ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಂಬಿದೆನು ಚರಣಗಳ ಪಾಲಿಸೈ ಹರಿಯೇ ನಂಬಿದೆನು ಶ್ರೀ ಚನ್ನಕೇಶವನೆ ದೊರಿಯೇ ಪ ಸರಳೆ ದ್ರೌಪದಿಯಂತೆ ಕರಿರಾಜ ಧೃವರಂತೆ ದುರುಳ ಕನಕಾಸುರನ ನಿಜತನುಜನಂತೇ ಖಗರಾಜ ಕಪಿಯಂತೆ ವರತತ್ತ್ವ ಭೋಧಿಸಿದ ಯತಿಗಣಗಳಂತೇ 1 ಗೌತುಮನ ಸತಿಯಂತೆ ಯಾದವರ ಪಡೆಯಂತೆ ಭೂತಳದಿ ಪೆಸರಾದ ಹರಿದಾಸರಂತೇ ಕೋತಿ ಜಾಂಬವನಂತೆ ಅಮರೇಶ ಸುತನಂತೆ ಆತುರದಿ ನಂಬಿರುವ ಶ್ರೀ ಲಕ್ಷ್ಮೀಯಂತೆ 2 ನಾನಿತ್ತ ಪೂಜೆಯಿಂ ನಾಗೈದ ಭಜನೆಯಿಂ ನಾನಿಂದು ಮಾಡಿದಾ ಹರಿಸ್ಮರಣೆಯಿಂದ ನೀನೊಲಿದೆಯಿಂತೆಂದು ದೃಢವಾಗಿ ನಂಬಿದೆನು ಹೀನನನು ಸಲಹಯ್ಯ ಸ್ವಾಮಿ ಕೇಶವನೇ 3
--------------
ಕರ್ಕಿ ಕೇಶವದಾಸ