ರಕ್ಷಿಸೊ ಜಾನಕಿ ಕಾಂತ ಶಾಂತ ಪ
ತಕ್ಷಣದಲಿ ಉಪೇಕ್ಷೆಯ ಮಾಡದೆ ಅ.ಪ
ದಕ್ಷ ನಾನಲ್ಲವೊ ಪೊಗಳಲು ಶಾಸ್ತ್ರ ವಿ
ಚಕ್ಷಣೆಯರಿಯೆನೋ ಲಕ್ಷ್ಮೀನಾಥ1
ಸಂತತಪಡುತಿಹ ಚಿಂತೆಯ ಬಿಡುತಲಿ
ಶಾಂತಿಯ ಪೊಂದುವ ತಂತ್ರವ ತೋರುತ 2
ಬೇಡುವ ವಿಧದಲಿ ರೂಢಿಯಿಲ್ಲದೆ ಬಲು
ಪಾಡುಪಡುತಿಹೆನೋ ನೀಡುತ ಕರವನು 3
ಕ್ಷೀಣಿಸೆ ಉರುತರ ತಪಗಳಿಂ ತನುವನು
ತ್ರಾಣವಿಲ್ಲವೋ ರಮಾಪ್ರಾಣನಾಥನೆ 4
ಕೆಟ್ಟಯೋಚನೆ ಎನ್ನ ಮುಟ್ಟದೆ ಮನವನು
ಘಟ್ಟಿಯ ಮಾಡುತ ಶಿಷ್ಟ ಪ್ರಸನ್ನನೇ 5