ಮಂಗಲಾರತಿಯ ಪಾಡಿರೇ | ರಂಗನಾಥರುಕ್ಮಿಣೀಗೆ ಪ
ಸಿಂಧು ಸುತೆಗೇ | ಸೀತಾರಾಮಚಂದ್ರಗೇ | ಉಪೇಂದ್ರಗೇ ಅ.ಪ
ಮತ್ಸ್ಯ ಕೂರ್ಮವರಹಾವತಾರಗೇ
ಕರುಳ ಮಾಲೆಧರಿಸಿದಾ ಲಕ್ಷ್ಮಿನಾರಸಿಂಹಗೇ 1
ಬಲಿಯ ದಾನವನ್ನೇ ಬೇಡಿ ಮಾತೆ ಶಿರವನಳಿದವಗೇ
ಜಗವತೋರ್ದವಗೇ 2
ಬೆತ್ತಲಾಗಿ ನಿಂತಿದ್ದ ಉತ್ತಮ ಬೌದ್ಧ ಕಲ್ಕಿಗೇ
ಸೃಷ್ಟಿಗೊಡೆಯ ಬಳ್ಳಾರಿ ಲಕ್ಷ್ಮೀನಾರಸಿಂಹವಿಠಲಗೇ 3