ಪರಮೇಶ್ವರಿ ಪಾರ್ವತಿಸತಿ
ವರದೆ ಶ್ರೀವನದುರ್ಗಾ ಪ.
ತರುಣಾರುಣಶತಕೋಟಿ
ಕರುಣಾನನೆ ಮಾಂ ಪಾಹಿ ಅ.ಪ.
ಜಗದ್ಭರಿತೆ ಜನಾರ್ದನಿ
ಜಗದೇಕ ಶರಣ್ಯೆ
ನಿಗಮಾಗಮಶಿರೋರತುನೆ
ಮಿಗೆ ಕೈಯುಗಮಂ ಮುಗಿವೆಯಗಜೆ ಶ್ರೀಜಗದಂಬಿಕೆ 1
ಸದಾನಂದೆ ಸರೋಜಾಕ್ಷಿ
ಸದಾವಳಿಸನ್ನುತೆ
ತ್ರಿದಶಾರ್ಚಿತೆ ತ್ರಿಗುಣಾತ್ಮಕಿ
ಸದಯೆ ಹೃದಯೆ ಮುದದಿಂ ಪದನಂಬಿದೆ ಪದುಮಾಲಯೆ2
ವಿರಾಜಿಸುವ ವಿಶ್ವೋತ್ತಮ
ವರಚಿತ್ರಪುರೇಶ್ವರಿ
ಹರಿಲಕ್ಷ್ಮೀನಾರಾಯಣಿ
ಕರುಣಾಭರಣೆ ಶರಣೋದ್ಧರಣೆ ಶ್ರೀಚರಣಾಂಬುಜೆ3