆ ಶಿರೋಮಣಿ ದ್ರೌಪತಿ ವರದನೆ ಎನ್ನ ಪಾಲಿಸೊವೋ ಪ್ರಸನ್ನ ರಂಗನಾಥ ಅ.ಪ ಭಿಕ್ಷಕ್ಕೆ ಬಂದಾಗ ಲಕ್ಷ್ಯವಿಡದೆ ಹೋಗಿ ಸಾಕ್ಷಿಯ ನಾಕಂಡೆನೈ ಪಕ್ಷಿ ವಾಹನನೆ ನೀರಕ್ಷಿಸಬೇಕಯ್ಯ ಸಾಕ್ಷಾತನೆಂತೆಂಬೊ ಮೋಕ್ಷಾಧಿಕಾರಿಯೆ 1 ದೋಷಕ್ಕೆ ಗುರಿಯಾದೆನೈ ಆಶೆಯ ಬಿಡಿಸಯ್ಯಾ ಶ್ರೀ ವೆಂಕಟರಮಣ ದೋಷರಹಿತ ಗುರುವು ದಾಸ ತುಲಸೀರಾಮ 2
--------------
ಚನ್ನಪಟ್ಟಣದ ಅಹೋಬಲದಾಸರು