ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾಲಗೋಪಾಲ ಬಲುಜಾಣನೆ ಗೋಪಮ್ಮ ನೀಲ ಮೇಘಶ್ಯಾಮನೆ ಬಹುಶೂರನೇ ಜಾರನೇಚೋರನೇ ಪ ನಾರಿಯರೆಲ್ಲರು ನೀರ ತರುತಲಿರೆ ನೀರ ಕೊಡವನೆಲ್ಲ ಒಡೆದ ಗೋಪಮ್ಮ 1 ಸಣ್ಣ ಸಣ್ಣ ಹುಡುಗರ ಬಣ್ಣಿಸಿ ಕರೆತಂದು ಕಣ್ಣ ಬಿಡಿರೆನುತಲೆ ಸುಣ್ಣ ತೊಡೆದು ಪೋದ 2 ಅಂಗನೆಯರು ಪುಣ್ಯಗಂಗೆ ಮೀಯುತಲಿರೆ ರಂಗನಾಗ ದಿವ್ಯಾಂಗ ವಸ್ತುವ ನೊಯ್ದ ಗೋಪಮ್ಮ 3 ದಡದ ಮರವನೇರಿ ಉಡುವ ಸೀರೆಯನೆಲ್ಲ ಕೊಡದೆ ಕಾಡಿದ ಕೃಷ್ಣ ಮಾನ ಭಂಗವ ಮಾಡಿ 4 ತಾಳಲಾರೆವು ನಿಮ್ಮ ಮಗನ ಲೂಟಿಯ ನಾವು ಹೇಳೆ ಭೀಮನ ಕೋಣೆ ಲಕ್ಷ್ಮೀಲೋಲನಿಗೊಮ್ಮೆ ಗೋಪಮ್ಮ 5
--------------
ಕವಿ ಪರಮದೇವದಾಸರು