ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಅ) ಶ್ರೀಹರಿಸ್ತುತಿಗಳು ಏಳಯ್ಯ ಕಾರುಣ್ಯನಿಧಿ ಕಮಲದಳ ನೇತ್ರ ಏಳಯ್ಯ ಪರಮ ಪಾವನ ಮುನಿಜನ ಸ್ತೋತ್ರ ಪ ಏಳಯ್ಯ ಕರಿರಾಜವರದ ವಿಜಯಮಿತ್ರ ಏಳು ದೇವಕಿಯ ಪುತ್ರ ಅ.ಪ ಏಳು ಹರಿರಥ ಶತಕೋಟಿ ಪ್ರಕಾಶನೇ ಏಳೆರಡು ಲೋಕಗಳು ಉದರದಲಿ ಧರಿಸಿದನೇ ಏಳು ಗೂಳಿಯಕಟ್ಟಿ ಕಾಂತೆಯನು ವರಿಸಿದನೇ ಏಳು ಮುನಿನುತ ವಂದ್ಯನೇ ಸ್ವಾಮಿ 1 ಏಳು...(?)ಗಳೊಳು ಗಂಗೆಯನು ಪಾದದಲಿ ಪಡೆದೇ ಏಳು ಪೆಡೆಯವನ ಮಡುಹಿನಲಿ ದೊತ್ತಳದುಳಿದೇ ಏಳುತ್ತ ನಿಮ್ಮ ನಾಮವನೊಮ್ಮಗೆ ನಡದೇ ಏಳು ಜನ್ಮದ ಭವಹರಾ ಸ್ವಾಮಿ 2 ಏಳು ಜಿಹ್ವೆಯನುಳ್ಳವನ ಮುಖವಾದೆ ಮ ತ್ತೇಳ್ಮೂರು ಸೂಳಿನಲಿ ಕ್ಷತ್ರಿಯರ ಮರ್ದಿಸಿದೇ ಏಳು ತಾಳೆಗಳನೊಂದಂಬಿನಲಿ ಛೇದಿಸಿದೇ ಏಳು ಸಮರನ ಕೊಲಿಸಿದೇ ಸ್ವಾಮಿ 3 ಏಳು ಶರಧಿಯಲಿ ಪಾಲ್ಗಡಲಲ್ಲಿ ಪವಡಿಸಿದೆ ಏಳು ವ್ಯೂಹದಲಿ ಪಾರ್ಥನ ನುಡಿಯ ಪಾಲಿಸಿದೆ ಏಳು ದಿಕ್ಪಾಲಕರು ನಿನ್ನ ಪೊಗಳುತಲಿಹರೇ ಏಳು ದ್ವೀಪಕ್ಕೊಡೆಯನೇ ಸ್ವಾಮಿ 4 ಏಳು ಶಕ್ತಿದೇವತೆಯರೂಳಿಗವ ಕೇಳಿ ಹರಿ ದೇಳೆರಡು ಲೋಕ ಹರಿ ತಾನಲ್ಲದಿಲ್ಲೆಂಬ ಏಳಿಗೆಯ ಹಮ್ಮಿನೊಳಿದ್ದ ದಶಕಂಧರನ ಏಳಿಸಿದೆ ಸುರಲೋಕಕೇ ಸ್ವಾಮಿ 5 ಏಳು ಸ್ವರ ಮುಟ್ಟಿ ತುಂಬುರುನಾರದರು ಬಳಿ ಕೇಳು ತಾಳಂಗಳಲಿ ನಿನ್ನ ಪೊಗಳುತಲಿಹರೇ ಏಳುನಗರಕ್ಕಧಿಪವೆನಿಪ ಸುರಪುರವಾಸ ಏಳು ಲಕ್ಷ್ಮೀನಿವಾಸ ಸ್ವಾಮಿ 6
--------------
ಕವಿ ಲಕ್ಷ್ಮೀಶ
ಬಾ ದೀನವತ್ಸಲ ಲಕ್ಷ್ಮೀನಿವಾಸ ಶ್ರೀವೆಂಕಟೇಶ ಮಾಧವ ಮಧುರಿಪು ಮಾನುಷವೇಷ ಶರಣಾಗತಪೋಷಪ. ವೇದಾಗಮ್ಯ ದಯೋದಧಿ ಗೈದಪ- ರಾಧ ಕ್ಷಮಿಸಿ ಸುಗುಣೋದಯನಾಗುತಅ.