ಪರಬೊಮ್ಮನ ಧ್ಯಾನಿಸು ಕಂಡ್ಯಾ
ಸೋಹಂ ಎನುತಿರಕಂಡ್ಯಾ ಪ
ಒಂದು ನಿಮಿಷ ಸುಖವಿಲ್ಲ
ವಿಧಿ ಏಳೇಳೆಂದು ಎಳೆವರಲ್ಲ
ಗೋವಿಂದನೆ ತಾ ಬಲ್ಲ 1
ಯೋನಿಯೊಳಗೆ ಜನಿಸಿ
ನಾನದನೆಲ್ಲವ ನುಳಿದು ಈಗಳು ನರಮಾನವನೆಂದೆನಿಸಿ
ಏನೋ ಪುಣ್ಯದಿ ಪುಟ್ಟಿದೆ ನಿಲ್ಲಿ ನಿಧಾನದಿ ಸಂಚರಿಸಿ
ಆನಂದ ಮಯನೆನಿಸಿ 2
ಎಲ್ಲಾ ಜನ್ಮದೊಳ್ಳಿತು ನೀನಿದರಲ್ಲಿ ಸಾಧಿಸುಗತಿಯಾ
ಹೊಲ್ಲದ ತನುವಿದ ನಂಬಿ ನೀ ಕೆಡದಿರು ಪೊಳ್ಳೆ ನಿನಗೆ ತಿಳಿಯ
ಬಲ್ಲಡೆ ಜಿಹ್ವೆಯೊಳಗೆ ನೀ ನಿರಂತರ ಸೊಲ್ಲಿಸು ಶ್ರೀಹರಿಯ
ಲಕ್ಷ್ಮೀನಲ್ಲನ ಪೋಗು ಮರೆಯ 3