ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೆಟ್ಟಿತು ಕಾಲಗತಿಯು ದುರ್ಜನರಟ್ಟಳಿಯಲಿ ಜಗತಿ ಹೊಟ್ಟು ಬೇವಂದದಿ ಬೇಯುತಲಿದೆ ವರ್ಮ ಬಿಟ್ಟು ಕೆಡಿಸುವರು ಸಾದುಸಜ್ಜನರು ಪ ಊರು ಕೇರಿ ಕೇರಿಗಳೊಳಗೆ ಒಳಿತುಣಲಾರು ಸೈರಿಸಹರು ವಿಚಾರವನೆಣಿಸುತಹರು ದುರ್ಜನರು 1 ಒಳಗು ಹೊರಗು ಹುಳುಕನರಸುತ ಕಾಣದೆ ಕಳವಳಿಸಿ ಮುದಿಗೂಬೆಯಂತಿಹರು 2 ಮನ ಮುನಿಸುಗಳಿಂದ ಸಜ್ಜನರನು ದನಿಗಳ ಮುಖದಿಂದ ವಾಯುಸುತನ ಕೋಣೆಯಲಕ್ಷ್ಮೀರಮಣನೇ ಬಲ್ಲ 3
--------------
ಕವಿ ಪರಮದೇವದಾಸರು
ಮಾಯೆಎನ್ನ ಕಾಯವನ್ನುಪಾಯದಿಂದ ಮೋಹಿಸಿ |ಬಾಯ ಮುಚ್ಚಿ ಕೊಲ್ಲುತಿಹಳು ಕಾಯೊ ಲಕ್ಷ್ಮೀರಮಣನೆ ಪಮಾತೆ-ಪಿತರ ವಿಷಯದಿಂದ ಶ್ವೇತಬಿಂದು ಬೀಳಲಾಗಿ |ಕೀತ ತತ್ತಿ ಬಲಿದು ಮಾಸಚೀಲದೊಳಗೆ ಬೆಳೆದೆನು ||ರಕ್ತಗೂಡಿ ಬಸಿರೊಳೊಂಬತ್ತು ತಿಂಗಳಿದ್ದೆ ನಾನು |ಸತ್ತು ಮತ್ತೆ ಹುಟ್ಟ ಹೋಗಲಾರೆ ಲಕ್ಷ್ಮೀರಮಣನೆ 1ಎಲವು ಕಂಬಮಾಡಿ ನರದ ಬಳ್ಳಿಯಲ್ಲಿ ಬಿಗಿದು ಬಿಗಿದು |ಒಳಗೆ ರಕ್ತದಿಂದ ಮೆತ್ತಿ ಹೊಸೆ ಪಾಪದಿಂದ ನಿಂದೆ ||ನೆಲೆಯ ಮನೆಯ ಮಾಡಿ ಚರ್ಮಹೊಲಿzಯ ಹೊದಿಕೆ ಹೊದಿಸಿದಂಥ |ಹೊಲೆಯ ಗೂಡಿನಲ್ಲಿ ಜನಿಸಲಾರೆ ಲಕ್ಷ್ಮೀರಮಣನೆ 2ಎನ್ನ ಸತಿಯು ಎನ್ನ ಸುತರು ಎನ್ನ ಬಂಧು - ಬಳಗವು |ಎನ್ನ ಸಾಕಿ ಸಲಹು ಎಂದು ಹರಿದು ತಿಂಬರು ||ಎನ್ನ ತನುವ ಜವನು ಬಂದು ಎಳೆದುಕೊಂಡು ಒಯ್ಯುವಾಗ |ಬೆನ್ನಬಪ್ಪರಾರ ಕಾಣೆ ಚೆನ್ನ ಲಕ್ಷ್ಮೀರಮಣನೇ 3ಇರುವೆ ಮೊದಲು ಆನೆ ಕಡೆಯು ಬಸಿರೊಳು ಬಂದೆ ನಾ |ಹರಿದು ಪಾಪಕರ್ಮದಿಂದೆ ತೊಪಳಲಿಬಳಲಿ ನೊಂದೆ ನಾ ||ಬಿರುಗಾಳಿಗೆ ಸಿಕ್ಕ ಮರದ ತರಗೆಲೆಯಂತುದುರಿ ನಾ |ಮರಳಿ ಮರಳಿ ಸತ್ತು ಹುಟ್ಟಲಾರೆ ಲಕ್ಷ್ಮೀರಮಣನೆ 4ಲಕ್ಷ ಜೀವರಾಶಿಗಳನು ಕುಕ್ಷಿಯೊಳಗೆ ಇರಿಸಿ ನಿನ್ನ |ಅಕ್ಷಯ- ಅನಂತ ನನ್ನನೇಕೆ ಹೊರಗೆ ಮಾಡಿದೆ ||ಈಕ್ಷಿಸುತಿರು ಎನ್ನ ನೀನು ಕುಕ್ಷಿಯೊಳಗೆ ಇಂಬನಿತ್ತು |ರಕ್ಷಿಸಯ್ಯ ಲಕ್ಷೀಪತಿಪುರಂದರವಿಠಲನೆ5
--------------
ಪುರಂದರದಾಸರು