ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೇಳು ಕೋಪಿಸಬೇಡ ಹೇಳಲಿಕಂಜುವೆಬಾಳು ಬಡತನವ ನಾನು ಪ.ತಲೆಗೊಯ್ಕ ಹಿರಿಯ ಮಗ ಇಳೆಗೆ ಪೂಜಿತನಲ್ಲಬಲು ಭಂಡ ನಿನ್ನಯ ಕಿರಿಯ ಮಗ ||ಲಲನೆಯು ಸೇರಿದಳು ಬಲು ಲೋಭಿಗಳ ಮನೆಯಹೊಲಕುಲವರಿಯಳು ನಿನ್ನ ಸೊಸೆಯು ರಂಗ 1ಮಗಳ ಮಾರ್ಗವುಡೊಂಕು | ಮೈದುನ ಗುರುದ್ರೋಹಿಮಗನ ಮಗನು ಚಾಡಿಗಾರಹಗರಣಕೆ ನೀಚರ ಹಣ್ಣು ಮೆದ್ದೆಂಜಲಜಗದೊಡೆಯನೆನಿಸಿಕೊಂಡೆ - ನೀನುಂಡೆ 2ಲಕ್ಷ್ಮೀಪತಿಯು ಎನಿಸಿಭಿಕ್ಷೆ ಬೇಡಲು ಪೋದೆಪಕ್ಷಿಯ ಪೆಗಲೇರಿ ರಾಜನೆನಿಸಿದೆ ||ಸಾಕ್ಷಾತು ಪುರಂದರವಿಠಲನೆ ನಿನ್ನಗುಣಲಕ್ಷಣ ಪೇಳಲಳವೆ - ಕಳೆವೆ 3
--------------
ಪುರಂದರದಾಸರು
ಗರುಡಗಮನಬಂದನೋ-ನೋಡಿರೊ ಬೇಗಗರುಡಗಮನಬಂದನೋಪಗರುಡಗಮನಬಂದ ಧರಣಿಯಿಂದೊಪ್ಪುತಕರೆದು ಬಾರೆನ್ನುತ ವರಗಳ ಬೀರುತ ಅ.ಪಎನ್ನ ರಕ್ಷಿಪ ದೊರೆ ಇಲ್ಲಿಗೆ ತಾ ಬಂದಚಿನ್ನದೊಲ್ ಪೊಳೆವವಿಹಂಗರಥದಲಿ ||ಘನ್ನ ಮಹಿಮ ಬಂದsಚ್ಛಿನ್ನ ಮೂರುತಿ ಬಂದಸಣ್ಣ ಕೃಷ್ಣನು ಬಂದ ಬೆಣ್ಣೆಗಳ್ಳನು ಬಂದ 1ಪಕ್ಷಿವಾಹನ ಬಂದ ಲಕ್ಷ್ಮೀಪತಿಯು ಬಂದಕುಕ್ಷಿಯೊಳೀರೇಳು ಜಗವನಿಟ್ಟವ ಬಂದ ||ಸೂಕ್ಷ್ಮ-ಸ್ಥೂಲದೊಳಗಿರುವನು ತಾ ಬಂದಸಾಕ್ಷೀ ಭೂತನಾದ ಸರ್ವೇಶ್ವರ ಬಂದ 2ತಂದೆಪುರಂದರವಿಠಲರಾಯ ಬಂದಬಂದುನಿಂದುನಲಿದಾಡುತಿಹ ||ಅಂದು ಸಾಂದೀಪನ ನಂದನನ ತಂದಿತ್ತಸಿಂಧುಶಯನ ಆನಂದ ಮೂರುತಿ ಬಂದ3
--------------
ಪುರಂದರದಾಸರು