ಪ. ಅನಾಥ ಜನರ ಕಾಮಧೇನು ಕಾಯೊ ಎಮ್ಮನು ದಾನವಕಾನನಕಲ್ಪಕೃಶಾನು ಸರ್ವೋತ್ತಮ ನೀನು ಆನತಜನ ಸುತ್ರಾಣಿಸುವಂತೆ ಪ್ರ- ದಾನಿಯಂತೆ ಶತಭಾನು ಪ್ರಕಾಶದಿ1 ಕೋಟಿ ಬ್ರಹ್ಮಾಂಡವ ಕಾಯುವ ಮಹಿಮ ಸದ್ಗುಣಗಣಧಾಮ ಹಾಟಕವಸನ ಕೈರವಶ್ಯಾಮ ಮುನಿಮನವಿಶ್ರಾಮ ಕಾಟಕ ಮನಸಿನ ಮಾಟವ ನಿಲ್ಲಿಸಿ ಘೋಟಕಾಸ್ಯ ನರನಾಟಕಧಾರಿ2 ಸೇನಾನಾಯಕನಿಲ್ಲದ ಸೇನೆ ಕಂಡರೆ ತಾನೆ ಭೂನಾಥಗಿಲ್ಲವೇನು ಬೇನೆ ಉಂಟೆಂಬುದು ನೀನೆ ಕಾಣಿಸದೆಮ್ಮಲಿ ಮೌನವ ಮಾಳ್ಪರೆ ದೀನಜನರ ದುಮ್ಮಾನಗೊಳಿಸುವರೆ 3 ಹಿಂದೆಮ್ಮ ಕಾಯ್ದವ ನೀನೆ ಹರಿ ಸುರನರ ಕೈವಾರಿ ಮಂದಜ್ಞಾನಿಗಳ ತಪ್ಪನು ಮಾರಿ ಮೂರ್ಲೋಕೋದ್ಧಾರಿ ಹೊಂದಿದವರಿಗೆಂದೆಂದಿಗು ಬಿಡನೆಂ- ಬಂದವ ತೋರಿ ಆನಂದವ ಬೀರುತ 4 ಸರ್ಪಾದ್ರಿಯಿಂದ ಓಡಿಬಂದ ಕಾರ್ಕಳದೊಳು ನಿಂದ ಚಪ್ಪರ ಶ್ರೀನಿವಾಸ ಮುಕುಂದ ಪರಿಪೂರ್ಣಾನಂದ ಒಪ್ಪಿಸಿದೆಮ್ಮಭಿಪ್ರಾಯವ ತಿ- ಮ್ಮಪ್ಪ ಲಕ್ಷ್ಮೀನಾರಾಯಣ ಸಲಿಸಲು 5
--------------
ತುಪಾಕಿ ವೆಂಕಟರಮಣಾಚಾರ್ಯ
ಶ್ರೀನಿವಾಸನೆ ನಿನ್ನ | ವರ್ಣಿಸಲು ಅಳವೇ ಮಾನನಿಧಿ ಗುಣಪೂರ್ಣ | ನಿನ್ನಂಘ್ರಿ ಭಜಿಪರ ಬನ್ನ ಪ. ವೈನತೇಯನ ವರೂಥ ನಾನಾ ಹಾರ ಪದಕದಿ ಮೆರೆವ ಸುಂದರ ಕಾಮಪೂರ್ಣ ಮುಖಾರವಿಂದನ ನೀ ಮನದಿ ತೋರುತ್ತ ಪೊರೆಯೊ ಅ.ಪ. ಶೇಷಪರ್ವತವಾಸ | ಭಕ್ತರನು ಸಲಹೋ ಈ ಕ್ಷಿತಿತ್ರಯಕೀಶ ಪೋಷಿಸುವೋ ಭಕ್ತರವಾಸಿ ನಿನ್ನದೊ ಶ್ರೀಶ ಲಕ್ಷ್ಮೀನಿವಾಸ ದೋಷದೂರನೆ ಎನ್ನ ಅವಗುಣ ದೋಷಗಳನೆಣಿಸದಲೆ ಸಲಹೊ ಶೇಷವರ ಪರ್ಯಂಕಶಯನ ವಿ- ಭೀಷಣ ಪ್ರಿಯ ಭೀಷ್ಮವರದ1 ಮಾಘ ಸಪ್ತಮಿ ಕುಂಭ | ಸಂಕ್ರಮಣ ದಿವ್ಯ ಯೋಗ ಶುಕ್ಲದಿ ಎಂಬ | ಸ್ಥಿರವಾರದಲ್ಲಿ ಆಗ ರಥದಲ್ಲಿ ಬಿಂಬ | ಭಕುತರಿಗೆ ಕಾಂಬ ಜಾಗು ಮಾಡದೆ ಸೂರ್ಯಮಂಡಲ ಬೇಗ ಬಿಗಿದಿಹ ಸಪ್ತ ಹಯಗಳ ಬಾಗಿ ಭಜಿಸಲು ಭಕ್ತವರ್ಗವು ನೀ ಜಗದಿ ಮೆರೆಯುತ್ತ ಪೊರೆದೆ 2 ವಿೂನನಾಗಿ ಮತ್ತೆ ವೇದವನೆ | ತಂದು ಆ ನಳಿನಭವಗಿತ್ತೆ ಅಲ್ಲಿಂದ ಸುರರಿಗೆ ಪ್ರಾಣದಾನವನಿತ್ತೆ ಮೇದಿನಿಯ ಪೊತ್ತೆ ನಾನೆ ಜಗಕೆಂಬ ದಾನವನ ಕೊಂದು ದಾನ ಬೇಡಿ ಭೂಮಿ ಅಳೆದು ಮಾನಿನಿ ಶಿರ ತರಿದು ಸೀತಾ ಮಾನಿನಿಗೆ ಅಂಬುಧಿಯ ಬಿಗಿದೆ 3 ಮಾನಿನಿಯರಿಗೆ ಕಾಣದೆ | ಬೆಣ್ಣೆಯನು ಕದ್ದು ಮಾನವೆಲ್ಲವ ಕಳೆದೆ ಅಲ್ಲಿಂದ ಮುಂದೆ ಮಾನವ ಬಿಟ್ಟು ನಿಂದೆ ಏನ ಹೇಳಲಿ ಹಯವನೇರಿ ದಾನವರ ಸಂಹರಿಸಿ ಮೆರೆದೆ ನಾನಾ ರೂಪ ನಾಟಕಧರ ನೀನೀ ಪರ್ವತದಲಿ ನಿಂದಿಹೆ 4 ದೇಹವ್ಯಾಪ್ತಕ ನೀನೆ | ದೇಹಗಳ ಕೊಟ್ಟು ಮೋಹಗೊಳಿಸುವ ನೀನೆ ದೇಹಸ್ಥನಾಗಿ ತೋರುವ ಬಿಂಬ ನೀನೆ | ಜೀವಾಕಾರನೆ ಈ ಹದನ ಎನಗಿನ್ನು ತಿಳಿಯದೊ ಮೋಹ ಹರಿಸಿ ಸುಜ್ಞಾನ ನೀಡೊ ಸ್ನೇಹ ಗೋಪಾಲಕೃಷ್ಣವಿಠ್ಠಲ ಶ್ರೀ ಹರಿಯೆ ಹೃದಯದಲಿ ನಿಲಿಸೊ 5
--------------
ಅಂಬಾಬಾಯಿ
ಬಾ ದೀನವತ್ಸಲ ಲಕ್ಷ್ಮೀನಿವಾಸ ಶ್ರೀವೆಂಕಟೇಶಮಾಧವಮಧುರಿಪು ಮಾನುಷವೇಷ ಶರಣಾಗತಪೋಷಪ.ವೇದಾಗಮ್ಯ ದಯೋದಧಿ ಗೈದಪ-ರಾಧ ಕ್ಷಮಿಸಿ ಸುಗುಣೋದಯನಾಗುತ ಅ.ಪ.ಅನಾಥ ಜನರ ಕಾಮಧೇನು ಕಾಯೊ ಎಮ್ಮನುದಾನವಕಾನನಕಲ್ಪಕೃಶಾನು ಸರ್ವೋತ್ತಮ ನೀನುಆನತಜನ ಸುತ್ರಾಣಿಸುವಂತೆ ಪ್ರ-ದಾನಿಯಂತೆ ಶತಭಾನು ಪ್ರಕಾಶದಿ 1ಕೋಟಿ ಬ್ರಹ್ಮಾಂಡವ ಕಾಯುವ ಮಹಿಮ ಸದ್ಗುಣಗಣಧಾಮಹಾಟಕವಸನ ಕೈರವಶ್ಯಾಮ ಮುನಿಮನವಿಶ್ರಾಮಕಾಟಕ ಮನಸಿನ ಮಾಟವ ನಿಲ್ಲಿಸಿಘೋಟಕಾಸ್ಯ ನರನಾಟಕಧಾರಿ 2ಸೇನಾನಾಯಕನಿಲ್ಲದ ಸೇನೆ ಕಂಡರೆ ತಾನೆಭೂನಾಥಗಿಲ್ಲವೇನು ಬೇನೆ ಉಂಟೆಂಬುದು ನೀನೆಕಾಣಿಸದೆಮ್ಮಲಿ ಮೌನವ ಮಾಳ್ಪರೆದೀನಜನರ ದುಮ್ಮಾನಗೊಳಿಸುವರೆ 3ಹಿಂದೆಮ್ಮ ಕಾಯ್ದವ ನೀನೆಹರಿಸುರನರ ಕೈವಾರಿಮಂದಜ್ಞಾನಿಗಳ ತಪ್ಪನುಮಾರಿಮೂರ್ಲೋಕೋದ್ಧಾರಿಹೊಂದಿದವರಿಗೆಂದೆಂದಿಗು ಬಿಡನೆಂ-ಬಂದವ ತೋರಿ ಆನಂದವ ಬೀರುತ 4ಸರ್ಪಾದ್ರಿಯಿಂದ ಓಡಿಬಂದ ಕಾರ್ಕಳದೊಳು ನಿಂದಚಪ್ಪರ ಶ್ರೀನಿವಾಸ ಮುಕುಂದ ಪರಿಪೂರ್ಣಾನಂದಒಪ್ಪಿಸಿದೆಮ್ಮಭಿಪ್ರಾಯವ ತಿ-ಮ್ಮಪ್ಪ ಲಕ್ಷ್ಮೀನಾರಾಯಣ ಸಲಿಸಲು 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